ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ಭಾರತೀಯ ಸಂವಿಧಾನವು 1950 ಜನವರಿ 26ರಂದು ಜಾರಿಗೊಂಡಿದ್ದು, ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆ ತಿಳಿಸುತ್ತದೆ. ಭಾರತವು ಲಿಖಿತ ಮತ್ತು ಅತ್ಯಂತ ದೊಡ್ಡ ಸಂವಿಧಾನವನ್ನು ಹೊಂದಿದೆ ಎಂದು ದಲಿತ ಮುಖಂಡ ಶಿವಲಿಂಗ ಹಸನಾಪುರ ಹೇಳಿದರು.
ತಾಲೂಕಿನ ಸಮೀಪದ ಪೇಠ ಅಮ್ಮಾಪುರದಲ್ಲಿ ಸೋಮವಾರ ಸಂವಿಧಾನ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಆಡಳಿತವನ್ನು ಸಂವಿಧಾನ ಅನುಸಾರವಾಗಿಯೇ ನಡೆಸಬೇಕು. ಆಡಳಿತ ಮಾಡಲು ಬೇಕಾಗುವ ಆಯಕಟ್ಟು, ವಿಧಾನಗಳು ಮತ್ತು ಕಾನೂನುಗಳನ್ನು ಸಂವಿಧಾನ ರೂಪಿಸುತ್ತದೆ ಎಂದರು.
ಜಾಥಾ ನೇತೃತ್ವವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಕುಮಾರ್ ಸುಬೇದಾರ್, ಕಾರ್ಯದರ್ಶಿ ಮನೋವರು ಭಾಷಾ, ಕಾಂಗ್ರೆಸ್ ಯುವ ಮುಖಂಡ ಮಹೇಶ್ ವಿ ಯಾದವ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಸಿದ್ದಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಬಾಲಪ್ಪ ಬಡಿಗೇರ್, ಗ್ರಾಪಂ ಸದಸ್ಯ ಮಾನಪ್ಪ ಬಡಿಗೇರ್, ಮಲ್ಲಿಕಾರ್ಜುನ ರೆಡ್ಡಿ ಕೋಳಿಹಾಳ, ಪ್ರಕಾಶ್ ಸಮೇದ್, ಶಿವಮೂರ್ತಿ ತನಿಕೆದಾರ್, ದೇವು, ಇಮ್ರಾನ್ ಸಾಬ್ , ಭಗವಾನ್, ಇಟ್ಟಪ್ಪ ಚಲವಾದಿ, ಶಿವಣ್ಣ ಗೋಗಿ, ಕರೀಂ ಸಾಬ್, ರಾಘವೇಂದ್ರ ಪತ್ತಾರ್, ಮಾನಪ್ಪ ಕಟ್ಟಿಮನಿ, ದಸಂಸ ಮುಖಂಡರಾ್ ಶಿವಪುತ್ರ ಜವಳಿ, ರಾಜು ಬಡಿಗೇರ್, ಶೇಖರ್ ಮಂಗಳೂರು, ಭೀಮ್ ರಾಯ ಮಂಗಳೂರು, ಯಮನಪ್ಪ ಕಟ್ಟಿಮನಿ, ಮಲ್ಲು ಚಲವಾದಿ, ಶಿವ ಮಾನಯ್ಯ ಬಡಿಗೇರ್, ಮಲ್ಲು ಬಡಿಗೇರ್, ಮಹೇಶ್ ಚಲವಾದಿ, ಮುತ್ತಣ್ಣ ಬಡಿಗೇರ್, ಮೌನೇಶ್ ಚಲವಾದಿ, ಸಗರನಾಡು ಪ್ರೌಢಶಾಲೆ ಮೌನೇಶ್ ಗುತ್ತೇದಾರ್ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪ್ರಧಾನ ಗುರುಗಳು ಸುನಿತಾ ಸೇರಿದಂತೆ ಇತರರಿದ್ದರು.