ಸಮಾನತೆ ಸಾರಿದ ಮಡಿವಾಳ ಮಾಚಿದೇವರು- ಹಳ್ಳೆ

ಮಡಿವಾಳನ ಸಿಟ್ಟು ಬಟ್ಟೆ ಮೇಲಲ್ಲ ಕೊಳೆ ಮೇಲೆ — ಅಂಚೆಸೂಗೂರ

ಮಡಿವಾಳ ಮಾಚಿದೇವರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ

ಕ್ರಾಂತಿವಾಣಿ ಶಹಾಪುರ.

ಶುದ್ಧ ಕಾಯಕ ಜೀವಿಗಳಾಗಿದ್ದ ಮಡಿವಾಳ ಮಾಚಿದೇವರು ೧೨ ನೇ ಶತಮಾನದ ಸರ್ವ ಶ್ರೇಷ್ಠ ಶರಣರೆಂದರೆ ಮಡಿವಾಳ ಮಾಚಿದೇವರು. ಇವರ ಕಾಯಕ ನಿಷ್ಠೆ, ಹೇಗಿತ್ತೆಂದೆರೆ, ಶಿವಶರಣರ, ಕಾಯಕ ನಿಷ್ಠರ ಬಟ್ಟೆಗಳನ್ನು ಮಾತ್ರ ಮಡಿ ಮಾಡುತ್ತಿದ್ದರು. ಸೋಮಾರಿಗಳು, ಪರಾವಲಂಬಿಗಳ ಬಟ್ಟೆಗಳನ್ನು ಎಂದಿಗೂ ಮುಟ್ಟುತ್ತಿರಲಿಲ್ಲ ಎಂದು ಉಪನ್ಯಾಸಕ ಭೀಮಣ್ಣ ಅಂಚೆಸೂಗೂರು ತಿಳಿಸಿದರು.
ನಗರದ ಸಂಗೊಳ್ಳಿ ರಾಯಣ್ಣ ಸಭಾಭವನದಲ್ಲಿ ಗುರುವಾರ ಗಣಚಾರಿ ಶ್ರೀಮಡಿವಾಳ ಮಾಚಿದೇವರ ಜಯಂತ್ಯುತ್ಸವ ಅಂಗವಾಗಿ ತಾಲೂಕು ಆಡಳಿತ ಮತ್ತು ನಗರಸಭೆಯಿಂದ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಒಮ್ಮೆ ಅಣ್ಣ ಬಸವಣ್ಣನವರು, ಬೇಡುವವನಿಲ್ಲದೆ ಬಡವನಾದೆ ಎಂಬ ವಚನವಿತ್ತವಾಗ ಮಾಚಿತಂದೆಗಳು ಸಿಟ್ಟಾಗಿ, ನೀವೊಬ್ಬರೆ ದಾನಿಗಳೇ ಉಳಿದವರೆಲ್ಲ ದಾರಿದ್ರರೇ.? ಎಂದು ಮಾಚಿತಂದೆ ಪ್ರಶ್ನಿಸಿದರು. ತಕ್ಷಣ ಅಹಂನಿAದ ಹೊರ ಬಂದ ಮಾತುಗಳಿಗೆ ಕ್ಷಮೆಯಾಚಿಸಿದ ಬಸವಣ್ಣನನ್ನು, ಮಡಿವಾಳ ಬಟ್ಟೆಯ ಮೇಲಿನ ಸಿಟ್ಟಿನಿಂದ ಒಗೆಯುವದಿಲ್ಲ. ಅದರಲ್ಲಿನ ಕೊಳೆ ತೆಗೆಯಲು ಹೊಗೆಯುತ್ತಾನೆಂದು ಬಸವಣ್ಣನನ್ನು ಅಪ್ಪಿಕೊಳ್ಳುತ್ತಾನೆ.
ಇಂತಹ ಸಾಕಷ್ಟು ಪ್ರಸಂಗಳು ಶರಣರಲ್ಲಿಯೇ ಜಾಗೃತಿ ಮೂಡಿಸುವಂತ ಕೆಲಸ ಮಾಚಿತಂದೆಗಳು ಮಾಡಿದ್ದಾರೆ. ಮಾಚಿತಂದೆಗಳು ಇಲ್ಲದಿದ್ದರೆ, ಪ್ರಸ್ತುತ ನಾವೆಲ್ಲ ವಚನಗಳೇ ಓದುತ್ತಿರಲಿಲ್ಲ. ವಚನಗಳನ್ನು ಸಂರಕ್ಷಿಸಿದ ಕೀರ್ತಿ ಮಾಚಿತಂದೆಗಳಿಗಿದೆ.
ಮಡಿವಾಳ ಸಮುದಾಯ ಸಣ್ಣದು, ಆದರೆ ಅವರು ಮಾಡುವ ಕಾಯಕ ಶುದ್ಧವಾದದು. ಪ್ರಪ್ರಥಮ ಬಾರಿಗೆ ಬಟ್ಟೆಯಲ್ಲಿನ ಕೊಳೆ ತೆಗೆಯಲು ಸಾಬೂನು ಬಂದಿದ್ದು, ಇದೇ ಸಮುದಾಯದಿಂದ. ಹಿಂದೆ ಸವಳನ್ನು ತೆಗೆದುಕೊಂಡು ಬಟ್ಟೆಯ ಕೊಳೆ ತೆಗೆಯುತ್ತಿದ್ದರು. ಆ ಹಿನ್ನೆಲೆಯಿಂದಲೇ ಸೋಪು ಬಂದಿರುವದು. ಆಸ್ಪತ್ರೆಯಲ್ಲಿನ ರೋಗಿ ವೈದ್ಯರ ಚಿಕಿತ್ಸೆಯಿಂದ ಗುಣಮುಖವಾಗುದಕ್ಕಿಂತ ಮೊದಲು, ಮಡಿವಾಳ ಅಲ್ಲಿನ ಬಟ್ಟೆ ಬರೆಗಳನ್ನು ನಿತ್ಯ ಸ್ವಚ್ಛ ಮಾಡಿರುವದರಿಂದಲೇ ರೋಗಿ ಗುಣಮುಖವಾಗುತ್ತಾನೆ ಎಂಬುದು ಅಷ್ಟೆ ಸತ್ಯ ಎಂದರು.
ಹಿAದುಳಿದ ಸಮಾಜವಾದ ಮಡಿವಾಳ ಸಮುದಾಯ ಶೈಕ್ಷಣಿಕ, ರಾಜಕೀಯ ಆರ್ಥಿಕವಾಗಿ ಬಲ ಬರುವಂತ ಯೋಜನೆಗಳು ಸರ್ಕಾರ ಜಾರಿಗೊಳಿಸಬೇಕಿದೆ. ಮಡಿವಾಳ ಸಮಾಜಕ್ಕೆ ತನ್ನದೆ ಆದ ಇತಿಹಾಸವಿದೆ ಎಂದರು.

ಒಂದು ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಮಡಿವಾಳ ಜನಾಂಗವಿದೆ. ಈ ರಾಷ್ಟ್ರದ 18 ರಾಜ್ಯಗಳಲ್ಲಿ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು ಕರ್ನಾಟಕದಲ್ಲಿಯೂ ಈ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ನಿರಂತರ ಹೋರಾಟ ನಡೆಯುತ್ತಲೇ ಬಂದಿರುತ್ತದೆ. ಪ್ರಸ್ತುತ ಈ ಜನಾಂಗ ಪ್ರವರ್ಗ 2ಎ ಯಲ್ಲಿ ಗುರುತಿಸಿಕೊಂಡಿದೆ. ಆರ್ಥಿಕವಾಗಿ ಸಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರ ಹಿಂದುಳಿದ ಸಮುದಾಯವಾಗಿದೆ. ಮಡಿವಾಳ ಮಾಚಿದೇವರ ಕಾಲದಿಂದಲೂ ಈ ಸಮುದಾಯ ಬಟ್ಟೆ ತೊಳೆಯುವ ಕಾಯಕ ಬಿಟ್ಟು ಬೇರೆ ಕಾಯಕ ಮಾಡುತ್ತಿಲ್ಲ. ಅತ್ಯಂತ ಚಿಕ್ಕ ಸಮುದಾಯವಿರುವ ನಮ್ಮ ಸಮುದಾಯವಾಗಿದ್ದು, ಈಗಾಗಲೇ ಮೈಸೂರು ವಿಶ್ವವಿದ್ಯಾಲಯದಿಂದ ಕುಲಶಾಸ್ತ್ರೀಯ ಅಧ್ಯಯನ ಆಗಿದೆ. ಅತ್ಯಂತ ಚಿಕ್ಕದಾಗಿರುವ ನಮ್ಮ ಸಮುದಾಯಕ್ಕೆ ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುವೆ.

ಭೀಮರಾಯ ಮುದನೂರು.

ಕಾರ್ಯಕ್ರಮಕ್ಕೆ ಉದ್ಘಾಟಿಸಿದ ತಹಶೀಲ್ದಾರ ಉಮಾಕಾಂತ ಹಳ್ಳೆ ಮಾತನಾಡಿ, ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಅವರ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಮಡಿವಾಳೇಶ್ವರ ಮಠದ ಶೇಖಪ್ಪ ಸಾಧು ಸಾನ್ನಿಧ್ಯವಹಿಸಿದ್ದರು. ತಾಪಂ ಇಓ ಸೋಮಶೇಖರ ಬಿರೇದಾರ, ಸಂಶೋಧಕ, ಖಾಜಾನೆ ಅಧಿಕಾರಿ ಡಾ.ಎಂ.ಎಸ್.ಶಿರವಾಳ, ಸಾಯಬಣ್ಣ ಮಡಿವಾಳಕರ್, ಭೀಮರಾಯ ಮುದನೂರ, ನಗರಸಭೆ ಸದಸ್ಯ ಮಹೇಶ ಮಡಿವಾಳ, ಪ್ರಾಂಶುಪಾಲ ದೇವಿಂದ್ರಪ್ಪ ಮಡಿವಾಳ ಉಪಸ್ಥಿತರಿದ್ದರು. ಮಹಾದೇವಪ್ಪ ಸಗರ, ಸಮಾಜದ ಯೂಥ್ ಅಧ್ಯಕ್ಷ ನಾಗರಾಜ ಮಡಿವಾಳ, ಮಂಜುನಾಥ ಇತರರು ಭಾಗವಹಿಸಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ