ಮಾಜಿ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿ ಹೆಚ್ಚಳ: ಅಭಿನಂದನೆ,

ಕ್ರಾಂತಿ ವಾಣಿ ದೇವದುರ್ಗ
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಮುಕ್ತ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯ ಸಹಾಯಧನವನ್ನು 1500 ರೂಗಳಿಂದ 2000 ರೂಗಳಿಗೆ ಹೆಚ್ಚಿಸಿರುವುದು ಸ್ವಾಗತಾರ್ಹವಾಗಿದೆಯೆಂದು ದಲಿತ ಚಿಂತಕ ಎಂ. ಆರ್. ಬೇರಿ ಅಭಿನಂದಂನೆ ಸಲ್ಲಿಸಿದರು.

ನಗರದ ಪತ್ರಿಕಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವದಾಸಿ ಮಹಿಳೆಯರ ಸಮೀಕ್ಷೆ ನಡೆಸಲು ರಾಜ್ಯ ವಿಮುಕ್ತ ದೇವದಾಸಿ ನಿಯೋಗದೊಂದಿಗೆ ಫೆಬ್ರುವರಿ 11ರಂದು ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯನವರು ತುಳಿತಕ್ಕೆ ಒಳಗಾದ ಜನರ ನೋವು ಅರಿತುಕೊಂಡು 20–25 ನೇ ಸಾಲಿನ ಬಜೆಟ್ ನಲ್ಲಿ ಸೇರಿಸುವುದಾಗಿ ತಿಳಿಸಿದ್ದರು. ಕೊಟ್ಟು ಮಾತಿನಂತೆ ನಡೆದ ಬಜೆಟ್ ಅಧಿವೇಶನದಲ್ಲಿ ದೇವದಾಸಿ ಮಹಿಳೆಯರಿಗೆ 500 ಪಿಂಚಣಿ ಹೆಚ್ಚಳ ಸಮಗ್ರ ಸಮೀಕ್ಷೆ ಮಾಡುವುದು ಇವರ ಪುನರ್ವಸತಿ ವಿಶೇಷ ಪ್ಯಾಕೇಜ್ ಘೋಷಣೆ ಸೇರಿದಂತೆ ದೇವದಾಸಿ ನಿಯೋಗಕ್ಕೆ ನೀಡಿದ ಭರವಸೆಯಂತೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಆ ಕಾರಣಕ್ಕಾಗಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿನಂದನಾ ಅರ್ಹರು ಎಂದು ಬೇರಿ ಹೇಳಿದರು.

ದೇವದಾಸಿ ಮಹಿಳೆಯರ ಗಣತಿ ಪಟ್ಟಿಯಿಂದ ಹೊರಗುಳಿದ ಸುಮಾರು 25 ಸಾವಿರ ಮಹಿಳೆಯರನ್ನು ಗಣತಿ ಮಾಡಿ ಪಟ್ಟಿಯಲ್ಲಿ ಸೇರಿಸಿದೆ. ಅವರಿಗೆ 500 ರೂ. ಪಿಂಚಣಿ ಹೆಚ್ಚಳ ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಇವರ ಮನೆ ನಿರ್ಮಾಣಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಹಣಕಾಸಿನ ನೆರವು ಸಲ್ಲಿಸಿದ್ದಕ್ಕೆ ಎಲ್ಲಾ ವಿಮುಕ್ತ ದೇವದಾಸಿ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾನಪ್ಪ ಮೇಸ್ತ್ರಿ, ಹನುಮಂತ ಮನ್ನಾಪುರ, ರತ್ನಾಕರ್ ಶಾವಂತಗೆರ, ರವಿಚಂದ್ರ ಗುಂಟ್ರಾಳ ಸೇರಿದಂತೆ ಇತರೆ ಮುಖಂಡರು ಇದ್ದರು.
ಸಿದ್ದರಾಮಯ್ಯನಂತ ದೂರ ದೃಷ್ಟಿಯುಳ್ಳ ರಾಜಕಾರಣಿಗಳಿಂದ ಮಾತ್ರ ದಲಿತ ದಮನಿತ ತುಳಿತಕ್ಕೊಳಗಾದ ಜನರ ಮತ್ತು ಮಹಿಳೆಯರ ಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ತರುವ ಮೂಲಕ ಅನೇಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗಿದ್ದಾರೆ.
ದಲಿತ ಚಿಂತಕ ಎಂ. ಆರ್. ಬೇರಿ

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ