ಕ್ರಾಂತಿ ವಾಣಿ ಶಾಹಾಪುರ.
ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಹಳೆಪೇಟೆ ಜಾಂಬವ ನಗರದ ನಿವಾಸಿಯಾದ ಭೀಮವ್ವ ಮಲ್ಲಪ್ಪ ಸುರಪುರಕರ್ (78) ಶನಿವಾರ ನಿಧನ ಹೊಂದಿದರು. ಮೃತರು ಪತಿ ಹಾಗೂ ನಗರ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಮಾಜಿನಗರ ಸಭೆ ಸದಸ್ಯ ವಸಂತ್ ಕುಮಾರ್ ಸುರಪುರಕರ್ ಸೇರಿದಂತೆ 2 ಜನ ಪುತ್ರರರನ್ನು ಮೂರು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ರವಿವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಿರಿಯರಾದ ಭೀಮವ್ವ ಸುರಪುರಕರ್ ಇವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಮತ್ತು ಅವರ ಕುಟುಂಬಕ್ಕೆ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ್, ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜಪ್ಪ ಗೌಡ ದರ್ಶನಾಪುರ್, ಅಮರೇಶ್ ಗೌಡ ದರ್ಶನಾಪುರ್, ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ತಿಳಿಸಿದ್ದಾರೆ.