“ಸಾಂಸ್ಕೃತಿಕ ನಾಯಕ” ಬಸವಣ್ಣ ಭಾವಚಿತ್ರ ಅನಾವರಣ

ವರದಿ : ಎನ್.ಎನ್.

ಕ್ರಾಂತಿವಾಣಿ ವಾರ್ತೆ ಸುರಪುರ: ರಾಜ್ಯ ಸರಕಾರದ ಆದೇಶದಂತೆ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಸಾಂಸ್ಕೃತಿಕ ನಾಯಕ ಭಾವಚಿತ್ರ ವನ್ನು ತಾಲೂಕು ಮಟ್ಟದ ಅಧಿಕಾರಿಗಳು ಅನಾವರಣಗೊಳಿಸಿದರು..
ತಹಸೀಲ್ದಾರ್ ವಿಜಯಕುಮಾರ ಮಾತನಾಡಿ, ಎಲ್ಲ ಸರಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರವನ್ನು ಸ್ಥಾಪಿಸಿ ಪೂಜೆ ಸಲ್ಲಿಸಬೇಕು. ಸಾಂಸ್ಕೃತಿಕ ನಾಯಕನ ಭಾವಚಿತ್ರ ಇಟ್ಟು ಪೂಜೆ ಮಾಡದಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಂದು ಸರಕಾರಿ ಕಚೇರಿಗಳಲ್ಲಿ ಬಸವಣ್ಣವರ ಭಾವಚಿತ್ರ ಕಡ್ಡಾಯವಾಗಿರಬೇಕು ಎಂದರು.ಉಪ ಖಜನಾಧಿಕಾರಿ ಸಣಕೆಪ್ಪ ಉಪನ್ಯಾಸ ನೀಡಿದರು. ತಾಪಂ ಇಒ ಬಸವರಾಜ ಮಾತನಾಡಿದರು.

ಪೌರಾಯುಕ್ತ ಜೀವನ ಕಟ್ಟಿಮನಿ, ಸಿಡಿಪಿಒ ಅನಿಲ್ ಕಾಂಬ್ಳೆ, ಸಮಾಜ ಕಲ್ಯಾಣ ಅಧಿಕಾರಿ ಎಂ.ಡಿ. ಸಲೀಮ್, ಪಿಡಬ್ಲ್ಯುಡಿ ಎಇಇ ಎಸ್.ಜಿ. ಪಾಟೀಲ, ನಗರ ನೀರು ನೈರ್ಮಲ್ಯ ಅಧಿಕಾರಿ ಹನುಮಂತ ಪಾಟೀಲ, ಉಪ ನೋಂದಾಣ ಅಧಿಕಾರಿ ಗುರುರಾಜ ಸಜ್ಜನ, ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ಮುರಗೇಶಿ ನಿಷ್ಠಿ ದೇಶಮುಖ್, ಮಹೇಶ ಪಾಟೀಲ, ಮಲ್ಲಿಕಾರ್ಜುನ ರೆಡ್ಡಿ, ಜಗದೀಶ ಪಾಟೀಲ, ಡಾ.ಎಂ.ಎಸ್. ಕನಕ ರೆಡ್ಡಿ, ಪ್ರಕಾಶ ಬಣಗಾರ, ಉದಯಕುಮಾರ್ ಕೆ, ಸಿದ್ದನಗೌಡ ಪಾಟೀಲ್, ಗುರುನಾಥ್ ಶೀಲವಂತ, ಶಿವು ಸಾಹುಕಾರ ರುಕ್ಮಾಪುರ ಸೇರಿದಂತೆ ಇತರರು ಇದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ