ಕರ್ನಾಟಕ ವಾಲ್ಮೀಕಿ ನಾಯಕರ ಜಿಲ್ಲಾ ಸಮಿತಿ ವತಿಯಿಂದ.
ಕ್ರಾಂತಿ ವಾಣಿ ಶಹಾಪುರ.
ಸಗರ ನಾಡಿನ ಸರದಾರ. ಸರಳ ಸಜ್ಜನಿಕೆಯ ವ್ಯಕ್ತಿತ್ವ. ಮಾತೃ ಹೃದಯದ ಮಮಕಾರ ಮೂರ್ತಿ. ಅಜಾತಶತ್ರು, ಅಭಿವೃದ್ಧಿಯ ಹರಿಕಾರ, ಸರ್ವ ಜನಾಂಗದ ಆಶಾಕಿರಣ ಎಂಬುದಾಗಿ ಖ್ಯಾತಿ ಪಡೆದ ಸುರಪುರದ ವೀರ, ಶಾಸಕ ರಾಜ ವೆಂಕಟಪ್ಪ ನಾಯಕ್ ಅವರ ಅಕಾಲಿಕ ನಿಧನ ಸಗರನಾಡಿನ ಜನತೆಗೆ ಬರಗಾಲದಲ್ಲೂ ಬರಸಿಡಿಲು ಬಡಿದಂತಾಗಿದೆ. ಸಮಸ್ಯೆ ಹೇಳಿಕೊಂಡು ಬರುವ ಜನರ ಸಮಸ್ಯೆ ಬಗೆಹರಿಸದೆ ವಾಪಸ್ ಕಳಿಸಿರುವ ಉದಾಹರಣೆಗಳಿಲ್ಲ. ಇಂಥಹ ಜನಪರ ನಾಯಕ, ಧೀಮಂತ ನಾಯಕನನ್ನು ತನ್ನ ಬಾಹುಗಳಲ್ಲಿ ಬಿಗಿದಪ್ಪಿ ಕರೆದೊಯ್ದ ವಿಧಿ ಆಟಕ್ಕೆ ಸಗರ ನಾಡಿನ ಜನತೆಯ ಧಿಕ್ಕಾರ. ನೊಂದವರ ಬೆನ್ನೆಲುಬಾಗಿ, ದೀನದಲಿತರ ಬಂಧುವಾಗಿದ್ದ ರಾಜ ವೆಂಕಟಪ್ಪ ನಾಯಕನನ್ನು ಕಳೆದುಕೊಂಡ ಜನತೆ ಅನಾಥರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ, ಅವರ ಕುಟುಂಬಕ್ಕೆ ಮತ್ತು ಈ ನಾಡಿನ ಜನತೆಯ ದುಃಖ ತಡೆದುಕೊಳ್ಳುವ ಶಕ್ತಿ, ಆ ಭಗವಂತನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ. ಇವರು ಮತ್ತೊಮ್ಮೆ ಹುಟ್ಟಿ ಬರಲೆಂದು ವಾಲ್ಮೀಕಿ ನಾಯಕರ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ್ ಅವರು ಹಾಗೂ ವಾಲ್ಮೀಕಿ ಸಮುದಾಯದವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.