ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ಸಾಮಾಜಿಕ ಶೈಕ್ಷಣ ಕ ವರದಿಯ ಅನ್ವಯ ಎಸ್ಸಿ, ಎಸ್ಟಿ ಹೊರತು ಪಡಿಸಿ ೧೩೫೧ ಜಾತಿಗಳಿವೆ. ಇದರಿಂದಾಗಿ ಬಲಾಢ್ಯರು ವಿರೋಧಿಸುತ್ತಿದ್ದು, ಬಲಹೀನ ಜಾತಿಯವರು ಮೌನಕ್ಕೆ ಶರಣಾಗಿದ್ದಾರೆ. ಸಾಮಾಜಿಕ ನ್ಯಾಯ ಪಡೆಯಬೇಕೆಂದರೆ ಕಾಂತರಾಜ ವರದಿ ಜಾರಿಯಾಗಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಹಾಗೂ ಕೆಎಎಸ್ ನಿವೃತ್ತ ಅಧಿಕಾರಿ ಕೆ.ಎನ್. ಲಿಂಗಪ್ಪ ಹೇಳಿದರು.
ನಗರದ ರಂಗಪೇಟೆಯ ಬಾಬು ಜಗಜೀವನ್ ರಾಮ್ ಭವನದಲ್ಲಿ ಅಹಿಂದ ವೇದಿಕೆ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕಾಂತರಾಜ ವರದಿಯು ಪ್ರತಿಯೊಬ್ಬರಿಗೂ ನ್ಯಾಯವನ್ನು ಒದಗಿಸುತ್ತದೆ. ಆ ನಿಟ್ಟಿನಲ್ಲಿ ಮೀಸಲಾತಿಯು ಪ್ರತಿಯೊಬ್ಬರಿಗೂ ಸಿಗಬೇಕೆಂಬುದು ಅದರ ಆಶಯವಾಗಿದೆ. ಕೇವಲ ಬಲಾಢ್ಯ ಎರಡು ಸಮುದಾಯಗಳು ವರದಿಯನ್ನು ವಿರೋಧಿಸುತ್ತಿರುವ ಹಿಂದಿನ ಹುನ್ನಾರವೇನು ಎಂಬುದನ್ನು ಪ್ರತಿಯೊಬ್ಬರು ಅರಿಯುವುದು ಅಗತ್ಯವಾಗಿದೆ ಎಂದರು.
೨೦೧೧ರಲ್ಲಿ ಅಂದಿನ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರು ೨೫೦ ರಿಂದ ೩೦೦ ಕೋಟಿ ರೂ ವೆಚ್ಚದಲ್ಲಿ ಸಾಮಾಜಿಕ ಶೈಕ್ಷಣ ಕ ಜನಗಣತಿಯನ್ನು ಮಾಡಲಾಗಿದೆ. ಸಾಮಾಜಿಕ ಶೈಕ್ಷಣ ಕ ಸಮೀಕ್ಷೆ ಆಗಿ ಎಂಟು ವರ್ಷವಾಗಿದೆ. ಈ ವರದಿಯನ್ನು ಚರ್ಚೆ ಮಾಡದೆ, ಸರಿಯಾಗಿ ಓದಿಕೊಳ್ಳದೆ ವರ್ತಮಾನದ ತುರ್ತುಗಳನ್ನು ಅರ್ಥ ಮಾಡಿಕೊಳ್ಳದೆ ಕೆಲವು ವರ್ಗಗಳು ವಿರೋಧಿಸುತ್ತಿವೆ. ಕೆಲವರು ಜಾತಿಗಣತಿ ವಾಸ್ತವವಾಗಿಲ್ಲ ಎನ್ನುವವರಿದ್ದಾರೆ. ಪ್ರತಿಯೊಂದು ಉತ್ತರ ದೊರೆಯುತ್ತದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರು ಜಾತಿಗಣತಿಗಾಗಿ ಹಣವನ್ನು ಕಾಯ್ದಿರಿಸಿದಂತೆ ಕೇಂದ್ರ ಸರ್ಕಾರವು ಹಣವನ್ನು ಕಾಯ್ದಿರಿಸಿದೆ. ಕರ್ನಾಟಕದಲ್ಲಿ ೨೦೧೩ರಲ್ಲಿ ಸಿದ್ದರಾಮಯ್ಯನವರು ಜಾತಿಗಣತಿ ಮಾಡಲು ಹಿಂದುಳಿದ ವರ್ಗಗಳ ವರ್ಗಗಳನ್ನು ಮಾತ್ರ ಗಣತಿಗೆ ಸೂಚಿಸುತ್ತದೆ. ಆದರೆ ಜಾತಿಜನಗಣತಿಯೂ ಇದು ನಿನ್ನೆ ಮೊನ್ನೆದಲ್ಲ. ಸಹಸ್ರಮಾನದ ಇತಿಹಾಸವಿದೆ. ಈಜಿಪ್ಟ್ನಲ್ಲಿ ಆರಂಭವಾಯಿತು. ಫ್ರಾನ್ಸ್ ದೇಶಗಳಲ್ಲೂ ಕೂಡ ಜಾತಿಗಣತಿ ನಡೆದಿದೆ. ಈ ಜಾತಿಗಣತಿಯು ೧೮೭೧ರಲ್ಲಿ ಪ್ರಥಮ ಬಾರಿಗೆ ಭಾರತದಲ್ಲಿ ಆರಂಭವಾಯಿತು. ಜಾತಿಯು ಸಾಮರಸ್ಯವನ್ನು ಕೂಡಿಸಬೇಕೇ ಹೊರೆತು ಕದಡಬಾರದು, ವ್ಯತ್ಯಾಸ, ವೈರುಧ್ಯಗಳಿವೆ. ಸಾಮಾಜಿಕ ಅನಿಷ್ಠೆಗಳಿವೆ. ಜಾತಿಯೆಂದರೆ ಅಸ್ಪೃಶ್ಯತೆ, ಬಡತನ ತಾರತಮ್ಯ, ದುಷ್ಪರಿಣಾಮವನ್ನು ಎತ್ತಿ ತೋರಿಸುತ್ತದೆ ಎಂದು ನುಡಿದರು.
ಕ್ರಿಸ್ತಪೂರ್ವ ೭ನೇ ಶತಮಾನದಲ್ಲಿ ಜಾತಿ ಹುಟ್ಟಿಕೊಂಡಿದೆ ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ೧೮೭೪ರಲ್ಲಿ ಮೈಸೂರು ಸಂಸ್ಥಾನದಲ್ಲಿ ೧೦ನೇ ಚಾಮರಾಜ ಒಡೆಯರ್ ಅವರು ಕೆಲವೊಂದು ಸರ್ಕಾರಿ ಹುದ್ದೆಗಳಿಗೆ ಮೀಸಲಾತಿ ಕಾಯ್ದಿರಿಸಿದರು. ಸಾಹು ಮಹಾರಾಜರು ೧೯೦೨ರಲ್ಲಿ ಕಾಯ್ದೆ ತಂದು ಶೇ. ೫೦ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ಮಿಲ್ಲರ್ ಆಯೋಗವು ೧೯೧೧ರಲ್ಲಿ ಜಾತಿಗಣತಿಯ ಮಾಹಿತಿ ಪಡೆದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಳಿಯ ಚಂದ್ರಕಾAತ ರಾಜ ಅರಸು ಶೇ. ಎಪ್ಪತ್ತರಷ್ಟು ಮೈಸೂರು ಸಂಸ್ಥಾನದಲ್ಲಿ ಮೀಸಲಾತಿಗೆ ಜಾರಿಗೆ ತಂದರು. ಇದರಲ್ಲಿ ಬ್ರಾಹ್ಮಣ, ಯುರೋಪಿಯನ್, ಆಂಗ್ಲೋ ಇಂಡಿಯನ್ ಬಿಟ್ಟು ಹೋದರು. ಮೀಸಲಾತಿ ಮಾತ್ರ ಕಂಪನಿಯ ವಶದಲ್ಲಿತ್ತು ಎಂದು ತಿಳಿಸಿದರು.
ಪ್ರತಿ ೧೦ ವರ್ಷಕ್ಕೆ ಒಮ್ಮೆ ಜಾತಿಜನಗಣ ನಡೆಸಬೇಕು. ಆದರೆ ಕೇಂದ್ರ ಸರ್ಕಾರಕ್ಕೆ ಜನಗಣತಿ ಮಾಡುವ ಮನಸ್ಸು ಮಾಡುತ್ತಿಲ್ಲ. ಇದರಲ್ಲಿ ಯಾವುದೋ ಹುನ್ನಾರ ಅಡಗಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಸಿಯಲ್ಲಿ ೧೮೧ ಜಾತಿಗಳು, ಎಸ್‌ಟಿಯಲ್ಲಿ ೧೦೧ ಜಾತಿಗಳಿವೆ. ಹಿಂದುಳಿದ ವರ್ಗದಲ್ಲಿ ೧೩೫೧ ಜಾತಿಗಳು, ೨.೭೦ ಲಕ್ಷ ಕುಟುಂಬಗಳಿವೆ. ೨೨ ಸಾವಿರಕ್ಕೂ ಹೆಚ್ಚು ಹುಲ್ಲಿನ ಮನೆಗಳಿವೆ. ಸಾಮಾಜಿಕ ನ್ಯಾಯ ಪಡೆಯಬೇಕಾದವರು ಎಲ್ಲಿದ್ದಾರೆ ಎಂಬುದು ಜನಗಣತಿಯಿಂದ ತಿಳಿಯುತ್ತದೆ. ವೀರಶೈವ ಲಿಂಗಾಯತ ಜಾತಿ ಬಿಟ್ಟು ಹೋಗಿದೆ ಎನ್ನುತ್ತಾರೆ. ಕೆಲವರು ಜಾತಿ ಜನಗಣತಿಯನ್ನು ಪರಿಶೀಲಿಸದೆ ಸಾಯಿಸುತ್ತಿದ್ದಾರೆ. ಬಲಹೀನ ಜಾತಿಯವರು ಸುಮ್ಮನಿದ್ದಾರೆ. ಸಾಮಾಜಿಕ ನಾಯಕ್ಕಾಗಿ ಪ್ರತಿಯೊಂದು ವರ್ಗದವರು ಹೋರಾಟ ಮಾಡುವಂತಹ ಸನ್ನಿವೇಶ ನಾವೇ ಸೃಷ್ಟಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕುಲದೀಪ್ ಸಿಂಗ್ ಆಯೋಗವು ಕ್ಷೇತ್ರ ಪುನರ್ ವಿಂಗಡಣೆ ಮಾಡಿತು. ೨.೫೦ ಲಕ್ಷ ಜನಕ್ಕೆ ಒಂದು ವಿಧಾನಸಭಾ ಕ್ಷೇತ್ರದ ಸೀಟು ಹಂಚಿಕೆಯಾಗುತ್ತದೆ. ಹಿಂದುಳಿದವರು ಎಲ್ಲಿ ಅತಿಹೆಚ್ಚು ಸೀಟ್ ಪಡೆಯುತ್ತಾರೆ ಎಂಬ ಭಯದಿಂದ ಬಲಾಢ್ಯ ಜಾತಿಗಳು ವಿರೋಧಿಸುತ್ತಿದ್ದಾರೆ. ಅಲ್ಲದೆ ಎಲ್ಲಿ ಮೀಸಲಾತಿಯು ತಮ್ಮನ್ನು ಕೈ ಬಿಟ್ಟು ಹೋಗುತ್ತದೆ ಎಂಬ ಆತಂಕದಿಮದ ಹಲವಾರು ಹುನ್ನಾರಗಳನ್ನು ಮಾಡುತ್ತಿದ್ದಾರೆ. ಮೀಸಲಾತಿ ಅನ್ವಯ ಸಂಸತ್ ಮತ್ತು ವಿಧಾನಸಭಾ ಚುನಾವಣೆಗೆ ಯಾವ ಆಧಾರದ ಮೇಲೆ ಕೆಟಗರಿಗಳಿಗೆ ವಿಂಗಡಿಸುತ್ತಾರೆ ಎಂಬುದನ್ನು ತಿಳಿಯದಾಗಿದೆ. ಆದ್ದರಿಂದ ಕಾಂತರಾಜ್ ವರದಿ ಜಾರಿಗೆ ಬಂದರೆ ಪ್ರತಿಯೊಂದು ವರ್ಗಕ್ಕೂ ಅದರ ಜನಸಂಖ್ಯೆ ಆಧಾರದ ಮೇಲೆ ಸೀಟುಗಳು ರಾಜಕೀಯ ವಲಯದಲ್ಲಿ ಸಿಗುತ್ತವೆ. ಇದು ಪ್ರತಿಯೊಂದು ವರ್ಗಕ್ಕೆ ಸಿಕ್ಕ ಜಯವಾಗುತ್ತಿದೆ ಇದನ್ನು ಪಡೆಯಲು ಪ್ರತಿಯೊಬ್ಬರು ಮುಂದು ಆಗಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಕಾರ್ಯಕರ್ತ ಮಲ್ಲಯ್ಯ ಕಮತಗಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ಅಹಮದ್ ಪಠಾಣ್, ವೆಂಕಟೇಶ್ ಹೊಸಮನಿ, ದೇವೀಂದ್ರಪ್ಪ ಪತ್ತಾರ್, ಅಜಯ್ ಕುಮಾರ್ ಬಿಲ್ಲವ್, ಮಾಜಿ ನಗರಸಭೆ ಅಧ್ಯಕ್ಷ ಅಬ್ದುಲ್ ಗಫರ್ ನಗನೂರಿ, ರೈತಸಂಘದ ಅಧ್ಯಕ್ಷ ಹನುಮಂತರಾಯ ಮಡಿವಾಳ, ರಾಹುಲ್ ಹುಲಿಮನಿ, ನಂದಕುಮಾರ್ ಬಾಂಬೇಕರ್, ಮಹಾಂತೇಶ ಗೋನಾಳ್ ಸೇರಿದಂತೆ ಇತರರಿದ್ದರು