ಕುಂಬಾರ ಸಮುದಾಯಕ್ಕೆ ವೆಂಕಟಪ್ಪ ನಾಯಕರ ಕೊಡುಗೆ ಅಪಾರ: ರಾಜಶೇಖರ, ಕುಂಬಾರ ಸಂಘದಿಂದ ಅಗಲಿದ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಶ್ರದ್ಧಾಂಜಲಿ

ವರದಿ: ಎನ್.ಎನ್.
ಸುರಪುರ:ನಗರದರ ರಂಗಂಪೇಟೆಯಲ್ಲಿನ ಕುಂಬಾರ ಭವನದಲ್ಲಿ ಇತ್ತೀಚೆಗೆ ದೈವದೀನರಾದ  ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷರು ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಸುರಪುರ ತಾಲೂಕು ಕುಂಬಾರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಎರಡು ನಿಮಿಷಗಳ ಮೌನಾಚರಣೆ ನಡೆಸುವ ಮೂಲಕ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹವು ಮುಖಂಡರು, ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಎಲ್ಲಾ ಜಾತಿ ಜನಾಂಗಗಳ ಸರ್ವಾಂಗೀಣ ಅಭಿವೃಧ್ಧಿಗಾಗಿ ಶ್ರಮಿಸಿದ ನಾಯಕರಾಗಿದ್ದಾರೆ. ಅವರು ಕುಂಬಾರ ಸಮುದಾಯದ ಏಳಿಗೆಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇಂದು ಈ ಕಾರ್ಯಕ್ರಮ ಮಾಡುತ್ತಿರುವ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನವನ್ನು ಅವರೇ ನೀಡಿದ್ದಾರೆ ಎಂದರು.

ಕುಂಬಾರಿಕೆ ವೃತ್ತಿ ಮಾಡಲು ಅನೇಕರು ಅಡ್ಡಿ ಪಡಿಸುವಾಗ ಸ್ವತಃ ತಾವೇ ಈ ಸ್ಥಳಕ್ಕೆ ಆಗಮಿಸಿ ಇಲ್ಲಿ ನಿಮ್ಮ ವೃತ್ತಿಯನ್ನು ಮಾಡುವಂತೆ ಸ್ಥಳವನ್ನು ಒದಗಿಸಿಕೊಟ್ಟಿದ್ದಾರೆ. ಅಲ್ಲದೆ ಕುಂಬಾರ ಸಮುದಾಯದ ಹಿರಿಯಣ್ಣನಾಗಿ ಸಮಾಜಕ್ಕೆ ಬೇಕಾದ ನೆರವು ನೀಡುವುದಾಗಿ ಭರವಸೆಯನ್ನು ಕೂಡ ನೀಡಿದ್ದರು,ಇಂದು ಅವರು ನಮ್ಮನ್ನು ಅಗಲಿರುವುದು ತುಂಬಾ ದುಖಃದ ಸಂಗತಿಯಾಗಿದೆ ಎಂದರು.
ಕುಂಬಾರ ಸಂಘದ ಅಧ್ಯಕ್ಷ ರಾಜಶೇಖರ ಕುಂಬಾರ, ಮುಖಂಡರಾದ ಈರಣ್ಣ ಕುಂಬಾರ, ಅರಮೇಶ ಕುಂಬಾರ,ವೀರಭದ್ರಪ್ಪ ಕುಂಬಾರ, ನಿಂಗಣ್ಣ ವಡಗೇರಿ ಮಾತನಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಾಹೇಬಗೌಡ ಕುಂಬಾರ,ಪ್ರಧಾನ ಕಾರ್ಯದರ್ಶಿ ಭೀಮರಾಯ ಕುಂಬಾರಪೇಟ, ಮಡಿವಾಳಪ್ಪ ಕುಂಬಾರ, ಅಂಬ್ರೇಶ ಪಾನಶಾಪ, ಬಸವರಾಜ ಕುಂಬಾರ,ಶಿವಪುತ್ರ ಕುಂಬಾರ,ಆನಂದ ಫೋಟೊ ಸ್ಟುಡಿಯೋ, ಆದಪ್ಪ ಕುಂಬಾರ, ಸೂಗಣ್ಣ ಕುಂಬಾರ, ಸಣ್ಣ ಈರಪ್ಪ ಕುಂಬಾರ, ರುದ್ರಪ್ಪ ಕುಂಬಾರ,ಈರಪ್ಪ ತಿಮ್ಮಾಪುರ,ನಾಗಪ್ಪ ಕುಂಬಾರ,ಆನಂದ ಮಲ್ಯಾ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ