ಗೊಂಡ ಪರ್ಯಾಯ ಪದ ಕುರುಬ ಎಸ್ಟಿಗೆ ಸೇರಿಸಿ: ತಿಂಥಣಿ ಶ್ರೀ..ಕುರುಬ ಸಮುದಾಯದಿಂದ ಪ್ರತಿಭಟನಾ ಮೆರವಣಿಗೆ..

ವರದಿ: ಎನ್.ಎನ್.

ಸುರಪುರ ಕ್ರಾಂತಿವಾಣಿ ವಾರ್ತೆ
ಸುರಪುರ: ಕಳೆದ ೩೦ ವರ್ಷಗಳಿಂದ ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ನಿರಂತರ ಹೋರಾಟ ನಡೆಸಿದ್ದರೂ ನಮ್ಮನ್ನಾಳುವ ರಾಜಕಾರಣ ಗಳೇ ಕಾರಣೀಭೂತರಾಗಿದ್ದಾರೆ. ಇಂತವರ ವಿರುದ್ಧ ಸಮುದಾಯ ಎಚ್ಚರಿಕೆಯಿಂದಿರಬೇಕು ಎಂದು ತಿಂಥಣ ಯ ಕನಕ ಗುರುಪೀಠದ ಪೀಠಾಧಿಪತಿ ಸಿದ್ದರಾಮಾನಂದಪುರಿ ಶ್ರೀಗಳು ನುಡಿದರು.


ನಗರದ ವೇಣುಗೋಪಾಲ ಸ್ವಾಮಿ ಆವರಣದಿಂದ ಗುರುವಾರ ಕರ್ನಾಟಕ ಪ್ರದೇಶ ಗೊಂಡ (ಕುರುಬ) ಸಂಘದ ನೇತೃತ್ವದಲ್ಲಿ ಕುರುಬರಿಗೆ ಎಸ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣ ಗೆ ಗಾಂಧಿ ವೃತ್ತದಲ್ಲಿ ಸಮಾಪ್ತಿಗೊಂಡು ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯ ಎಸ್‌ಟಿ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟವಾಗಿದೆ. ಶೈಕ್ಷಣ ಕ ಮತ್ತು ಸಾಮಾಜಿಕ ನ್ಯಾಯ ಪಡೆಯುವ ನ್ಯಾಯಯುತ ಹೋರಾಟವಾಗಿದೆ ಎಂದರು.
ಬೀದರಿನಲ್ಲಿ ಮಾತ್ರ ಗೊಂಡ ಕುರುಬರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ನೀಡುತ್ತಿಲ್ಲ. ಆದ್ದರಿಂದ ಕುರುಬರು ಅಥವಾ ಗೊಂಡ ಕುರುಬರು ಬೇರೆಯಲ್ಲ. ಎರಡು ಒಂದೇ ಆಗಿದ್ದು, ಕೂಡಲೇ ಕುರುಬರನ್ನು ಗೊಂಡ ಕುರುಬರೆಂಬುದಾಗಿ ಪರಿಗಣ ಸಿ ಕೂಡಲೇ ಎಸ್ ಟಿ ಪ್ರಮಾಣ ಪತ್ರ ನೀಡಬೇಕು. ಅಲ್ಲಿಯವರೆಗೂ ಯಾದಗಿರಿ, ಕಲಬುರಗಿ ಜಿಲ್ಲೆಯಲ್ಲಿ ಹೋರಾಟ ನಡೆಯುತ್ತದೆ. ಅಲ್ಲದೆ ರಾಜಕಾರಣ ಗಳ ಮನೆಗೆ ನುಗ್ಗವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ಸಮುದಾಯದ ವಿವಿಧ ಮುಖಂಡರು ಮಾತನಾಡಿ, ೫೦೦ ವರ್ಷಗಳ ಹಿಂದೆ ಕುರುಬರು ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದರು. ಅಲೆಮಾರಿಗಳಾಗಿ, ಸಂಚಾರಿಗಳಾಗಿ ಊರೂರು ಸುತ್ತಿದ್ದರು. ರಸ್ತೆಗಳಲ್ಲೆ ವಾಸಿಸುತ್ತಿದ್ದರು. ಬ್ರಿಟಿಷರ ಕಾಲದಲ್ಲೆ ಎಲೆಜೆಬತ್ ರಾಣ ಯವರು ಗುಂಡ ಕುರುಬರನ್ನು ಎಸ್ಟಿಗೆ ಸೇರಿಸಿದ್ದರು. ನಂತರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಕುರುಬರನ್ನು ಎಸ್ಟಿಗೆ ಸೇರಿಸಿದ್ದರು. ಹಾಗಾಗಿ ನಾವು ಎಸ್ಟಿಗೆ ಸೇರಿಸಿರಿ ಎಂದು ಹೊಸದಾಗಿ ಕೇಳುತ್ತಿಲ್ಲ. ನಮ್ಮದು ನ್ಯಾಯೋಚಿತ ಬೇಡಿಕೆಯಾಗಿದೆ. ನಮ್ಮ ಬೇಡಿಕೆ ಈಡೇರವರಿಗೂ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಾಗಿದ್ದಾಗ ಕುರುಬರನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಯಿತು. ಆ ಎಲ್ಲಾ ಮನವಿಗಳು ಮಾಹಿತಿ ಕೊರತೆಯಿಂದ ವಾಪಸ್ ಬಂದಿವೆ. ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಸಲ್ಲಿಸಿದರು ಇಲ್ಲಿವರೆಗೂ ಅದು ವರದಿ ಕಾರ್ಯಗತಗೊಳಿಸದೆ ಇರುವುದು ದುರಂತ. ಕುಲಶಾಸ್ತ್ರೀಯ ಅಧ್ಯಯನದ ಕೆಲವು ಲೋಪದೋಷಗಳನ್ನು ಸರಿಪಡಿಸಿ ೨೦೧೪ರಲ್ಲಿ ರಾಜ್ಯ ಸರ್ಕಾರ ಪುನಃ ಕೇಂದ್ರ ಸರಕಾರಕ್ಕೆ ವರದಿ ಕಳಿಸಕೊಡಲಾಗಿತ್ತು. ವರದಿ ಕಳಿಸಿ ಸುಮಾರು ಹತ್ತು ವರ್ಷಗಳು ಕಳೆದರೂ ವರದಿಯ ಬಗ್ಗೆ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಕುರುಬರನ್ನು ಇನ್ನಷ್ಟು ಕೆರಳುವಂತೆ ಮಾಡಿದೆ. ಕುರುಬರನ್ನು ಎಸ್ ಟಿ ಗೆ ಸೇರಿಸುವವರಿಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಬದಲಿಗೆ ಹೋರಾಟ ಇನ್ನು ಹೆಚ್ಚಿನ ರೀತಿಯಲ್ಲಿ ತೀವ್ರ ಸ್ವರೂಪ ಪಡೆಯುತ್ತದೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.

ಅಗತೀರ್ಥದ ಶಾಂತಮಯ್ಯ ಸ್ವಾಮಿ, ತಾಲೂಕು ಅಧ್ಯಕ್ಷ ಕಾಳಪ್ಪ ಎಂ. ಕವಾಯಿತಿ, ರಂಗನಗೌಡ ಪಾಟೀಲ ದೇವಿಕೇರಿ, ಮಲ್ಲಣ್ಣ ಐಕೂರು ನಿಂಗರಾಜ ಬಾಚಿಮಟ್ಟಿ, ಭೀಮರಾಯ ಮೂಲಿಮನಿ, ಮಲ್ಲಯ್ಯ ಕಮತಗಿ, ಮಲ್ಲು ದಂಡಿನ್, ರವಿ ಸಾಹುಕಾರ ಆಲ್ದಾಳ, ನಿಂಗಣ್ಣ ಚಿಂಚೋಡಿ, ಕೃಷ್ಣಾ ಬಾದ್ಯಾಪುರ, ಬೀರಲಿಂಗ, ಪರಮಣ್ಣ ಹಾಲಭಾವಿ, ಅಮರೇಶ ಕಾಮನಕೇರಿ ಸೇರಿದಂತೆ ಇತರರಿದ್ದರು.

ತಹಸೀಲ್ದಾರ್‌ಗೆ ಧಿಕ್ಕಾರ:
ಸಾವಿರಾರು ಸಂಖ್ಯೆಯಲ್ಲಿ ಕುರುಬ ಸಮುದಾಯದವರು ಸೇರಿ ಪ್ರತಿಭಟಿಸುವ ಮುನ್ಸೂಚನೆ ಇದ್ದರೂ ಸ್ಥಳಕ್ಕಾಗಮಿಸದ ಸುರಪುರ ತಹಸೀಲ್ದಾರ್ ಕೆ. ವಿಜಯಕುಮಾರ ವಿರುದ್ಧ ಧಿಕ್ಕಾರ ಮೊಳಗಿತು. ಇನ್ನೂ ಕೆಲವು ಮುಖಂಡರು ಧಿಕ್ಕಾರ ಕೂಗುತ್ತಾ ರಸ್ತೆಯಲ್ಲೇ ಕುಳಿತರು. ಜನರ ಕಾಳಜಿಯಿಲ್ಲದ ತಹಸೀಲ್ದಾರ್ ಅಮಾನತಿಗೆ ಒತ್ತಾಯಿಸಲಾಯಿತು.
ವಾಕ್ಸಮರ:
ವಾಕ್ಸಮರ ಧಿಕ್ಕಾರ ಕೂಗುತ್ತಿದ್ದಂತೆ ಮಧ್ಯಪ್ರವೇಶಿಸಿ ಪೊಲೀಸರು ಶಾಂತಿಗೊಳಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮುಖಂಡರು ಮತ್ತು ಪೊಲೀಸರ ನಡುವೆ ವಾಕ್ಸಮರ ನಡೆಯಿತು. ಪ್ರತಿಭಟಿಸುತ್ತೇವೆ ಎಂಬುದಾಗಿ ಮನವಿ ನೀಡಿದ್ದರೂ ನಿಷ್ಕಾಳಜಿಯಿಂದ ಹೊರಗೆ ಹೋಗಿದ್ದಾರೆ. ಅವರು ಬರುವ ತನಕ ಪ್ರತಿಭಟನೆ ಮುಂದುವರಿಯತ್ತದೆ ಎಂದೇಳಿ ರಸ್ತೆಯಲ್ಲೇ ಕುಳಿತರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ