ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಆರಂಭವಾಗಿರುವ ನಿಮಿತ್ತ ಫೆ. 2೦ ರಿಂದ 22ರವರೆಗೆ ರಾಜ್ಯ ಮಟ್ಟದ ಮುಕ್ತ ಬಿಲ್ಲುಗಾರಿಕೆ ಸ್ಪರ್ಧೆ, ಸೈಕ್ಲಿಂಗ್ ಮತ್ತು ಮಿನಿ ಮ್ಯಾರಥಾನ್ ಓಟ ಸ್ಪರ್ಧೆಗಳು ನಡೆಯಲಿವೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಸಜ್ಜನ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಶನಿವಾರ ವಿವಿಧ ಕ್ರೀಡೆಯ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪುರುಷ ಮತ್ತು ಮಹಿ¼ ರಾಜ್ಯ ಮಟ್ಟದ ಮುಕ್ತ ಬಿಲ್ಲುಗಾರಿಕೆ ಸ್ಪರ್ಧೆ, sಸೈಕ್ಲಿಂಗ್ ಮತ್ತು ಮಿನಿ ಮ್ಯಾರಥಾನ್ ಓಟ ಆಯೋಜಿಸಲಾಗಿದೆ ಎಂದರು.
ಫೆ. ೨೦ರಂದು ಸುರಪುರ ನಗರದ ಶ್ರೀ ಪ್ರಭು ಕಾಲೇಜಿನಲ್ಲಿ ಬೆಳಗ್ಗೆ ೧೦:೦೦ ಗಂಟೆಯಿAದ ಪುರುಷ ಮತ್ತು ಮಹಿಳೆಯರಿಗಾಗಿ ರಾಜ್ಯಮಟ್ಟದ ಮುಕ್ತ ಬಿಲ್ಲುಗಾರಿಕೆ ಸ್ಪರ್ಧೆಗಳು ಜರುಗಲಿವೆ. ಬಿಲ್ಲುಗಾರಿಕೆ ಸ್ಪರ್ಧೆಗೆ ಬೆಂಗಳೂರು, ಚಾಮರಾಜ ನಗರ, ಸ್ಥಳೀಯರು, ಹಾಗೂ ಇತರೆ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಫೆ. ೨೧ ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬೆಳಗ್ಗೆ ೮:೦೦ ಗಂಟೆಗೆ ೨೫ ಕಿ.ಮೀ. ಸೈಕ್ಲಿಂಗ್ ಹಾಗೂ ಮಹಿಳೆಯರಿಗೆ ೧೫ ಕಿ.ಮೀ. ಸೈಕ್ಲಿಂಗ್ ಆರಂಭವಾಗಲಿದೆ. ಸೈಕ್ಲಿಂಗ್- ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರೆ ಸ್ಪರ್ಧಾಳುಗಳು ಬರುವರು. ಯಾದಗಿರಿ ನಗರದಲ್ಲಿ ಮಿನಿ ಮ್ಯಾರಥಾನ್ ಸ್ಪರ್ಧೆ ಪುರುಷರು ಮತ್ತು ಮಹಿಳೆಯರಿಗಾಗಿ ಸಂಘಟಿಸಲಾಗಿದೆ ಎಂದರು.
ರಾಜ್ಯಮಟ್ಟದ ಸ್ಪರ್ಧೆಗಳು ನಡೆಯುವುದರಿಂದ ಆಗಮಿಸುವ ಸ್ಪರ್ಧಾಳುಗಳಿಗೆ ಉಳಿದುಕೊಳ್ಳಲು ಸಕಲ ವ್ಯವಸ್ಥೆ ಮಾಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂದಾಜು ೬೦ ಸ್ಪರ್ಧಾಳುಗಳು ಬರುವ ನಿರೀಕ್ಷೆಯಿದೆ. ಕ್ರೀಡೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನ ೮ ಸಾವಿರ ರೂ., ದ್ವೀತಿಯ ೫ ಸಾವಿರ ರೂ., ತೃತೀಯ ೩ ಸಾವಿರ ರೂ. ನೀಡಲಾಗುತ್ತದೆ ಎಂದು ತಿಳಿಸಿದರು.
ತಹಸೀಲ್ದಾರ್ ವಿಜಯಕುಮಾರ, ಸಮಾಜ ಕಲ್ಯಾಣಾಧಿಕಾರಿ ಎಂ.ಡಿ. ಸಲೀಮ್, ಪೌರಾಯುಕ್ತ ಜೀವನ ಕಟ್ಟಿಮನಿ, ಸಮಾಜ ಕಲ್ಯಾಣದ ಎಸ್‌ಸಿ ವಿಭಾಗದ ಅಧಿಕಾರಿ ರಮೇಶ ಸೇರಿದಂತೆ ಇತರರಿದ್ದರು.