ವರದಿ: ಎನ್‌ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ವಿ ಶ್ವದಲ್ಲಿಯೇ ಭಾರತ ದೇಶ ಧರ್ಮ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಹಿಂದೂಗಳಿಗೆ ಅನೇಕ ಹಬ್ಬಗಳು ಬರುತ್ತವೆ. ಪ್ರತಿಯೊಂದು ಹಬ್ಬವು ತನ್ನದೇ ಮಹತ್ವವನ್ನು ಪಡೆದುಕೊಂಡಿದೆ. ಅದೇ ರೀತಿ ಮಹಾಶಿವರಾತ್ರಿಯು ತನ್ನದೇ ಆದ ಮಹತ್ವ ಹಾಗೂ ಹಿನ್ನಲೆ ಹೊಂದಿದೆ ಎಂದು ಪ್ರವಚನಕಾರ ಅಚ್ಯುತಾನಂದ ಶಾಸ್ತ್ರೀಗಳು ರಾಜನಕೋಳೂರ ಹೇಳಿದರು.
ಪಟ್ಟಣದ ರಂಗಂಪೇಟೆಯ ಶ್ರೀ ಸದ್ಗುರು ಷಹಜಾನಂದ ಸರಸ್ವತಿ ಮಾಹಾಸ್ವಾಮಿಗಳ ಮಂದಿರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಪವಚನ ಕಾರ್ಯಕ್ರಮ ನಡೆಯಿತು.
ಪರಮಾತ್ಮ, ಜಗದೀಶ, ಮಹಾದೇವ, ಬೋಳಾಶಂಕರ, ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಶಿವ ಜಗತ್ತಿನ ಜೀವ ಜಂತುಗಳ ಸಹಾಯಕ್ಕಾಗಿ ಬರುವ ಆ ದೇವನಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಮಹಾಶಿವರಾತ್ರಿ ಎಂದರು.
ಮಹಾಶಿವರಾತ್ರಿ ಹೇಗೆ ಆಚರಣೆಗೆ ಬಂತು ಎಂಬುದರ ಕುರಿತು ನೋಡುವುದಾದರೆ, ಶಿವ ಪುರಾಣದ ಪ್ರಕಾರ, ಸಾತ್ವಿಕ ಶಕ್ತಿಗಳನ್ನು ಮೀರಿ, ಅಸುರಿ ಶಕ್ತಿಗಳು ಪ್ರಬಲವಾಗುವ ಕಾರಣಕ್ಕೆ ಈ ಲೋಕ ಕಲ್ಯಾಣಕ್ಕಾಗಿ ಒಳ್ಳೆಯದನ್ನು ಶಾಶ್ವತ ಉಳಿಯಲು ಮತ್ತು ಅಮರತ್ವ ಪಡೆಯಲು ಸಮುದ್ರಮಥನ ಮಾಡಿ ಕ್ಷೀರ ಸಮುದ್ರವನ್ನು ಕಡಿದು ಅಮೃತವನ್ನು ಪಡೆಯುವಂತೆ ವಿಷ್ಣು, ದೇವತೆಗಳು ಮತ್ತು ಅಸುರರಿಗೆ ಆದೇಶಿಸಿದನು ಎಂದು ತಿಳಿಸಿದರು.
ಶೇಷನಾಗ ಹಗ್ಗವಾಯಿತು, ಮಂದಾರ ಪರ್ವತ ಕಡಗೋಲು ಆಯಿತು, ಸಾಕ್ಷಾತ್ ವಿಷ್ಣು ಕೂರ್ಮ ಅವತಾರ ತಾಳಿ, ಕಡಗೋಲಿಗೆ ತನ್ನ ಬೆನ್ನನ್ನು ಆಧಾರವಾಗಿ ಕೊಟ್ಟ. ದೇವತೆಗಳು ಮತ್ತು ಅಸುರರಿಂದ ಕ್ಷೀರ ಸಮುದ್ರ ಕಡಿಯುವ ಕೆಲಸ ಆರಂಭಾವಾಯಿತು. ಮೊದಲಿಗೆ ಕಾಮಧೇನು ದೊರಕಿತು. ನಂತರ ಕಲ್ಪವೃಕ್ಷ ಹಾಗೂ ಲಕ್ಷ್ಮೀ ಮೇಲೆ ಬಂದಳು. ಒಳ್ಳೆಯದರ ಜೊತೆಗೆ ಕೆಟ್ಟದ್ದು ಬರಲು ಆರಂಭವಾಯಿತು. ಹಾಲಾಹಲವೆಂದು ಕರೆಯಿಸಿಕೊಳ್ಳುವ ಕಾರ್ಕೂಟಕ ವಿಷ ಉದ್ಭವವಾಗತೊಡಗಿತು ಎಂದರು.
ದೇವತೆಗೂವ ಮತ್ತು ಸುರರಿಗೆ ಹಾಲಹಲ ಸಮುದ್ರದಿಂದ ಮೇಲೆ ಬಂದು ಭೂಲೋಕ ದಹಿಸುವ ಆತಂಕ ಹಾಗೂ ಭಯ ಶುರುವಾಯಿತು. ಈ ವಿಷವನ್ನು ನಿಯಂತ್ರಸುವ ಶಕ್ತಿ ಯಾರಿಗಿದೆ ಎಂದು ಪ್ರಶ್ನೆಗಳು ಮೂಡಿದವು. ಆಗ ನೆನಪಾಗಿದ್ದು, ಆ ಆದಿದೇವ ಪರಮೇಶ್ವರ. ಜಗತ್ತನ್ನು ಹಾಲಹಲದಿಂದ ಕಾಪಾಡಲು ಶಿವನಲ್ಲಿ ಹೋದರು ಎಂದರು.
ಆಗ ಶಿವ ಹಾಲಹಲವನ್ನು ನಿಗ್ರಹಿಸುವ ಶಕ್ತಿಯ ತನ್ನ ಬಳಿ ಇದೇಯೇ ಎಂಬುದರ ಬಗ್ಗೆ ಯೋಚಿಸದೇ, ಕೈಲಾಸಗಿರಿಯಿಂದ ಇಳಿದು ಬಂದು, ನೇರವಾಗಿ ಹಾಲಹಲ ವಿಷವನ್ನು ತನ್ನ ಕಪಾಲ ಪಾತ್ರೆಯಲ್ಲಿ ಪಡೆದು ತನ್ನ ಗಂಟಲಿಗೆ ಹಾಕಿಕೊಂಡನು. ಎಲ್ಲರೂ ಗಾಬರಯಿಂದ ನೋಡುತ್ತಾ ನಿಂತರು. ಕಾಲ ಸ್ಥಂಭಿಸಿದ ಅನುಭವವಾಯಿತು ಎಂದು ತಿಳಿಸಿದರು.
ಆಗ ಇದೆಲ್ಲವನ್ನು ಗಮನಿಸುತ್ತಿರುವ ಮಹಾದೇವಿ, ಘೋರ ಅನಾಹುತ ನಡೆದುಬಿಡುತ್ತದೆ ಎಂದು ಓಡಿ ಬಂದು ಶಿವನ ಗಂಟಲನ್ನು ಒತ್ತಿ ಹಿಡಿದು ಹೊಟ್ಟೆಗೆ ವಿಷ ಸೇರದಂತೆ ಮಾಡಿದಳು. ವಿಷ ಗಂಟಲಲ್ಲೇ ಉಳಿದಿದ್ದಕ್ಕಾಗಿ ಆಭಾಗ ನೀಲಿ ಬಣ್ಣದಿಂದ ಕಾಣತೊಡಗಿತು. ಅಂದಿನಿಂದ ಶಿವ *ನೀಲಕಂಠ* ಎಂದು ಕರೆಯಿಸಿಕೊಂಡನು. ಇದೆಲ್ಲಾ ನಡೆದದ್ದು, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ ಚತುರ್ದಶಿ ಯಂದು. ಅಂದಿನಿಂದ ಲೋಕಕಲ್ಯಾಣಕ್ಕಾಗಿ ಹಾಲಹಲ ಸೇವಿಸಿದ ಶಿವನಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಮಹಾಶಿವರಾತ್ರಿ ಎಂದು ತಿಳಿಸಿದರು.
ಶಿವನ್ನು ಆರಾಧಿಸುವುದರಿಂದ ಪಾಪ ಕರ್ಮಗಳಿಗೆ ಮುಕ್ತಿ ದೊರಕಿ, ಮೋಕ್ಷ ಪ್ರಾಪ್ತಿಯಾಗುತ್ತದೆ. ಉಪವಾಸ ಹಾಗೂ ಜಾಗರಣೆ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸಮತೋಲನ ಕಾಯ್ದುಕೊಳ್ಳಲು ಸಹಾಯಕ ಎಂದು ಅಚ್ಯುತಾನಂದ ಶಾಸ್ತ್ರೀಗಳು ರಾಜನಕೋಳೂರ ತಮ್ಮ ಪ್ರವಚನದ ಮೂಲಕ ತಿಳಿಸಿಕೊಟ್ಟರು.
ನಂತರ ಪರಮಣ್ಣ ಶರಣರು ಕೋನಾಳ ಮಹಾಶಿವರಾತ್ರಿ ಕುರಿತು ತಿಳಿಸಿಕೊಟ್ಟರು.
ತದನಂತರ ಸಂಗೀತ ಕಲಾವಿದರಾದ ಗುರುಪಾದ ಬಿರಾದಾರ, ರಾಜು ಗುಬ್ಬೇವಾಡ, ಬಸನಗೌಡ ಚೊಕಾವಿ, ಕುಮಾರಿ ಅಕ್ಷತಾ, ಶರಣಗೌಡ ಗೆಣ್ಣೂರ ಹಾಗೂ ಸ್ಥಳಿಯ ಕಲಾವಿದರಾದ ಸುರೇಶ ಅಂಬುರೆ, ಶ್ರೀನಿವಾಸ ಹಳಿಜೋಳ, ಜ್ಞಾನೇಶ್ವರ ಪಾಣಿಭಾತೆ, ಸೋಮು ಶಾಬಾದಿ, ಜಗದೀಶ ಮಾನು, ವಿಜಯಲಕ್ಷ್ಮೀ ಹಳಿಜೋಳ ಇವರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜರುಗಿತು.
ಪ್ರಮುಖರಾದ ಹೊನ್ನಪ್ಪ ಹಳಿಜೋಳ, ಪಾಂಡು ಅರ್ಚಕರು, ಭೀಮು ಪತಂಗೆ, ಪ್ರಕಾಶ ಮಹೇಂದ್ರಕರ, ಗೋವಿಂದಪ್ಪ ಬಲಮುರಿ, ರಾಮು ನಾಡಿಗೇರ, ಗೋಪಾಲ ವಿಭೂತೆ, ವಿಜಯಕುಮಾರ ವಿಭೂತೆ, ಭೂಮದೇವ ಮಹೇಂದ್ರಕರ, ಸೋಮಶೇಖರ ಶಾಬಾದಿ, ರಘುರಾಮ ಕಡಬೂರ, ಮುರಳಿ ಅಂಬುರೆ, ನಿಂಗಣ್ಣ ರಾಯಚೂರಕರ್,ಮಹೇಶ ಕೊಡೇಕಲ್, ಅಶೋಕ ಬಾಸುತ್ಕರ್, ಕೊಪ್ರೇಶ ಹಳಿಜೋಳ, ವಿಶ್ವನಾಥ ಚಿಲ್ಲಾಳ, ಅಶೋಕ ಚಿಲ್ಲಾಳ, ಚಂದ್ರಕಾಂತ ಕಪೂರೆ,ಅರವಿಂದ ಪಾಣಿಭಾತೆ, ಅನಸೂಯಾ ಹಳಿಜೋಳ, ಮಹೇಶ ಅಂಗಡಿ, ಸಂಗಮೇಶ ಗುಳಗಿ, ರಮೇಶ ಗೊಳೇದ್, ನಾಗೇಶ ಗೊಳೇದ್ ಕಾರ್ಕ್ರಮದಲ್ಲಿ ಉಪಸ್ಥಿತರಿದ್ದರು. ತಿಮ್ಮಾಪೂರ ರಂಗಂಪೇಟ ಭಕ್ತರು ಪಾಲ್ಗೊಂಡಿದ್ದರು.