ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ತಾಲೂಕು ವ್ಯಾಪ್ತಿಯ ತಿಂಥಣ ಗ್ರಾಮದಲ್ಲಿ ಶೀಘ್ರದಲ್ಲೇ ಕೂಸಿನ ಮನೆಯನ್ನು ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಉದ್ಘಾಟಿಸಿ ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲ ಕಲ್ಪಿಸಲಿದ್ದಾರೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ ತಿಳಿಸಿದರು.
ತಾಲೂಕಿನ ತಿಂಥಣ ಗ್ರಾಮದಲ್ಲಿನ ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಶಾಸಕರು ಶೀಘ್ರದಲ್ಲೇ ದಿನಾಂಕ ನೀಡಲಿದ್ದಾರೆ. ಕೂಸಿನ ಮನೆಯಿಂದ ಕೂಲಿಗಾಗಿ ಹೋಗುವ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಿದೆ. ಮಕ್ಕಳು ಅಪೌಷ್ಟಿಕತೆ ಮತ್ತು ತಾಯಿ ಆರೈಕೆಯನ್ನು ಕೂಸಿನ ಮನೆಯ ಸಿಬ್ಬಂದಿ ನೀಡುತ್ತಾರೆ. ಇದನ್ನು ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯ ನಿರ್ವಹಿಸಲಾಗುತ್ತದೆ ಎಂದರು.
ಕೂಸಿನ ಮನೆಯಲ್ಲಿ ಮಕ್ಕಳ ಆಟಿಕೆಗಳು, ಪೌಷ್ಟಿಕ ಆಹಾರ ಕ್ರಮ, ಸ್ವಚ್ಛತೆ, ಶಿಶು ಆರೈಕೆದಾರರು, ಶುದ್ಧ ಕುಡಿಯುವ ನೀರು, ಅಡುಗೆ ಸಾಮಾನು ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪಿಡಿಒ ಪಿಡಿಒಗೆ ಸೂಚಿಸಿದರು.
ತಾಂತ್ರಿಕ ಸಂಯೋಜಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಸದಸ್ಯರು, ನರೇಗಾ ಯೋಜನೆಯ ಟಿಎಇ, ಕೂಸಿನ ಮನೆಯ ಶಿಶು ಆರೈಕೆದಾರರು, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.