16 ಅಲ್ಲ, ಸುರಪುರದಲ್ಲಿ 17ರಂದು ಸಂವಿಧಾನ ಜಾಗೃತ ಜಾಥಾ ಆರಂಭ,,ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ಪೋರ್ಸ್ ಸಭೆ..

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ
ಸುರಪುರ: ಸಂವಿಧಾನ ಜಾಗೃತಿ ಜಾಥಾವನ್ನು ಹುಣಸಗಿಯಿಂದ ಫೆ.೧೬ರ ಅಲ್ಲ ಬದಲಾಗಿ ಫೆ.೧೭ರಂದು ಸಂಜೆ ಕಕ್ಕೇರಾಕ್ಕೆ ಬರುವುದನ್ನು ತಾಲೂಕು ಮಟ್ಟದ ಅಧಿಕಾರಿಗಳು ಬರಮಾಡಿಕೊಳ್ಳಲಿದ್ದಾರೆ. ಅಲ್ಲಿಂದ ತಾಲೂಕಿನಲ್ಲಿ ಸಂಚಾರ ನಡೆಸಲಿದೆ, ಎಂದು ತಹಸೀಲ್ದಾರ್ ವಿಜಯಕುಮಾರ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ಪೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಫೆ. ೧೭ರಂದು ಸಂಜೆ ಕಕ್ಕೇರಾದಲ್ಲಿ ಸಂವಿಧಾನ ಜಾಗೃತ ಜಾಥಾದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಂವಿಧಾನದ ಜಾಗೃತಿ ಜಾಥಾದ ಧ್ಯೇಯೋದ್ದೇಶಗಳನ್ನು ಪ್ರಸ್ತುತ ಪಡಿಸಲಾಗುವುದು. ನಿತ್ಯ ನಾಲ್ಕೆöÊದು ಗ್ರಾಮ ಪಂಚಾಯತ್‌ಗಳಲ್ಲಿ ಸಂಚಾರ ನಡೆಸಲಿದೆ. ಫೆ. ೨೦ರಂದು ಬೃಹತ್ ವೇದಿಕೆ ಕಾರ್ಯಕ್ರಮ ಕೆಂಭಾವಿ, ೨೩ರಂದು ಅದ್ಧೂರಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ತಾಪಂ ಇಒ ಬಸವರಾಜ ಸಜ್ಜನ್ ಮಾತನಾಡಿ, ಜಾಥಾವೂ ಬೆಳಗ್ಗೆ ೯ ರಿಂದ ಆರಂಭವಾಗಿ ಸಂಜೆ ೫ ಗಂಟೆಗೆ ಮುಕ್ತಾಯವಾಗಲಿದೆ. ಇದು ತಾಲೂಕಿನಲ್ಲಿ ಸಂಚಾರ ನಡೆಯುವವರೆಗೂ ಸಮಯ ಚಾಲ್ತಿಯಲ್ಲಿರುತ್ತದೆ. ಫೆ. ೧೮ ರಂದು ತಿಂಥಣ , ದೇವಾಪುರ, ದೇವತ್ಕಲ್, ಕಚಕನೂರು ಗ್ರಾಪಂ ವ್ಯಾಪ್ತಿಯಲ್ಲಿ ಸಂಚಾರ, ಫೆ. ೧೯ರಂದು ಆಲ್ದಾಳ, ವಾಗಣಗೇರಾ, ಪೇಠಾ ಅಮ್ಮಾಪುರ, ಹೆಗ್ಗಣದೊಡ್ಡಿ, ಫೆ. ೨೦ರಂದು ಮಾಲಗತ್ತಿ, ಕಿರದಳ್ಳಿ, ಕಚಕನೂರು, ಕರಡಕಲ್, ಕೆಂಭಾವಿ, ಫೆ. ೨೧ರಂದು ಯಕ್ತಾಪುರ, ಏವೂರು, ಯಾಳಗಿ, ಮಲ್ಲಾ ಬಿ, ಫೆ. ೨೨ರಂದು ನಗನೂರು, ದೇವರಗೋನಾಲ, ಬಾದ್ಯಾಪುರ, ದೇವಿಕೇರಾ, ಹೆಮನೂರು, ಫೆ. ೨೩ರಂದು ಸೂಗುರು, ಖಾನಾಪುರ ಎಸ್.ಎಚ್., ಅರೆಕೇರಾ ಮುಗಿದ ಬಳಿಕ ಸುರಪುರಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣಾಧಿಕಾರಿ ಎಂ.ಡಿ. ಸಲೀಮ್ ಮಾತನಾಡಿ, ಜಾಥಾ ನಿತ್ಯವೂ ಒದೊಂದು ಇಲಾಖೆಯ ಅಧಿಕಾರಿಗಳು ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ವ್ಯವಸ್ಥೆ ಮಾಡುತ್ತಾರೆ. ಫೆ. ೧೭ರಂದು ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ, ಸಹಾಯಕ ಪಶುಪಾಲನಾ ಇಲಾಖಾಧಿಕಾರಿ, ೧೮ರಂದು ಶಿಶು ಅಭಿವೃದ್ಧಿ ಅಧಿಕಾರಿ, ಸಂಬAಧ ಪಟ್ಟ ಪಿಡಿಒಗಳು, ೧೯ರಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಸಬಂಧ ಪಟ್ಟ ಪಿಡಿಗಳು ಅದರ ಜವಬಾದಾರಿ ನೋಡಿಕೊಳ್ಳಲಿದ್ದಾರೆ ಎಂದರು.
ಫೆ. ೨೦ರಂದು ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ, ಬಿಸಿಎಂ ಇಲಾಖೆ, ಸಂಬAಧ ಪಟ್ಟ ಪಿಡಿಒಗಳು, ೨೧ರಂದು ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ೨೨ರಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು, ಸಂಬAಧಪಟ್ಟ ಪಿಡಿಒಗಳು, ೨೩ರಂದು ನಗರಸಭೆ, ಕಾರ್ಮಿಕ ಇಲಾಖೆ ಅಧಿಕಾರಿಗಳು, ಸಬಂಧಪಟ್ಟ ಪಿಡಿಒಗಳು ಬೀಳ್ಕೊಡುಗೆ ಸಮಾರಂಭದ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಡಾ. ಶ್ರುತಿ, ಡಾ. ಸುರೇಶ ಹಚ್ಚಡ, ಪರಮೇಶ್ವರ, ಡಾ. ಭೀಮರಾಯ ಹವಾಲ್ದಾರ, ಶಿವಪುತ್ರ, ಭಾಗ್ಯಶ್ರೀ, ಭೀಮಾಶಂಕರ ನಾಯಕ, ವಿಶ್ವನಾಥ್, ರಮೇಶ, ಜೇಲಸಿಂಗ್ ನಾಯಕ್, ರಾಜ ಪೋಲಂಪಲ್ಲಿ, ಜೆ.ಕೆ. ಪವಾರ, ಮಹ್ಮದ್ ಗಿಯಾಸ್, ಕವಿತಾ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ