ಮಹಾಮಾರಿ ಕೋವಿಡ್ ಎದುರಿಸಲು ಸರಕಾರಿ ಆಸ್ಪತ್ರೆ ಸಜ್ಜು: ಡಾ. ಆರ್. ವೆಂಕಪ್ಪ ನಾಯಕ, ಖಾಸಗಿ ವೈದ್ಯರ ಪೂರ್ವಭಾವಿ ಸಭೆಯಲ್ಲಿ ಅಭಿಮತ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ ಸುರಪುರ: ಮಹಾಮಾರಿ ಕೋವಿಡ್ ಜೆಎನ್-೧ ರೂಪಾಂತರ ತಳಿ ಎದುರಿಸಲು ಸುರಪುರ ಮತ್ತು ಹುಣಸಗಿ ತಾಲೂಕಿನ ಎಲ್ಲ ಆಸ್ಪತ್ರೆಗಳು ಸರ್ವ ಸನ್ನದ್ಧವಾಗಿವೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಹೇಳಿದರು.


ನಗರದ ತಾಲೂಕು ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ನಡೆದ ಖಾಸಗಿ ವೈದ್ಯರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೆಡೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ತೀವ್ರ ಸೀತಾ(ನೆಗಡಿ), ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಎದುರಾದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ರೋಗಿಗಳಿಗೆ ಖಾಸಗಿ ವೈದ್ಯರು ತಿಳಿಸಬೇಕು. ಖಾಸಗಿ ಕ್ಲಿನಿಕ್‌ಗಳು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ತಾಲೂಕಿನಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕರ ಸರಕಾರಿ ಆಸ್ಪತ್ರೆ, ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಣಸಗಿ ತಾಲೂಕಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕೋಡೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಪೈಪ್‌ಲೈನ್ ಬೆಡ್‌ಗಳಿವೆ. ಸುರಪುರ ಮತ್ತು ಹುಣಸಗಿ ತಾಲೂಕು ಸೇರಿ ಒಟ್ಟು ೨೮೦ ಆಕ್ಸಿಜನ್ ಪೈಪ್‌ಲೈನ್ ಬೆಡ್‌ಗಳು, ಒಟ್ಟು ಬೆಡ್ ಮತ್ತು ಎಎಂಪಿ, ಕಾಟ್‌ಗಳು ೨೫೬, ಆಕ್ಸಿಜನ್ ಕಾನ್ಸಟೆಟರ ಒಟ್ಟು ೨೬೮, ಜಂಬು ಮತ್ತು ಚಿಕ್ಕ ಸಿಲಿಂಡರ ಒಟ್ಟು ೧೩೧ ಇವೆ ಎಂದು ತಿಳಿಸಿದರು.
ಈಗಾಗಲೇ ಎಲ್ಲಾ ಮುಂಜಾಗ್ರತೆಯನ್ನು ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ. ವೈದ್ಯರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಮುಂಜಾಗ್ರತವಾಗಿ ತಯಾರಿರಲು ಸೂಚಿಸಲಾಗಿದೆ. ಎಲ್ಲ ಖಾಸಗಿ ವೈದ್ಯರು ಕಡ್ಡಾಯವಾಗಿ ಕೆ.ಪಿ.ಎಂ.ಇ. ನಡಿ ನೊಂದಣ ಮತ್ತು ಅವಧಿ ಮುಗಿದಿರುವ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ರಿನಿವಲ್ ಮಾಡಲು ಸೂಚಿಸಲಾಗಿದೆ. ನಕಲಿ ವೈದ್ಯರ ಬಗ್ಗೆ ಚರ್ಚೆ ಮಾಡಲಾಯಿತು. ಮುಖ್ಯವಾಗಿ ಕ್ಷಯರೋಗಿಗಳಿಗೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸರ್ಕಾರಿ ಆಸ್ಪತ್ರೆಗೆ
ಕಳುಹಿಸಲು ಖಾಸಗಿ ವೈದ್ಯರಿಗೆ ಸೂಚಿಸಿದರು.
ರೂಪಾಂತರ ಕೋವಿಡ್ ತಳಿ ಎಲ್ಲೆಡೆ ತನ್ನ ಪ್ರಭಾವ ಬೀರುತ್ತಿದ್ದು, ೬೦ ವರ್ಷ ಮೇಲ್ಪಟ್ಟವರು, ೧೫ ವರ್ಷದೊಳಗಿನ ಮಕ್ಕಳು, ಮಧುಮೇಹ(ಸಕ್ಕರೆ ಕಾಯಿಲೆ), ರಕ್ತದೊತ್ತಡ(ಬಿಪಿ)ಯಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು. ಅಲ್ಲದೆ ತಪ್ಪದೇ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಅವಳಿ ತಾಲೂಕಿನ ಜನತೆಯಲ್ಲಿ ಮನವಿ ಮಾಡಿದರು.
ಎರಡು ತಾಲೂಕುಗಳ ಖಾಸಗಿ ಕ್ಲಿನಿಕ್‌ಗಳ ವೈದ್ಯರು, ಸರಕಾರಿ ಆಸ್ಪತ್ರೆಯ ವೈದ್ಯರು ಇದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ