ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ತಾಲೂಕಿನ ಸಮೀಪದ ವಾಗಣಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ತಳವಾರಗೇರಾದಲ್ಲಿ ಕುಂಭಕಳಸ ಮೆರವಣಿಗೆ ಹಾಗೂ ಬೈಕ್ ರ್ಯಾಲಿಯ ಮೂಲಕ ಅದ್ಧೂರಿಯಾಗಿ ಸೋಮವಾರ ಸ್ವಾಗತಿಸಲಾಯಿತು.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ವಾಗಣಗೇರಾ, ತಳವಾರಗೇರಾ, ಮಲ್ಲಿಭಾವಿ, ಟಿ. ಬೊಮ್ಮನಹಳ್ಳಿಯ ಅಪಾರ ಜನರು ತಳವಾರಗೇರಾ ಗ್ರಾಮಕ್ಕೆ ಆಗಮಿಸಿದ್ದರು. ಬೆಳಗಿನಿಂದಲೇ ಗ್ರಾಮದಲ್ಲಿ ಪಂಚಾಯತಿ ಪಿಡಿಒ ಶಿವಪುತ್ರ, ಕಾರ್ಯದರ್ಶಿ ಹುಸೇನ್ ಭಾಷಾ, ಸಿಬ್ಬಂದಿ ಹಾಗೂ ವಿವಿಧ ಗ್ರಾಮಗಳ ಮುಖಂಡರು ಸಂವಿಧಾನ ಜಾಗೃತಿ ಜಾಥಾ ಆಗಮನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದರು.
ಗ್ರಾಪಂ ಅಧ್ಯಕ್ಷೆ ಸೋಮವ್ವ ಭೀಮಣ್ಣ, ಉಪಾಧ್ಯಕ್ಷೆ ಸುಮಂಗಲಾ ಪರಶುರಾಮ, ತಾಪಂ ಮಾಜಿ ಸದಸ್ಯ ಬಯಲಪ್ಪ ಗೌಡ, ಮುಖಂಡರಾದ ಯಲ್ಲಪ್ಪ ನಾಯಕ ಮಲ್ಲಿಭಾವಿ, ಮಾನಪ್ಪ ಹುಜರತಿ, ಚಂದ್ರಶೇಖರ ಸಾಹುಕಾರ, ವೀರಭದ್ರಪ್ಪ ತಳವಾರಗೇರಾ, ಶರಣು ಪರಸನಹಳ್ಳಿ, ಮಾಳಪ್ಪ ಕಿರದಳ್ಳಿ, ಶಿವಲಿಂಗ ಹಸನಾಪುರ, ತಿಪ್ಪಣ್ಣ ಶೆಳ್ಳಗಿ ಸೇರಿಂತೆ ಇತರರಿದ್ದರು.