ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ರಾಯೂಚರು ಜಿಲ್ಲೆಯ ಮಾರ್ಗವಾಗಿ ದೇವದುರ್ಗದ ಮೂಲಕ ಆಗಮಿಸಿದ ಕರ್ನಾಟಕ ಸಂಭ್ರಮ-೫೦ರ “ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ತಿಂಥಣ ಯಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ ಸಂಭ್ರಮದಿಂದ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ರಾಜ್ಯ ಕರ್ನಾಟಕ ಎಂಬುದಾಗಿ ಮರುನಾಮಕರಣವಾಗಿ ಕಳೆದ ನವೆಂಬರ್ ೧ಕ್ಕೆ ೫೦ ವರ್ಷ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ‘ಕರ್ನಾಟಕ ಸಂಭ್ರಮ-೫೦’ ರ “ಹೆಸರಾಯಿತು ಕರ್ನಾಟಕ , ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ಡಿ. ೨೨ ರಿಂದ ಜ. ೩ ರವರೆಗೆ ಜಿಲ್ಲೆಯಾದ್ಯಂತ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆ ನಡೆಯಲಿದೆ. ಡಿ. ೨೪-೨೫ ರಂದು ಸುರಪುರ ತಾಲೂಕಿನಲ್ಲಿ, ಶಹಾಪುರ ತಾಲ್ಲೂಕಿನಲ್ಲಿ, ಡಿ. ೨೮-೨೯ ರಂದು ವಡಗೇರಾ ತಾಲ್ಲೂಕಿನಲ್ಲಿ, ಡಿ.೩೦-೩೧ ರಂದು ಕನ್ನಡ ರಥಯಾತ್ರೆ ನಡೆಯಲಿದೆ.
ಎಂದರು.
ಡಿ.೩೦-೩೧ ರಂದು ಯಾದಗಿರಿ ತಾಲ್ಲೂಕಿನಲ್ಲಿ ಹಾಗೂ ಜನವೇರಿ ೦೧-೦೨ ರಂದು ಗುರುಮಿಟಕಲ್ ನ ವಿವಿಧ ಪಟ್ಟಣ ಮತ್ತು ಗ್ರಾಮಗಳ ಪ್ರದೇಶಗಳಲ್ಲಿ ಈ ರಥಯಾತ್ರೆ ನಡೆಯಲಿದ್ದು, ನಂತರ ೦೩ ರಂದು ಗುರುಮಿಟಕಲ್ ದಿಂದ ಸೇಡಂ ಗೆ ಬೀಳ್ಕೊಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ೬ ತಾಲ್ಲೂಕುಗಳ ವಿವಿಧ ಸ್ಥಳಗಳ ಮೂಲಕ ಕನ್ನಡ ನಾಡು ನುಡಿಯ, ಸಾಂಸ್ಕೃತಿಕ ಪರಂಪರೆ, ಇತಿಹಾಸ ಮತ್ತು ಕನ್ನಡದ ಮಹತ್ವವನ್ನು ಸಾರಿ ಹೇಳುವ ವಿಶೇಷ ಜ್ಯೋತಿ ರಥಯಾತ್ರೆ ಇದಾಗಿದೆ ಎಂದರು.
ತಿಂಥಣ ಬ್ರಿಜ್‌ನಲ್ಲಿ ೫೦ ಮೀಟರ್ ಉದ್ದ ಕನ್ನಡ ಬಾವುಟವನ್ನು ಮಕ್ಕಳು ಪ್ರದರ್ಶಿಸುವ ಮೂಲಕ ಹಾಗೂ ಕಳಸ ಹೊತ್ತ ಮಹಿಳೆಯರು ಮತ್ತು ನಾಗರಿಕರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಂದ ಸ್ವಾಗತಿಸಲಾಯಿತು. ಅಲ್ಲಿಂದ ಶಾಂತಪುರ ಕ್ರಾಸ್‌ವರೆಗೆ ನಡೆಯಿತು. ತಿಂಥಣ ಯಲ್ಲಿ ಸ್ವಾಗತಿಸಿದರು. ತಹಸೀಲ್ದಾರ, ತಾಪಂ ಇಒ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು , ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಅಧಿಕಾರಿಗಳು ಇದ್ದರು.
ಕಕ್ಕೇರಾ ಮಾರ್ಗವಾಗಿ ಹುಣಸಗಿ ಪ್ರವೇಶಿಸಿತು. ಕಕ್ಕೇರಾದಲ್ಲಿ ಕಸಾಪ ವಲಾಯಾಧ್ಯಕ್ಷ ಗವಿಸಿದ್ಧಪ್ಪ ಹೊಗರಿ ಅವರು ಸ್ವಾಗತಿಸಿದರು. ಅಲ್ಲಿಂದ ಹುಣಸಗಿ ತಾಲೂಕಿನತ್ತ ಕನ್ನಡ ರಥ ಯಾತ್ರೆ ಮುಂದುವರಿಯಿತು.
ಜಿಪಂ ಸಿಇಒ ಗರೀಮಾ ಪಂವಾರ, ಎಸ್‌ಪಿ ಜೆ. ಸಂಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಉತ್ತರದೇವಿ, ತಾಪಂ ಇಒ ಬಸವರಾಜ ಸಜ್ಜನ್, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಕಾರ್ಯದರ್ಶಿ ಭೀಮರಾಯ ಲಿಂಗೇರಿ, ತಾಲೂಕು ಕಸಾಪ ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ, ವೆಂಕಟಗಿರಿ ದೇಶಪಾಂಡೆ, ಗೌರವ ಕಾರ್ಯದರ್ಶಿ ಎಚ್. ರಾಠೋಡ, ಮಲ್ಲಣ್ಣ ಡಂಗಿ, ನಾಗನಗೌಡ, ಸಾಹೇಬರೆಡ್ಡಿ ಇಟ್ಟಗಿ, ಪ್ರಕಾಶ ಅಂಗಡಿ, ನಬಲಿಲಾಲ್ ಮಕಾಂದರ, ರಾಘವೇಂದ್ರ ಭಕ್ರಿ ಸೇರಿದಂತೆ ಇತರರಿದ್ದರು.