ತರಕಾರಿ ಮಾರಾಟಗಾರರ ಬೇಡಿಕೆ ಈಡೇರಿಸಲು ಒತ್ತಾಯ,, ಬೀದಿಬದಿ ವ್ಯಾಪಾರಿಗಳಿಂದ ನಗರಸಭೆ ಮುಂದೆ ಪ್ರತಿಭಟನೆ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ  ಸುರಪುರ: ನಗರದ ತರಕಾರಿ ಮಾರುಕಟ್ಟೆ ಹೊರತುಪಡಿಸಿ ಅನಗತ್ಯವಾಗಿ ಪಟ್ಟಣದ ಗಾಂಧಿ ಚೌಕ, ದರಬಾರ ರಸ್ತೆ ಹಾಗೂ ದುರುದ್ದೇಶದಿಂದ ಬೆಳಗಿನ ೩ ಗಂಟೆಗೆ ಹೋಲ್‌ಸೇಲ್ ತರಕಾರಿ ಮಾರುವವರ ವಿರುದ್ಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಬೀದಿಬದಿ ವ್ಯಾಪಾರಿಗಳು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ನಗರ ಸಭೆಯಿಂದ ನಗರದ ಮಧ್ಯದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿದರೂ ಕೆಲವರು ಗಾಂಧಿಚೌಕ, ಬಸ್ ನಿಲ್ದಾಣ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮುಂಜಾನೆ ಮತ್ತು ಸಂಜೆ ತುಂಬಾ ಜನದಟ್ಟಣ ಯಾಗಿ ಅಪಘಾತಗಳಾಗುವ ಸಂಭವಿಸುತ್ತಿವೆ ಎಂದರು.


ನಗರದ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ತರಕಾರಿ ಮಾರಾಟ ಮಾಡುತ್ತಿರುವುದು ಅಧಿಕವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ನಗರಸಭೆ ವಿಫಲವಾಗಿದೆ. ಇದರಿಂದ ತರಕಾರಿ ಮಾರುಕಟ್ಟೆಯಲ್ಲಿ ಕೊಠಡಿಗಳನ್ನು ಬಾಡಿಗೆ ಪಡೆದು ಮಾರಾಟು ಮಾಡುವವರು ಹಲವಾರು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಆದ್ದರಿಂದ ರಸ್ತೆ ಬದಿಯಲ್ಲಿ ಕುಳಿತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದ ವಲಭಬಾಯಿ ಪಟೇಲ್ ಚೌಕ, ಗಾಂಧಿ ಚೌಕ ಮುಂದುಗಡೆಯ ರಸ್ತೆ, ಬಸ್ ನಿಲ್ದಾಣ, ಹಳೆಯ ಕೋರ್ಟ್ ಹತ್ತಿರ
ತರಕಾರಿ ಹರಾಜು ಮಾಡುವ ಸಮಯ ಬೆಳಗ್ಗೆ ೩ ಗಂಟೆ ಬದಲು ಬೆಳಗ್ಗೆ ೬:೩೦ ರಿಂದ ೭:೩೦ರ ವೇಳೆಗೆ ಮಾಡಬೇಕು. ತರಕಾರಿ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಬೇಕು. ಖಾಸಗಿಯವರಿಂದ ಬಾಡಿಗೆ ಪಡೆದಂತಹ ಅಂಗಡಿಗಳಲ್ಲಿ ಮಾತ್ರ ತರಕಾರಿ ಮಾರಾಟ ಮಾಡಲು ಅವಶಕಾಶ ನೀಡಬೇಕು, ರಸ್ತೆ ಬದಿಯಲ್ಲಿ ಯಾವುದೇ ಕಾರಣಕ್ಕೂ ತರಕಾರಿ ಮಾರಾಟ ಮಾಡಲು ಅವಕಾಶ ನೀಡಬಾರದು ಆಗ್ರಹಿಸಿದರು.
ಬೀದಿಬದಿ ವ್ಯಾಪಾರಿಗಳಾದ ರೇಣುಕಾ, ಸುರೇಖಾ, ಮಹಾದೇವಿ, ಪಾರಮ್ಮ, ಶಾಂತಮ್ಮ, ರೇಣುಕಾ ಚಳ್ಳಿಗಿಡ, ಮಹಾದೇವಿ ದಾಸರು, ಶಾಂತಾ, ಲಕ್ಷ್ಮೀ, ಶಶಿಕಲಾ, ಸಾಬವ್ವ, ತಿಪ್ಪವ್ವ, ಗಂಗವ್ವ, ಸುಬ್ಬವ್ವ, ಮಾನವ್ವ, ಶೋಭಾ, ವಿಜಯಲಕ್ಷ್ಮೀ, ಭೀಮರಾಯ ದಾಸರ, ಶರಣು ದೊಣ್ಣಿಗೇರಾ, ನಾಗಪ್ಪ ಸಿದ್ದಾಪುರ, ಶರ್ಲುದ್ದೀನ್, ರಹಮಾನ್ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ