ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ಶಾಸಕ ರಾಜಾ ವೆಂಕಟಪ್ಪ ನಾಯಕ ಸದ್ಗುಣ ಚೇತನದ ಮೂರ್ತಿಯಾಗಿದ್ದು, ಅವರನ್ನು ಕಳೆದುಕೊಂಡ ನಾವು ಅನಾಥರಾಗಿದ್ದೇವೆ ಎಂದು ಎಪಿಎಂಸಿ ಮಾಜಿ ಸದಸ್ಯ ಮಲ್ಲಣ್ಣ ಸಾಹುಕಾರ ಮುಧೋಳ್ ಹೇಳಿದರು.
ನಗರದ ಕುಂಬಾರಪೇಟೆ ಸಮೀಪದ ಸುಜನ್ ಟ್ರೇಡರ್ಸ್ ವಾಸು ಪೆಟ್ರೋಲ್ ಬಂಕ್ ಹತ್ತಿರ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಹಮ್ಮಿಕೊಂಡಿದ್ದ ನುಡಿನಮನ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಅವರೊಂದಿಗೆ ೩೫ ವರ್ಷದ ಸ್ನಹೇವಿತ್ತು. ತನ್ನ ನಂಬಿದವರನ್ನು ಎಂದಿಗೂ ಬಿಟ್ಟುಕೊಟ್ಟಿರುವ ಇತಿಹಾಸವಿಲ್ಲ. ಅವರು ಶಾಸಕರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಅವರನ್ನು ಮತ್ತೆ ನೆನಪು ಮಾಡಿಸುತ್ತವೆ. ಅವರು ಅಜರಾಮರ ವ್ಯಕ್ತಿ ಎಂದರು.
ಕಾಂಗ್ರೆಸ್ ಪಕ್ಷದ ಸುರಪುರ ಬ್ಲಾಕ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಪುರಸಭೆ ಮಾಜಿ ಸದಸ್ಯ ಮಲ್ಲಣ್ಣ ಹುಬ್ಬಳ್ಳಿ, ಕುಂಬಾರಪೇಟೆ ಸೂಗರಾಜ ಪಾಣ , ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗೂರಿ, ಭೀಮರಾಯ ಮೂಲಿಮನಿ, ದಾವುದ್ ಸಾಬ್, ದಶರಥ ಪ್ಯಾಪಲಿ, ಸಿದ್ದಪ್ಪ ಗುಡ್ಡಕಾಯಿ, ಬಲಭೀಮ್ ನಾಯಕ, ಚಂದ್ರು ಧನಾಕಾಯಿ, ಭೀಮರಾಯ ಕುಂಬಾರ, ಬಸವರಾಜ ದೀವಳಗುಡ್ಡ, ಹಣಮಂತ ಭಜಂತ್ರಿ ಸೇರಿದಂತೆ ಇತರರಿದ್ದರು.
ಸುರಪುರ: ನಗರದ ಕುಂಬಾರಪೇಟೆ ಸಮೀಪದ ಸುಜನ್ ಟ್ರೇಡರ್ಸ್ ವಾಸು ಪೆಟ್ರೋಲ್ ಬಂಕ್ ಹತ್ತಿರ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ನುಡಿನಮನ ಮತ್ತು ಶ್ರದ್ಧಾಂಜಲಿ ಸಲ್ಲಿಸಲಾಯಿತು.