ವರದಿ: ಎನ್.ಎನ್.
ಕ್ರಾಂತಿ ವಾಣಿ ವಾರ್ತೆ ಸುರಪುರ: ಸಾಹಿತಿ ಎ. ಕಮಾಲಕರ ಅವರ ‘ಕಗ್ಗ’ ಚೊಚ್ಚಲ ಕವನ ಸಂಕಲನವೂ ಓದುಗರ ಭಾವತಕ್ಕೆ ತಕ್ಕಂತ ಅರ್ಥವಾಗುತ್ತದೆ. ಸಾಹಿತಿಗಳು ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡುವ ಜವಾಬ್ದಾರಿ ಎಂದು ಜಾನಪದ ಪರಿಷತ್ ಅಧ್ಯಕ್ಷ ಶರಣಗೌಡ ಪಾಟೀಲ ಜೈನಾಪುರ ಹೇಳಿದರು.
ನಗರದ ಹಳೆಬಸ್ ನಿಲ್ದಾಣದ ಮೋಹನಲಾಲ್ ಹತ್ತಿರದ ಶ್ರೀ ಪರಾಂಕುಶ ಸ್ವಾಮಿಗಳ ಮಠದಲ್ಲಿ ಕಗ್ಗ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಗ್ಗ ಕವನ ಸಂಕಲನವೂ ಆದರ್ಶ ನೀತಿ ತತ್ವಗಳೊಡನೆ ಸಂವಾದಿಸುತ್ತದೆ. ಕಗ್ಗ ಎನ್ನುವ ಪದಕ್ಕೆ ಖಡ್ಗ ಎನ್ನುವ ಅರ್ಥ ಇದ್ದಿತೆಂಬುದಾಗಿ ಭಾಸವಾಗುತ್ತದೆ ಎಂದರು.
ಹೈಕೋರ್ಟ್ ವಕೀಲ ಜೆ. ಆಗಸ್ಟಿನ್ ಮಾತನಾಡಿ, ಕಗ್ಗ ಕವನ ಸಂಕಲನವೂ ಸಮಾಜದ ಹಲವಾರು ಸಂಗತಿಗಳನ್ನು ಹೊರಹೆಕ್ಕಿದೆ. ಹಿರಿಯ ಸಾಹಿತಿ ದಿ. ಎ. ಕೃಷ್ಣಪ್ಪನವರ ಪುತ್ರ ಸಾಹಿತ್ಯದ ಕೃಷಿ ಮಾಡುತ್ತಿರುವುದು ಹೆಮ್ಮೆಯಾಗಿದೆ. ಸಾಹಿತ್ಯ ಹಲವಾರು ಮಗ್ಗಲುಗಳನ್ನು ನೋಡಿರುವ ಸಾಹಿತಿ ಕಮಾಲಕರ ಅವರಿಂದ ಹೆಚ್ಚಿನ ಪುಸ್ತಕಗಳನ್ನು ನಿರೀಕ್ಷಿಸುತ್ತಿದ್ದೇವೆ. ಕಗ್ಗ ಸಮಾಜಕ್ಕೆ ಉತ್ತಮ ಕೊಡುಗೆಯಾಗಿದೆ ಎಂದು ತಿಳಿಸಿದರು.
ಪ್ರಕಾಶ ಅಂಗಡಿ ಮಾತನಾಡಿ, ಮಾನವೀಯ ನೆಲೆಗಟ್ಟಿನಲ್ಲಿ ಬಹುತೇಕ ಕವಿತೆಗಳು ಹೊರಹೊಮ್ಮಿವೆ. ಓದುಗ ಮಹಾಷಿಯರನ್ನು ಚಿಂತನೆಗೆ ಎಳೆಯುತ್ತದೆ. ಉತ್ತಮ ಕವನ ಸಂಕಲನ ಎಂದು ಅಭಿಪ್ರಾಯ ಪಟ್ಟರು.
ಸರೋಜಮ್ಮ ಪೆರುಮಾಳ್ ಅಧ್ಯಕ್ಷತೆ ವಹಿಸಿದ್ದರು. ಯುವರಾಜ ರಾಜಾ ಪಿಡ್ಡ ನಾಯಕ, ಕೂಡಲಗಿ ಮಠದ ಗಂಗಾಧರ ಜೋಶಿ, ಬಸವರಾಜ ಜಮದ್ರಾಖಾನಿ, ಸುಗೂರೇಶ ವಾರದ, ಶರಣಪ್ಪ ಕಮ್ಮಾರ, ಶಿವಶರಣಯ್ಯ ಬಳ್ಳುಂಡಗಿಮಠ, ಶ್ರೀನಿವಾಸ ಜಾಲವಾದಿ, ಶ್ರೀಹರಿ ಆಧ್ವಾನಿ, ಶಕುಂತಲಾ ಆಚಾರ್ಯ, ಮಹೇಶ ಜಾಗೀರದಾರ, ಮಹಾಂತೇಶ ಶಹಾಪುರಕರ್, ಮೋಹನ ಮಾಳದಕರ, ವೆಂಕಟೇಶ ಪಾಟೀಲ, ಮಲ್ಲಿಕಾರ್ಜುನ ಹುದ್ದಾರ, ಸಜನಕುಮಾರ, ಶರಣು ಭೈರಿಮಡ್ಡಿ, ಸುಗೂರೇಶ ಮಡ್ಡಿ, ದೀಪಕ್ ದಾದ, ಮೃತ್ಯುಂಜಯ ಹಿರೇಮಠ, ಯುಲ್ಲಪ್ಪ ಹುಲಿಕಲ್, ನಿಂಗಣ್ಣ ಚಿಂಚೋಡಿ, ನಬಿಲಾಲ್ ಮಕಾಂದರ, ಲಕ್ಷö್ಮಣ ಗುತ್ತೇದಾರ, ಕುತ್ಬದ್ದೀನ್ ಅಮ್ಮಾಪುರ, ಕಲಬುರಗಿಯ ಭೀಮರಾಯ ಹೆಮನೂರು, ರಾಘವೇಂದ್ರ ಭಕ್ರಿ ಹಾಗೂ ಸಂಗೀತ, ಭರತ ನಾಟ್ಯ ಕಲಾವಿದರು ಪಾಲ್ಗೊಂಡಿದ್ದರು.