ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದ ವಾರ್ಡ್ ೧ ಮತ್ತು ೨ರಲ್ಲಿ ಇರುವ ಅಂಗನವಾಡಿ ಕೇಂದ್ರ ೫ ಮತ್ತು ೬ರಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೇಲ್ವಿಚಾರಕಿ ಸುನೀತಾ ಪಾಟೀಲ್, ಪೋಲಿಯೋ ಹನಿ ಹಾಕುವುದರಿಂದ ಹಲವಾರು ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುತ್ತದೆ. ಕೆಂಭಾವಿ ಹೋಬಳಿಯ ೫ ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಹಾಕಿಸಬೇಕು ಎಂದು ಮನವಿ ಮಾಡಿದರು.
ಅಪಾರ ಮಕ್ಳಳಿಗೆ ಪೋಲಿಯೋ ಹನಿ ಹಾಕುವು ಮೂಲಕ ಚಾಲನೆ ನೀಡಲಾಯಿತು .ಅಂಗನವಾಡಿ ಕಾರ್ಯಕರ್ತೆ ಬಸಮ್ಮ ಬಿ.ಮಾಳಳ್ಳಿಕರ್.ವಿಜಯಲಕ್ಷ್ಮಿ ದೊಡ್ಡಮನಿ ಮತ್ತು ಆಶಾ ಕಾರ್ಯಕರ್ತೆ ರೇಣುಕಾ ಸೋಮನಾಹಳ್ಳಿ.ಅಶ್ವಿನಿ ದೊಡ್ಡಮನಿ.ಭೀಮಭಾಯಿ ತೀರ್ಥ ಇತರರು ಇದ್ದರು.