ಸಿವಿಲ್ ಮ್ಯಾಟರ್ ನೆಪದಲ್ಲಿ ಪ್ರಕರಣ ದಿಕ್ಕು ತಪ್ಪಿಸುತ್ತಿರುವ ಪೊಲೀಸರು: ಕ್ರಾಂತಿ, ರೈತನಿಗೆ ನ್ಯಾಯಕೊಡಿ ಇಲ್ಲವೇ ನಮ್ಮನ್ನು ಜೈಲಿಗೆ ಕಳಿಸಲು ಒತ್ತಾಯ

ವರದಿ:  ಎನ್.ಎನ್.

ಕ್ರಾಂತಿವಾಣಿ ವಾರ್ತೆ
ಸುರಪುರ: ಹುಣಸಗಿ ತಾಲೂಕಿನ ಬೈಲುಕುಂಟಿಯ ಕಬ್ಬು ಬೆಳೆದ ರೈತನಿಗೆ ನ್ಯಾಯಕೊಡಿ ಇಲ್ಲವೇ ನಮ್ಮನ್ನು ಜೈಲಿಗೆ ಕಳಿಸಿ ಎಂದು ಒತ್ತಾಯಿಸಿ ಶನಿವಾರ ದಲಿತ ಸಂಘರ್ಷ ಸಮಿತಿ ಸದಸ್ಯರು ಸುರಪುರ ಪೊಲೀಸ ಠಾಣೆ ಎದುರು ಪ್ರತಿಭಟಿಸಿದರು.
ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟನೆ ಮುಂದಾದಾಗ ದಲಿತ ಹೋರಾಟಗಾರರನ್ನು ಪೊಲೀಸ್ ಠಾಣೆಯಲ್ಲಿ ತಂದು ಕೂರಿಸಿದರು. ಎಲ್ಲರಿಂದಲೂ ಹೆಸರು ಪಡೆದುಕೊಂಡು ಸಹಿ ಹಾಕಿಸಿಕೊಂಡರು. ಹೋರಾಟದ ತೀವ್ರತೆ ಮಾತ್ರ ಕಡಿಮೆಯಾಗಲಿಲ್ಲ.ಪೊಲೀಸ್ ಠಾಣೆಯೊಳಗಡೆಯೇ ಮಧ್ಯಾಹ್ನದ ಆಹಾರ ಸೇವಿಸದೇ ಪ್ರತಿಭಟನೆ ನಡೆಸಿದರು. ಅಲ್ಲದೆ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯೂ ವಿಫಲವಾಯಿತು. ಪೊಲೀಸರು ಸಿವಿಲ್ ಮ್ಯಾಟರ್ ಎಂದೇಳುತ್ತಾ ವಿಷಯವನ್ನು ಎತ್ತಲೋ ಕೊಂಡೊಯ್ಯುತ್ತಿದ್ದಾರೆ ಎನ್ನುವಂತೆ ಭಾಸವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಕ್ರಾತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ದಲಿತರು ಎಸ್‌ಟಿಯವರಿಂದ ಜಮೀನು ಖರೀದಿಸಿ ಐದಾರು ವರ್ಷವಾಗಿದೆ. ಇಷ್ಟು ವರ್ಷವಿಲ್ಲದ್ದು, ಈಗ ಹೊಲದ ತುಂಬ ಬೆಳೆದಿರುವ ಕಬ್ಬನ್ನು ಕಡಿಯಲು ಬಿಡದೆ ದೌರ್ಜನ್ಯ ಎಸುಗುತ್ತಿದ್ದಾರೆ. ಹೊಲದಲ್ಲಿ ಬೆಳೆದು ೧೦ರಿಂದ ೨೦ ಕ್ವಿಂಟಲ್ ಮೆಣಸು ಬಿಡಿಸಿ ಕದ್ದೊಯ್ದಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕಳ್ಳರನ್ನು ಬಂಧಿಸದೆ ರಕ್ಷಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪ್ರಕರಣ ಎಂಬುದಾಗಿ ದಾಖಲಸದೆ ಸಿವಿಲ್ ಮ್ಯಾಟರ್ ೨ ತಿಂಗಳಿAದ ಹೋರಾಟಗಾರನ್ನು ಮತ್ತು ದಲಿತ ರೈತ ಕುಟುಂಬವನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ. ಇಲ್ಲಿ ವೈಯಕ್ತಿಕ ಅಥವಾ ಖಾಸಗಿ ವಿಷಯವೇ ಬಂದಿಲ್ಲ. ಆಗಿದ್ದ ಮೇಲೆ ಹೇಗೆ ಸಿವಿಲ್ ಮ್ಯಾಟರ್ ಹೇಗೆ ಆಗುತ್ತೆ. ಎದುರಿನವರು ಒಂದು ದೂರನ್ನು ನೀಡಿಲ್ಲ. ಜನತಾ ದರ್ಶನಲದಲ್ಲಿಯೂ ಕಬ್ಬನ್ನು ಕಡಿಯಲು ಅವಕಾಶ ಮಾಡಿಕೊಡಬೇಕು ಎಂಬುದಾಗಿ ಅರ್ಜಿ ಸಲ್ಲಿಸಿದಾಗ ಡಿಸಿಯವರು ಕಡಿಯುವಂತೆ ಮೌಖಿಕವಾಗಿ ಹುಣಸಗಿ ತಹಸೀಲ್ದಾರ್ ಅವರಿಗೆ ಸೂಚಿಸಿದರೂ ರಾಜಕೀಯ ಪ್ರಭಾವಕ್ಕೆ ಒಳಗಾಗಿ ದಲಿತರಿಗೆ ಕಾನೂನು ರೀತಿ ಸಹಕರಿಸುತ್ತಿಲ್ಲ. ಅಲ್ಲದೆ ಡಿವೈಎಸ್‌ಪಿ ಹಿಂಬರಹದಲ್ಲಿ ಸಿವಿಎಲ್ ಮ್ಯಾಟರ್ ಎಂಬುದಾಗಿ ಸೂಚಿಸಿ ಪ್ರಕರಣ ಮತ್ತು ಹೋರಾಟದ ಹಾದಿಯನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಬೇಡಿಕೆ ಈಡೇರದಿದ್ದರೆ ರಸ್ತೆ ರುಖೋ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಸಂಘಟನೆಯ ರವಿಚಂದ್ರ ಬೊಮ್ಮನಹಳ್ಳಿ, ಮಾನು ಗುರಿಕಾರ, ಮಲ್ಲಿಕಾರ್ಜುನ ಕುರುಕುಂದಿ, ಅಜೀಜ್‌ಸಾಬ್ ಐಕೂರು, ಮಹಾದೇವಪ್ಪ ಬಿಜಾಸ್ಪುರ, ಮೂರ್ತಿ ಬೊಮ್ಮನಹಳ್ಳಿ, ಬಸವರಾಜ ದೊಡ್ಡಮನಿ ಶೆಳ್ಳಗಿ, ರೇವಣಸಿದ್ದಪ್ಪ ಮಾಲಗತ್ತಿ, ಮರಿಯಪ್ಪ ಕಾಂಗ್ರೆಸ್, ಮುತ್ತುರಾಜ ಹುಲಿಕೇರಿ, ಮಲ್ಲಪ್ಪ ಬಾದ್ಯಾಪುರ, ಮಲ್ಲಿಕಾರ್ಜುನ ಶೆಳ್ಳಗಿ, ಉಮೇಶ ಲಿಂಗೇರಿ, ಹೊನ್ನಪ್ಪ ದೇವಿಕೇರಿ, ಹುಲಗಪ್ಪ ಬೈಲಕುಂಟಿ ಹಾಗೂ ದಲಿತ ವಿವಿಧ ಸಂಘಟನೆಗಳ ನಿಂಗಣ್ಣ ಗೋನಾಲ, ಮಾನಪ್ಪ ಶೆಳ್ಳಗಿ, ನಾಗರಾಜ ಓಕುಳಿ ಸೇರಿದಂತೆ ದಲಿತ ರೈತ ಕುಟುಂಬದವರು ಇದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ