ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರುಪುರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಫೆಬ್ರವರಿ 2ರಂದು ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆಗೆ ತಹಸೀಲ್ದಾರ್ ಗೈರಾಗಿದ್ದು, 11ಗಂಟೆಗೆ ಆರಂಭವಾಗಬೇಕಿದ್ದ ಸಭೆ 12 ಗಂಟೆಯಾದರೂ ಆರಂಭವಾಗದಿದ್ದಕ್ಕೆ ದಲಿತ ಮುಖಂಡರಿಂದ ಆಕ್ರೋಶವ್ಯಕ್ತವಾಯಿತು.
ತಹಶೀಲ್ದಾರ್ ಕೆ ವಿಜಯ್ ಕುಮಾರ್ ಅವರು ವೃಥಾ ಸಭೆಗೆ ಗೈರಾಗಿದ್ದಾರೆ. ಕೆಲಸವಿದ್ದರೆ ಸಭೆ ಮುಂದೂಡಬಹುದಾಗಿತ್ತು. ಆದರೆ ತಹಸೀಲ್ದಾರ ನಿರ್ಲಕ್ಷ್ಯಕ್ಕೆ
ದಲಿತ ಮುಖಂಡರಿಂದ ಅಕ್ರೋಶ ವ್ಯಕ್ತವಾಯಿತು.
ದಲಿತ ಮುಖಂಡ ಶಿವಲಿಂಗ ಹಸನಾಪುರ ಮಾತನಾಡಿ, ಸರಿಯಾದ ಸಮಯಕ್ಕೆ ಪೂರ್ವಭಾವಿ ಸಭೆಗಳನ್ನು ಆಯೋಜಿಸಲು ಸಾಧ್ಯವಾಗದಿದ್ದರೆ ದಲಿತ ಮುಖಂಡರಿಗೆ ನೋಟಿಸುಗಳನ್ನು ಯಾಕೆ ಕೊಡಬೇಕು? ತಾಲೂಕು ಮಟ್ಟದ ಅಧಿಕಾರಿಗಳಿಗೆ ಯಾವುದೇ ರೀತಿಯಾದಂತಹ ಜವಾಬ್ದಾರಿಗಳು ತಾಲೂಕಿನಲ್ಲಿ ಇರುವುದಿಲ್ಲ. ಆದ್ದರಿಂದ ದಲಿತ ಮುಖಂಡರ ಮತ್ತು ಮುಖಂಡರುಗಳ ಸಮಯವನ್ನು ತಾಲೂಕು ಮಟ್ಟದ ಅಧಿಕಾರಿಗಳು ಅನಾವಶ್ಯಕವಾಗಿ ಕಾಲಹರಣ ಮಾಡುತ್ತಿದ್ದಾರೆ. ತಾಲೂಕು ಆಡಳಿತದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತದ ಜಿಲ್ಲಾಧಿಕಾರಿಯವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಲ್ಪಸಂಖ್ಯಾತ ಘಟಕದ ಮುಖಂಡ ಉಸ್ತಾದ್ ವಜಾತ್ ಹುಸೇನ್ ಮಾತನಾಡಿ, ತಹಶೀಲ್ದಾರರಿಗೆ ಸಮಯದ ಪ್ರಜ್ಞೆ ಇಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಸಾಕಷ್ಟು ಪ್ರಮಾಣದಲ್ಲಿ ಗೈರಾಗಿದ್ದಾರೆ. ಯಾರಿಗೂ ಕೂಡ ಸಂವಿಧಾನದ ಮೇಲೆ ಗೌರವವಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡರು, ಸಂವಿಧಾನ ಪ್ರೇಮಿಗಳು ಸೇರಿದಂತೆ ಇತರರಿದ್ದರು.