ಸೂಲಗಿತ್ತಿ ಚನ್ನಬಸಮ್ಮ ತಳವಾರಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ  ಸುರಪುರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್ ವತಿಯಿಂದ ನೀಡುವ ೩ನೇ ರಾಜ್ಯ ಮಟ್ಟದ ಡಾ:ಎಚ್ ನರಸಿಂಹಯ್ಯ ಪ್ರಶಸ್ತಿ ಯನ್ನು  ಸೂಲಗಿತ್ತಿ ಚನ್ನಬಸಮ್ಮ ಅವರಿಗೆ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನಲ್ಲಿ ವಿತರಿಸಲಾಯಿತು.

ರಾಜ್ಯಮಟ್ಟದ  ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯಿಂದ ಆಯ್ಕೆಯಾದ ಸೂಲಗಿತ್ತಿ ಚನ್ನಬಸಮ್ಮ ತಳವಾರ ಅವರು ತಮ್ಮ ಜೀವಿತಾವಧಿಯಲ್ಲಿ ಉಚಿತವಾಗಿ  ಸಾವಿರಾರು ಹೆರಿಗೆ ಮಾಡಿಸಿದ್ದಾರೆ. ಅವರ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್ ನ ರಾಜ್ಯಾಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್,  ಕಾರ‍್ಯಕ್ರಮದ ಸಮಾರೋಪ ಅಧ್ಯಕ್ಷ ಸತೀಶ ಜಾರಕಿಹೊಳಿ, ಲಿಂಗಸೂರಿನ ಶಾಸಕರು ಮಾನಪ್ಪ ಡಿ ವಜ್ಜಲ್ ಹಾಗೂ ಯಾದಗಿರಿ ಜಿಲ್ಲೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷರಾದ ಗುಂಡಪ್ಪ ಕಲ್ಬರ‍್ಗಿ ಈ ಸಂರ‍್ಭದಲ್ಲಿ ಉಪಸ್ಥಿತರಿದ್ದರು.

ಸೇವೆ:
ಎಲೆಮರೆ ಕಾಯಿಯಂತೆ ತನ್ನ ವೃತ್ತಿಯಲ್ಲಿ ತೋಡಗಿ ಸುಮಾರು ೬೫೦೦ ಕ್ಕಿಂತ ಹೆಚ್ಚು ಹೆರಿಗೆ ಮಾಡಿಸುತ್ತಾ ಬಂದ್ದಿರುವ ಸೂಲಗಿತ್ತಿ ಚನ್ನಬಸಮ್ಮ ತಳವಾರ ರವರು ಇದಕ್ಕೆ ಕಾರಣ ಊರಿನ ಜನತೆ ಅವರಿಂದ ನನಗೆ ಈ ದೊರಕಿದೆ ಅದಕ್ಕಾಗಿ ಊರಿನ ಜನತೆಗೆ ಹಾಗೂ ರ‍್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರಿಗೂ ನಮ್ಮ ಕುಟುಂಬದ ಪರವಾಗಿ ಅಭಿನಂದನೆಗಳು ತಿಳಿಸುತ್ತೇನೆ ಎಂದು ಕಬ್ಬಲಿಗ ಸಮುದಾಯದ ಹಿರಿಯ ಮುಖಂಡ ಜಕ್ಕಪ್ಪ ಕಟ್ಡಿಮನಿ ತಿಳಿಸಿದ್ದಾರೆ
ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ