ಸುರಹೊನ್ನೆ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ . ಬಾಲ್ಯ ನೆನಪಿಸಿದ , ಸ್ನೇಹಿತರನ್ನು ಕೂಡಿಸುವುದೇ ಸ್ನೇಹಮಿಲನ: ಡಾ. ಪ್ರಮೋದ್

ಎನ್.ಎನ್.

ಕ್ರಾಂತಿವಾಣಿ ವಾರ್ತೆ
ದಾವಣಗೆರೆ: ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ಸರ್ಕಾರಿ ಉನ್ನತಿ ಕರಿಸಿದ ಪ್ರಾಥಮಿಕ ಶಾಲೆಯ ನ 1993-94ನೇ ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ನಿವೃತ್ತ ಶಿಕ್ಷಕರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ದಂತ ವೈದ್ಯ ಡಾ. ಪ್ರಮೋದ್, ಅಕ್ಷರ ಕಲಿಸಿದ ಗುರುಗಳಿಂದಲೇ ನಾವು ಇಂದು ಉನ್ನತದ ಮಟ್ಟಕ್ಕೆ ಹೋಗಿದ್ದೇವೆ. ಶಿಕ್ಷಕರಿಲ್ಲದೆ ನಾವಿಲ್ಲ. ಸುರಹೊನ್ನೆ ಶಾಲೆಯಲ್ಲಿ ಕಲಿತು ಆಡಿ ಬೆಳೆದಿರುವಂತದ್ದು ಇಂದಿಗೂ ನನ್ನ ಸ್ಮೃತಿಪಟಲದಿಂದ ಮಾಸಿಹೋಗಿಲ್ಲ. ಇಲ್ಲಿ ಆಡಿಉವುದು, ಕಲಿತಿರುವುದನ್ನು ಮರೆಯಲು ಸಾಧ್ಯವಿಲ್ಲ. ನಾವು 7ನೇ ತರಗತಿಯ ವಿದ್ಯಾರ್ಥಿಗಳು.ವೃತ್ತಿಯಿಂದ ನಿವೃತ್ತರಾಗಿದ್ದರೂ ನಮಗೆ ಶಿಕ್ಷಕರೆಯಾಗಿದ್ದಾರೆ. ನನ್ನನ್ನು ಮತ್ತೊಮ್ಮೆ ವಿದ್ಯಾರ್ಥಿಯ ಜೀವನಕ್ಕೆ ಈ ಕಾರ್ಯಕ್ರಮ ಕೊಂಡು ಹೋಯಿತು ಎಂದರು.


ಹಳೆಯ ವಿದ್ಯಾರ್ಥಿನಿ ಜಯಶೀಲಾ ಮಾತನಾಡಿ, ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಶಿಕ್ಷಕರು ನೀಡಿದಂತಹ ಸಹಕಾರವನ್ನು ಮರೆಯುವುದಿಲ್ಲ . ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಿದ್ದರಿಂದ ಇಂದು ಉತ್ತಮ ಜೀವನವನ್ನು ಕಂಡುಕೊಂಡಿದ್ದೇನೆ ಎಂದರು.

ನಿವೃತ್ತ ಶಿಕ್ಷಕ ಸಿದ್ದರಾಮಪ್ಪ  ಮಾತನಾಡಿ, ಸುರಹೊನ್ನೆ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯು ಸಾಕಷ್ಟ ಅಭಿವೃದ್ಧಿ ಹೊಂದಿದೆ. ಆದರೆ, ಇಲ್ಲಿರುವಂತಹ ಸಾಮಗ್ರಿಗಳು ವಸ್ತುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರ ಮೇಲಿದೆ. ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಸ್ನೇಹ ಮಿಲನ ಮತ್ತು ಗುರುವಂದನೆ ಕಾರ್ಯಕ್ರಮ ತುಂಬಾ ಸಂತಸ ತಂದಿದೆ. ನಿವೃತ್ತರಾಗಿದ್ದರು ನಮ್ಮ  ಶಿಕ್ಷಕರ ವೃತ್ತಿಯನ್ನು ಮತ್ತೊಮ್ಮೆ ನೆನಪಿಸಿದ ನನ್ನ ಶಿಷ್ಯ ವೃಂದ ಪಡೆದಿರುವುದು ನನ್ನ ಜನ್ಮ ಸಾರ್ಥಕವಾಗಿದೆ. ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದರು.

ನಿವೃತ್ತ ಶಿಕ್ಷಕರಾದ ಪುಟ್ಟಪ್ಪ ಮಲ್ಲಿಗೇನಹಳ್ಳಿ, ಎಚ್‌.ಬಿ. ಹಾಲಪ್ಪ, ಗಂಗಾಧರಪ್ಪ , ಶಿವನಂದಪ್ಪ, ಸಿದ್ದರಾಮಪ್ಪ , ಎಂ. ಶೇಖರಪ್ಪ, ಶೇಖರಪ್ಪ, ಬಿ. ಕೃಷ್ಣಪ್ಪ, ಪಾಲಾಕ್ಷಪ್ಪ , ಶಿವಾನಂದಪ್ಪ, ಮಹೇಶ್ವರಪ್ಪ ಸೇರಿದಂತೆ ಇತರೆ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಬಾಕ್ಸ್:  ಆರಂಭದಲ್ಲೇ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕರಿಗೆ ಪುಷ್ಪಾ ಹಾಕುವುದರ ಮೂಲಕ ವೇದಿಕೆಗೆ ಅದ್ದೂರಿಯಾಗಿ ಸ್ವಾಗತಿಸಿದರು. ಶಿಕ್ಷಕ  ರಂಗಸ್ವಾಮಿ ನಿರೂಪಿಸಿದರು.

ಹಳೆಯ ವಿದ್ಯಾರ್ಥಿಗಳಾದ ಪ್ರೇಮಕುಮಾರ, ಪತ್ರಕರ್ತ ನಾಗರಾಜ್ ನ್ಯಾಮತಿ, ಸುಧಾಕರ ರಾಯ, ಜಗದೀಶ, ಸುರೇಂದ್ರ ಕಡೆಮನಿ, ಗುರುಮಲ್ಲೇಶ ಅನಿಲಕುಮಾರ,  ಪಂಚಾಕ್ಷರಿ, ಶಿವು ಎಸ್.ಎಮ್.ಟಿ, ಚಂಪಾ, ಪ್ರತಿಭಾ, ಜಯಶೀಲಾ, ಸವಿತಾ, ಗೀತಾ, ಲಲಿತಾ, ಶಿಕ್ಸೇಷಕರು ರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ