ತಹಸೀಲ್ದಾರ್ ಕಚೇರಿಯಲ್ಲಿ ಮೊಬೈಲ್ ಕಳ್ಳತನ.. ತಾಲೂಕು ಕಚೇರಿಯಲ್ಲಿ ಜನರ ಸೋಗಿನಲ್ಲಿ ಅಡ್ಡಾಡುತ್ತಿರುವ ಕಳ್ಳರು.

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ
ಸುರಪುರ: ತಾಲೂಕಿನ ಆಡಳಿತ ಮುಖ್ಯಕೇಂದ್ರ, ಸದಾ ಜನರು ಮತ್ತು ಅಧಿಕಾರಿಗಳಿಂದ ತುಂಬಿರುವ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಅಪರಾಹ್ನ ೧೨ ಗಂಟೆಗೆ ಮಹಿಳೆಯಿಂದ ಮೊಬೈಲ್ ಪಡೆದು ಪರಾರಿಯಾಗಿರುವ ಘಟನೆ ನಡೆದಿದೆ.
ತಾಲೂಕಿನ ಪರಸನಹಳ್ಳಿಯಿಂದ ಮಗನ ಆಧಾರ್ ಕಾರ್ಡ್ ಮಾಡಿಸಲು ತಾಲೂಕು ಕಚೇರಿಗೆ ಆಗಮಿಸಿದ್ದಾರೆ. ಮುಗ್ಧಹಳ್ಳಿ ಮಹಿಳೆಯೂ ಮಗುವನ್ನು ಎತ್ತಿಕೊಂಡು ಆಧಾರ್ ಕೇಂದ್ರ ಮುಂದೆ ನಿಂತಿದ್ದಾರೆ. ಜನರ ಸೋಗಿನಲ್ಲಿ ಬಂದ ಕಳ್ಳನೊಬ್ಬ ನನ್ನ ಮೊಬೈಲ್ ಮನೆಗೆ ಮಾತನಾಡುವೆ ಎನ್ನುತ್ತಲೇ ಕಣ್ಣುಮುಚ್ಚಿ ತೆಗೆಯುವುದೊರಳಗೆ ಪರಾರಿಯಾಗಿದ್ದಾನೆ.
ಹಳ್ಳಿ ಮಹಿಳೆಯೂ ಪಕ್ಕದಲ್ಲಿದ್ ಪತಿಗೆ ಹೇಳುವಷ್ಟರಲ್ಲಿ ಮೊಬೈಲ್ ಕಳ್ಳ ಪರಾರಿಯಾಗಿದ್ದನು. ಚುನಾವಣೆಯ ಸಭೆ ಮುಗಿಸಿಕೊಂಡು ಬಂದ ತಹಸೀಲ್ದಾರ್ ವಿಜಯಕುಮಾರ ಅವರ ಮೊಬೈಲ್ ಕಳ್ಳತನದ ವೃತ್ತಾಂತವನ್ನು ವಿವರಿಸಿದರು.
ಬಳಿಕ ಮಾತನಾಡಿದ ತಹಸೀಲ್ದಾರ್ ವಿಜಯಕುಮಾರ , ಮೊಬೈಲ್ ಎಲ್ಲಿಯೂ ಹೋಗುವುದಿಲ್ಲ. ಕೂಲಿಕಾರ್ಮಿಕರು ಬರುವ ಸರಕಾರಿ ಸ್ಥಳದಲ್ಲಿ ಮೊಬೈಲ್ ಕಳ್ಳತನ ಆಗಿರುವುದನ್ನು ಗಂಭೀರವಾಗಿ ಪರಿಗಣ ಸಲಾಗುವುದು. ೧೦,೫೦೦ ರೂ. ಮೊಬೈಲ್ ಬಡವರಿಗೆ ದೊಡ್ಡದೇ. ಕಚೇರಿಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುವುದು. ಮಹಿಳೆಯೂ ಮೊಬೈಲ್ ಪಡೆದವನ ಚಹರೆ ಕಂಡುಹಿಡಿದರೆ ಬಂಧಿಸಲು ಪೊಲೀಸರಿಗೆ ಸೂಚಿಸಲಾಗುವುದು ಎಂದರು.
ಮೊಬೈಲ್‌ನಲ್ಲಿ ಕಂತಿನ ರೂಪದಲ್ಲಿ ಮೊದಲ ಬಾರಿಗೆ ವಿವೋವೈ ೧೬ ಖರೀಸಿದ್ದೆ. ನಾಲ್ಕು ತಿಂಗಳ ಕಂತನ್ನು ಪಾವತಿಸಿದ್ದೇನೆ. ಇನ್ನೂ ಬಾಕಿ ಇರುವಾಗಲೇ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ನಮ್ಮಂತ ಬಡವರನ್ನು ಕಳ್ಳರು ನೋಡಿ ಕದಿಯುತ್ತಾರೆ. ಕಳ್ಳರನ್ನು ಪತ್ತೆ ಹಚ್ಚಿ ನಮ್ಮ ಮೊಬೈಲ್ ಕೊಡಿಸಬೇಕು. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಮೊಬೈಲ್ ಕಳೆದುಕೊಂಡ ಮುತ್ತಪ್ಪ ಮತ್ತವರ ಪತ್ನಿ ತಿಳಿಸಿದ್ದಾರೆ.
ಹಳ್ಳಿಯ ಮಹಿಳೆಯರನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಕರಣ ದಾಖಲಿಸಿಕೊಂಡಿದ್ದು, ಮೊಬೈಲ್ ಕಳ್ಳರನ್ನು ಪತ್ತೆ ಹಚ್ಚಲಾಗುವುದು. ಶೀಘ್ರದಲ್ಲೇ ಕೂಲಿಕಾರ್ಮಿಕ ಮುತ್ತಪ್ಪನಿಗೆ ಮೊಬೈಲ್ ತಲುಪಿಸುವ ಕೆಲಸ ಮಾಡುತ್ತೇವೆ. ಮಹಿಳೆಯರು ಯಾರೇ ಏನೇ ಕೇಳಿದರೂ ಕೊಡಬಾರದು ಮತ್ತು ಏನೇ ಕೊಟ್ಟರೂ ತಿನ್ನಬಾರದು. ಎಚ್ಚರದಿಂದ ಇರಬೇಕು. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ೧೧೨ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಸಿಪಿಐ ಆನಂದ ವಾಗ್ಮೋಡೆ ತಿಳಿಸಿದ್ದಾರೆ.
ಪತ್ರ:
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಪೋಟೇಜ್‌ಗಳನ್ನು ಪರಿಶೀಲಿಸಿ ಅದರ ಕಾಪಿಯನ್ನು ಪೊಲೀಸ್ ಠಾಣೆಗೆ ನೀಡಲಾಗುವುದು. ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಪೊಲೀಸ್ ಠಾಣೆಗೆ ಪತ್ರ ಬರೆಯಲಾಗುವುದು.
ವಿಜಯಕುಮಾರ, ತಹಸೀಲ್ದಾರ್, ಸುರಪುರ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ