ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾತ್ರೆ: ಸಿಸಿ ಕ್ಯಾಮೆರಾ ಜಾತ್ರೆ .. ಪ್ರಥಮ ಬಾರಿಗೆ ಸಿಸಿ ಕ್ಯಾಮೆರಾ ಭಯದ ನೆರಳಲ್ಲಿ ಪರೀಕ್ಷೆ ಮಕ್ಕಳ ಎದೆಯಲ್ಲಿ ಢವಢವ, ಪೋಷಕರಿಗೆ ಆತಂಕ

 

ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಪಿಕೇಟ್ (ಎಸ್‌ಎಸ್‌ಎಲ್‌ಸಿ) ಪರೀಕ್ಷೆಯು ಸೋಮವಾರದಿಂದ ಆರಂಭವಾಗುವ ಯಾತ್ರೆಗೆ ಎಲ್ಲ ಪರೀಕ್ಷಾ ಕೊಠಡಿಗಳಿಗೆ ಸಿಸಿ ಕ್ಯಾಮೆರಾಗಳ ಜಾತ್ರೆ ನಡೆಯಲಿದೆ.


ಸಿಸಿ ಕ್ಯಾಮೆರಾ ಮೊದಲಿಗೆ ಪರೀಕ್ಷೆ ನಡೆಯುವಾಗ ಆಫೀಸ್ ರೂಮ್, ಕಾರಿಡಾರ್, ಶಾಲೆಯ ಆವರಣ ಸೇರಿದಂತೆ ವಿವಿಧೆಡೆ ಕೂರಿಸಲಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಕಲಬುರಗಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಆದೇಶ ಹೊರಡಿಸಿದ್ದರಿಂದ ಈಗಾಗಲೇ ಶಾಲೆಯಲ್ಲಿದ್ದ ಕ್ಯಾಮೆರಾಗಳ ಜತೆಗೆ ಪರೀಕ್ಷಾ ನಡೆಸುವ ಶಾಲೆಯ ಮುಖ್ಯಗುರುಗಳು ಕೊಠಡಿಗಳಿಗೆ ಬೇಕಾಗುವಷ್ಟು ಸಿಸಿ ಕ್ಯಾಮೆರಾ ಖರೀದಿಸಿದ್ದಾರೆ.
ಪ್ರಥಮ ಬಾರಿಗೆ ಸಿಸಿ ಕ್ಯಾಮೆರಾಗಳನ್ನು ಸುರಪುರ ಮತ್ತು ಹುಣಸಗಿ ತಾಲೂಕುಗಳೆರಡರಲ್ಲಿ ಇರುವ ಒಟು 17 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲಾಗಿದೆ. ಇದರಿಂದ 15 ವರ್ಷದ ವಿದ್ಯಾರ್ಥಿಗಳು ಸಿಸಿ ಕ್ಯಾಮೆರಾ ಭಯದ ನೆರಳಲ್ಲಿ ಪರೀಕ್ಷೆ ಎದುರಿಲಿದ್ದಾರೆ.
ಢವಢವ, ಆತಂಕ: ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಸಿಸಿ ಕ್ಯಾಮೆರಾ ಹೊಸತನವಾಗಿದ್ದು, ಢವಢವ ಎದುರಾಗಿದೆ. ಮಕ್ಕಳಲ್ಲಿ ಎಲ್ಲಿ ನಪಾಸ್ (ಫೇಲ್) ಆಗಿಬಿಡಬಹುದು ಎಂಬ ಭಯವಿದೆ. ಮತ್ತೊಂದೆಡೆ ಪೋಷಕರಲ್ಲಿ ಮಕ್ಕಳು ಹೇಗೆ ಪರೀಕ್ಷೆ ಬರೆಯುತ್ತಾರೋ ಎಂಬ ಆತಂಕವಿದೆ. ಇದಿರಂದ ಕೊಂಚ ತಂದೆತಾಯಂದಿರು ವಿಚಲಿತರಾಗಿದ್ದಾರೆ.


ಪರೀಕ್ಷೆಗೆ ವಿದ್ಯಾಥಿಗಳು: ಸುರಪುರ ಬ್ಲಾಕ್‌ನಿಂದ 3064-ಬಾಲಕರು, 2871-ಬಾಲಕಿಯರು ಒಟ್ಟು 5935ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಸುರಪುರ ನಗರ=7, ಕೆಂಭಾವಿ-೪, ಹುಣಸಗಿ-2, ಕಕ್ಕೇರಾ-1, ಕೊಡೇಕಲ್-1, ನಾರಾಯಣಪುರ-೧, ವಜ್ಜಲ-1, ಒಟ್ಟು 17 ಪರೀಕ್ಷೆ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. 326 ಸಿಬ್ಬಂದಿಗಳನ್ನು ಪರೀಕ್ಷಾ ನಿಯೋಜನೆ ಶಿಕ್ಷಕರನ್ನು ನೇಮಿಸಲಾಗಿದೆ.
ಸೂಕ್ಷ್ಮ ಕೇಂದ್ರ: ಸುರಪುರ ಬ್ಲಾಕ್‌ನಲ್ಲಿ ಸುರಪುರ ಬಾಲಕರ ಪ್ರೌಢಶಾಲೆ, ಕೆಂಭಾವಿ ಬಾಲಕರ ಪ್ರೌಢಶಾಲೆ, ನಾರಾಯಣಪುರ ಪ್ರೌಢಶಾಲೆ, ಕೊಡೇಕಲ್ ಬಾಲಕರ ಪ್ರೌಢಶಾಲೆಗಳನ್ನುಅತಿ ಸೂಕ್ಷö್ಮ ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಸುರಪುರದ ಅಂಬೇಡ್ಕರ್ ಶಾಲೆ, ಹೇಮರೆಡ್ಡಿ ಮಲ್ಲಮ್ಮ ಪ್ರೌಢಶಾಲೆ, ಹುಣಸಗಿ ಬಾಲಕರ ಶಾಲೆ, ಕಕ್ಕೇರಾ ಬಾಲಕರ ಶಾಲೆಗಳನ್ನು ಗುರುತಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಮೂಲಸೌಲಭ್ಯ, ಶೌಚಾಲಯ, ಟೇಬಲ್ ಡೆಸ್ಕ್, ಮಧ್ಯಾಹ್ನದ ಬಿಸಿಯೂಟ, ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ.
3೦೦ಕ್ಕಿಂತ ಹೆಚ್ಚು ಕ್ಯಾಮೆರಾ: ಸುರಪುರ ಬ್ಲಾಕ್‌ಗೆ ಒಳಪಡುವ ಎಲ್ಲ ಪರೀಕ್ಷೆ ಕೊಠಡಿ ಮತ್ತು ಕಾರಿಡಾರ್‌ಗಳಲ್ಲಿ 3೦೦ಕ್ಕಿಂತ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಕೂರಿಸಲಾಗಿದೆ. ಬಿಇಒ ಮತ್ತು ಡಿಡಿಪಿಪಿ, ಡಿಸಿ, ಜಿಪಂ ಸಿಇಒ, ಅಪರ ಆಯುಕ್ತರು ಶಿಕ್ಷಣ ಇಲಾಖೆ ಕಲಬುರಗಿ ಅಧಿಕಾರಿಗಳು ವೆಬ್‌ಕಾಸ್ಟಿಂಗ್ ನೇರವಾಗಿ ವೀಕ್ಷಿಸಬಹುದು.
ನಕಲು ತಡೆಗೆ ಕಣ್ಗಾವಲು: ಪರೀಕ್ಷಾ ಕೊಠಡಿಗಳು ಮತ್ತು ಶಾಲೆ ಆವರಣದ ಹೊರಗೆ ಸಿಸಿ ಕ್ಯಾಮೆರಾ ಅಳವಡಿಸಿರುವುದರಿಂದ ಯಾರೇ ಬಂದು ಹೋದರೂ ತಿಳಿಯುತ್ತದೆ. ನಕಲು ಮಾಡುವವರು ಅಥವಾ ಕಾಪಿ ಕೊಡಲು ಬಂದವರನ್ನು ನೇರವಾಗಿ ಕಾಣಬಹುದು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ನಕಲು ಅಸಾಧ್ಯವಾದ ಮಾತಾಗಿದೆ.
ಶೈಕ್ಷಣ ಕವಾಗಿ ಹಿಂದುಳಿದ ತಾಲೂಕಿನಲ್ಲಿ ಸಿಸಿ ಕ್ಯಾಮೆರಾ ಎದುರಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹೇಗೆ ಎದುರಿಸಿ ಪಾಸ್ ಅಥವಾ ನಪಾಸ ಎಂಬುದು ಫಲಿತಾಂಶದ ಬಳಿಕವೇ ತಿಳಿಯಲಿದೆ.
:
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿಸಿ ಕ್ಯಾಮೆರಾ ಅಳವಡಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ನಕಲು ಮಾಡುವುದು ಕಾನೂನು ಪ್ರಕಾರ ಅಪರಾಧ. ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲು ಆದೇಶ ಹೊರಡಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
ಮಾನಪ್ಪ ಕಟ್ಟಿಮನಿ, ವಿದ್ಯಾರ್ಥಿ ಪೋಷಕರು, ಸುರಪುರ.

ಅಧಿಕಾರಿಗಳ ಆದೇಶದಂತೆ ಎಲ್ಲ ಪರೀಕ್ಷಾ ಕೊಠಡಿಗಳ ಕೇಂದ್ರಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 17 ಪರೀಕ್ಷಾ ಕೇಂದ್ರ, 3೦೦ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷೆಗೆ 326 ಶಿಕ್ಷಕರನ್ನು ನಿಯೋಜಿಸಲಾಗಿದೆ. ಸುಸೂತ್ರ ಮತ್ತು ನ್ಯಾಯ ಸಮ್ಮತ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಬಿಇಒ ಯಲ್ಲಪ್ಪ ಕಾಡ್ಲೂರ ತಿಳಿಸಿದ್ದಾರೆ..

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ