ನೋಂದಣಿಯಾದ ನಿವೇಶನಗಳು ಸಹ ಹರಾಜು ಪ್ರಕ್ರಿಯೆಯಲ್ಲಿ ಪ್ರತ್ಯಕ್ಷಃ ಜನಾಕ್ರೋಶ ಗೊಂದಲದ ಗೂಡಾದ ನಿವೇಶನ ಹಂಚಿಕೆ: ಹರಾಜು ರದ್ದು

ಕ್ರಾಂತಿ ವಾಣಿ ಶಹಾಪುರ

ನಗರದ ಐ ಡಿ ಎಸ್ ಎಂ ಟಿಯ 32 ಮೂಲೆ ನಿವೇಶನಗಳನ್ನು ಹರಾಜಿಗೆ ನಗರ ಸಭೆ ಸಾರ್ವಜನಿಕರಿಂದ ಅರ್ಜಿಯನ್ನು ಅಹ್ವಾನಿಸಲಾಗಿತ್ತು. 32 ನಿವೇಶನಗಳಿಗೆ 338 ಜನರು 2000 ಅರ್ಜಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಶನಿವಾರ ಹರಾಜು ನಡೆಯುವ ಸಂದರ್ಭದಲ್ಲಿ ಪೌರಾಯುಕ್ತರು 13 ನಿವೇಶನಗಳ ಸಮಸ್ಯೆ ಇದೆ ಈಗ 19 ನಿವೇಶನಗಳಿಗೆ ಹರಾಜು ನಡೆಸಲಾಗುತ್ತಿದೆ ಎನ್ನುತ್ತಿದ್ದಂತೆ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಪರಿಣಾಮ ಹರಾಜು ಪ್ರಕ್ರಿಯೆಯನ್ನು ರದ್ದುಮಾಡಿರುವ ಘಟನೆ ಶನಿವಾರ ಜರುಗಿತು.

ಯಾವುದೇ ಮುನ್ಸೂಚನೆ ನೀಡದೆ 19 ನಿವೇಶನಗಳ ಸಾರ್ವಜನಿಕ ಹರಾಜಿಗೆ ಸಿದ್ಧತೆ ಮಾಡಿಕೊಂಡಿದ್ದ ಅಧಿಕಾರಿಗಳು ಸ್ಥಳಕ್ಕೆ ಬಂದು ಹರಾಜು ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡ ಜನರು, ಎಂಟು ನಿವೇಶನಗಳು ಉಪನೊಂದಣಿ ಅಧಿಕಾರಿ ಕಚೇರಿಯಲ್ಲಿ ನೊಂದಣಿಯಾಗಿವೆ.

ಆದರೂ ನೀನು ಅದೇ ನಿವೇಶನಗಳನ್ನು ಹರಾಜಿಗೆ ಯಾವ ಆಧಾರದ ಮೇಲೆ ಹಾಕಿರುವೆ. ಅರ್ಜಿ ಶುಲ್ಕ ಇಎಂಡಿ ತೆಗೆದುಕೊಂಡ ಮೇಲೆ ಹರಾಜು ಮಾಡಲೇ ಬೇಕು. ಇಲ್ಲದಿದ್ದರೆ ನಾವು ಯಾವುದೇ ಕಾರಣಕ್ಕೂ ನಿವೇಶನ ಹರಾಜು ಮಾಡಲು ಬಿಡುವುದಿಲ್ಲ. ನಿವೇಶನ ನೊಂದಣಿ ಯಾರು ಮಾಡಿಕೊಟ್ಟಿದ್ದಾರೆ. ನಗರಸಭೆ ಅಧಿಕಾರಿಗಳು ತಾನೆ. ಕಳ್ಳರು ನೀವು. ಒಂದೊಂದು ನಿವೇಶನಗಳನ್ನು ಒಂದಕ್ಕಿಂತ ಹೆಚ್ಚು ಜನರಿಗೆ ನೊಂದಣಿ ಮಾಡಿ ಕೊಟ್ಟಿದ್ದೀರಿ. ನಿಮ್ಮಂತ ಭ್ರಷ್ಟ ಅಧಿಕಾರಿಗಳು ಇರುವುದರಿಂದಲೇ ಅಮಾಯಕ ಜನರಿಗೆ ಮೋಸವಾಗುತ್ತಿದೆ ಎಂದು ಅರ್ಜಿ ಸಲ್ಲಿಸಿದ ಜನರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಐ ಡಿ ಎಸ್ ಎಂ ಟಿ ಕಮಿಟಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಅಧ್ಯಕ್ಷರು ಬರಲಾರದೆ ನೀವು ಯಾವ ಆಧಾರದ ಮೇಲೆ ಹರಾಜು ನಡೆಸುತ್ತೀರಿ. ಹರಾಜು ನಡೆಸಲು ನಿಮಗೆನು ಅಧಿಕಾರವಿದೆ. ನೀವು ಕಾಣದ ಕೈ ತಾಳಕ್ಕೆ ಕುಣಿಯುತ್ತಿದ್ದೀರಿ. ಅಲ್ಲದೆ ಅದಾಗಲೇ ಮಾರಾಟವಾಗಿದ್ದ ನಿವೇಶನವನ್ನು ಬೇರೆ ವ್ಯಕ್ತಿಯೊಬ್ಬರಿಗೆ ಮರು ಮಾರಾಟ ಮಾಡಿದ್ದಿರಿ ಈ ರೀತಿ ಮಾಡಲು ನಿಮಗೆ ನಾಚಿಕೆ, ಮಾನ ಇದೇನಾ ಎಂದು ಪೌರವಯುಕ್ತರಿಗೆ ನೇರವಾಗಿ ಪ್ರಶ್ನಿಸಿದರು. ಜನರ ಆಕ್ರೋಶ ಮತ್ತು ಪ್ರಶ್ನೆಗೆ ಉತ್ತರಿಸದೆ ಪೌರಾಯುಕ್ತ ಸಪ್ಪೆ ಮೊರೆ ಹಾಕಿಕೊಂಡು ನಿಂತಿರುವ ಘಟನೆ ನಡೆಯಿತು.

ನಗರ ಸಭೆಯ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ. ಪ್ರಭಾವಿ ವ್ಯಕ್ತಿಯ ಕೈಗೊಂಬೆಯಂತೆ ನಗರಸಭೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿವೇಶನಗಳನ್ನು ಮೊದಲು ಮಾರಾಟ ಮಾಡಿದ ಅಧಿಕಾರಿಗಳು ಈಗ ಪುನ ಅದೇ ನಿವೇಶನಗಳಿಗೆ ಹರಾಜು ಇಟ್ಟಿದ್ದಾರೆ. ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇದು ತಾಜಾ ಉದಾಹರಣೆಯಾಗಿದೆ.

ಅಪ್ಪಣ್ಣ ದಶವಂತ ನಗರಸಭೆ ಸದಸ್ಯರು ಶಹಾಪುರ.

ಜನ ಕದ್ದು ಮುಚ್ಚಿ ಬರೆದು ಕೊಳ್ಳುವ ಮಟಕ ಚೀಟಿಗೆ ಬೆಲೆ ಇದೆ. ಆದರೆ ಹಣ ಪಡೆದು ಇವರು ನೀಡಿರುವ ಚೀಟಿಗೆ ಯಾವುದೇ ಬೆಲೆ ಇಲ್ಲ. ರಸೀದಿ ಕೊಡದೆ ಬಿಳಿ ಹಾಳೆಯಲ್ಲಿ ಬರೆದು ಕೊಟ್ಟಿದ್ದನ್ನು ನೋಡಿದರೆ ನಗರ ಸಭೆಯ ಆಡಳಿತ ವ್ಯವಸ್ಥೆ ಹೇಗಿದೆ ಎಂದು ತಿಳಿಯುತ್ತದೆ. ಕಾನೂನು ಬಾಹಿರವಾಗಿ ನಿವೇಶನ ಹರಾಜು ಮಾಡುವಲು ಹೊರಟಿರುವ ಅಧಿಕಾರಿಗಳ ವಿರುದ್ಧ ಚೀಟಿಂಗ್ ಕೇಸ್ ದಾಖಲಿಸಬೇಕು.
ಮಹೇಶ್ ಗೌಡ ಸುಬೇದಾರ್.
ರಾಜ್ಯ ಕಾರ್ಯಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ