ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಸಚಿವ ದರ್ಶನಾಪೂರ:

ಜ.19 ರಂದು ಜಿಲ್ಲಾ ಮಟ್ಟದ ಕೆಕೆಆರ್‌ಡಿಬಿ ಪೂರ್ವಭಾವಿ ಸಭೆ.
ಕ್ಷೇತ್ರಕ್ಕೆ ೮೫ ಕೋಟಿ ರೂ.ಮಂಜೂರಿ. ದರ್ಶನಾಪುರ ಮಾಹಿತಿ

ಕ್ರಾಂತಿ ವಾಣಿ ಶಹಾಪುರ;

೨೦೨೩-೨೪ ನೇ ಸಾಲಿನಲ್ಲಿ ಹಂಚಿಕೆಯಾದ ಜಿಲ್ಲೆಗೆ ಮೈಕ್ರೊ ಮತ್ತು ಮ್ಯಾಕ್ರೋ ಸೇರಿ ಮೂರು ನೂರು ಕೋಟಿ ಹಂಚಿಕೆಯನ್ನು ಹೊಂದಿದೆ. ೨೦೧೮ ರಿಂದ ೨೩ ನೇ ಸಾಲಿನಲ್ಲಿ ಉಳಿದ ಅನುದಾನದಲ್ಲಿ ೨೦ ಕೋಟಿ ಅನುದಾನ ಮೈಕ್ರೋ ಮತ್ತು ಮ್ಯಾಕ್ರೋನಲ್ಲಿ ಉಳಿತಾಯ ಹಂಚಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಪ್ರಕಟಿಸಿದರು.

ನಗರದಲ್ಲಿರುವ ಅವರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಸಚಿವರ ಸಭೆ ಕರೆದು ಈ ಬಾರಿ 5 ಸಾವಿರ ಕೋಟಿ ಅನುದಾನ ನೀಡಿದ್ದಾರೆ ಎಂದು ಹೇಳಿದರು. ಅದರಲ್ಲಿ 3 ಸಾವಿರ ಕೋಟಿ ಹಂಚಿಕೆಯಾಗಿದೆ. ಅನುದಾನದ ವೆಚ್ಚಕ್ಕೆ ತಕ್ಕಂತೆ ಹೆಚ್ಚಿನ ಅನುದಾನ ನೀಡಲು ಸಹ ಭರವಸೆ ಇದೆ. ಜಿಲ್ಲಾ ಮಟ್ಟದ ಸಭೆ ನಡೆಸಿ ಕಾಮಗಾರಿಗಳನ್ನು ಆರಂಭಿಸಲು ಕಾಲಮಿತಿಯೊಳಗೆ ಮುಕ್ತಾಯಗೊಳಿಸಲು ತಿಳಿಸಿದ್ದರು. ಮಂಡಳಿ ರಚನೆಯಾಗಿ ಇಲ್ಲಿಯವರೆಗೆ ಡಿಸೆಂಬರ್ ಪ್ರಾರಂಭದವರೆಗೆ ೭೪೦ ಕೋಟಿ ಖಚಾÀðಗಿದ್ದು. ಈ ವರ್ಷ ಅಂದರೆ ಮಾರ್ಚ್ 1500 ಕೋಟಿ ಖರ್ಚು ಮಾಡುವ ಉದ್ದೇಶವಿದೆ. ಜ.19 ರಂದು ಅಜಯಸಿಂಗ್ ಅವರಿಗೆ ಹೇಳಿದ್ದು ಜಿಲ್ಲಾ ಮಟ್ಟದ ಕೆಕೆಆರ್‌ಡಿಬಿ ಸಭೆಯನ್ನು ಕರೆಯಲಾಗಿದೆ. ಅದರಲ್ಲಿ ಶಾಸಕರು, ಕಾರ್ಯನಿರ್ವಹಿಸುವ ಏಜೆನ್ಸಿಗಳು ಭಾಗವಹಿಸಲಿದ್ದಾರೆ. ನಗರಕ್ಕೆ ಪ್ರಸಕ್ತ 85 ಕೋಟಿ ರೂ. ಮಂಜೂರಿಯಾಗಿದೆ. ಶೇ.25ರಷ್ಟು ಅಕ್ಷರ ಅವಿಷ್ಕಾರ ಯೋಜನೆ, ಕಲ್ಯಾಣ ಕರ್ನಾಟಕ ಬಾಗದ ಶಾಲೆಗಳ ರಿಪೇರಿಗಾಗಿ ಮಂಜೂರಿಯಾಗಿದೆ. ಕಳೆದ ೨೦೨೨-೨೩ ನೇ ಸಾಲಿನ ಬಿಜೆಪಿ ಸರ್ಕಾರದ ಸಮಯದಲ್ಲಿ 3 ಸಾವಿರ ಕೋಟಿ ಮಂಜೂರಿಯಾಗಿತ್ತು. ಅದರಲ್ಲಿ 1500 ಕೋಟಿ ರೂ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಯಿತು.

ಕೆಕೆಆರ್ಡಿಬಿ ಯೋಜನೆಡಿಯಲ್ಲಿ ಕಾಮಗಾರಿ ಕಾಮಗಾರಿಗಳು ಮುಗಿದಿವೆ. ಈ ವರ್ಷ ಹಣ ಒದಗಿಸಿದ್ದು 3 ಸಾವಿರ ಕೋಟಿ ಕೆಆರ್‌ಡಿಬಿಯಲ್ಲಿ ಕ್ರಿಯಾ ಯೋಜನೆ ಕೆಲಸ ಪ್ರಾರಂಭಿಸಲು. ಅದಕ್ಕಾಗಿ ಅಧಿಕಾರಿಗಳು ವೇಗದಲ್ಲಿ ಕಾಮಗಾರಿಗಳನ್ನು ಮಾಡಿ ಮುಗಿಸಿದ್ದಾರೆ. ಹೆಚ್ಚಿನ ಅನುದಾನವನ್ನು ಪಡೆಯಲು ಸಾಧ್ಯವಾಗುತ್ತದೆ.

  • ಶೇ.90ರಷ್ಟು ಅಂದಾಜು ಪಟ್ಟಿ ತಯಾರಾಗಿದೆ. ಅದರಲ್ಲಿ ಶಾಲೆ ಕೋಣೆಗಳ ರಿಪೇರಿ, ಶೌಚಾಲಯ, ರಸ್ತೆ, ಕಂಪೌಡ್ ವಾಲ್, ವಿಜ್ಞಾನ ಶಿಕ್ಷಕರಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆಯ ಅಂದಾಜು ಪಟ್ಟಿ ತಯಾರಾಗಿದೆ. 4.5 ಕೋಟಿ ರೂ ವೆಚ್ಚದಲ್ಲಿ ನಾಗÀರಕೆರೆ, ಮಾವಿನಕೆರೆ ನೀರು ತುಂಬುವ ಕೆಲಸ ಪ್ರಾರಂಭವಾಗಿದೆ. ಅದರಲ್ಲಿ ಮಾವಿನಕೆರೆ ಅಭಿವೃದ್ದಿಗೆ ೨ ಕೋಟಿ ರೂ. ಮಂಜೂರಿಯಾಗಿದೆ. ನಾಗರಕೆರೆ ಸೊರಿಕೆ ತಡೆಗೆ ೧ ಕೋಟಿ ರೂ. ಟೆಂಡರ್ ಹಂತದಲ್ಲಿದೆ. ಇಷ್ಟೆಲ್ಲಾ ಆದರೆ ಕಾಲದಲ್ಲಿ ನೀರಿನ ತೊಂದರೆ ಆಗುವುದಿಲ್ಲ. ೭ ಕೋಟಿ ರೂ. ವೆಚ್ಚದಲ್ಲಿ ಜೇವರ್ಗಿಯಿಂದ ಹತ್ತಿಗುಡೂರ ವರೆಗೆ ರಾಷ್ಟಿçÃಯ ರಸ್ತೆ ರಸ್ತೆಗೆ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ವಿವರಿಸಿದರು.
ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ