ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ಮಾಜಿ ಉಪಪ್ರಧಾನಿ, ದಲಿತರ ಆಶಾಕಿರಣ ಬಾಬು ಜಗಜೀವನರಾಂ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣ ಸಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಮಾದಿಗ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ ಎಸ್. ಕಕ್ಕೇರಾ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಶಿಷ್ಟ ಸಮಾಜಕ್ಕೆ ಮೀಸಲಾತಿ ಕಾರ್ಮಿಕ ಸಚಿವರಾಗಿದ್ದಾಗ ಅಸ್ಪೃಶ್ಯತೆ ನಿವಾರಣೆ, ಕಾರ್ಮಿಕರ ಹಿತಕ್ಕಾಗಿ ಕನಿಷ್ಠ ಕೂಲಿ, ಗೊತ್ತುವಳಿ ಸೇರಿದಂತೆ ಹಲವು ಕಾನೂನು ಜಾರಿಸಿಗೊಳಿದ್ದಾರೆ. ಆದರಿಂದ ಸಾಮಾಜಿಕ ಸೇವೆ ಪರಿಗಣ ಸಿ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಚಿತ್ರ: ಸೋಮಶೇಖರ