ಹೊಸ ಬಾಳಲ್ಲಿ ಹೊಸತು ತರುವುದೇ ಯುಗಾದಿ..

ಲೇಖನ: ಶಾಂತಪ್ಪ ಬೂದಿಹಾಳ

ಕ್ರಾಂತಿವಾಣಿ ವಾರ್ತೆ ಸುರಪುರ:

ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶಿಷ್ಟವಾದ ನಂಬಿಕೆಗಳು ವಿಶ್ವಾಸಗಳು ಪದ್ಧತಿಗಳಿವೆ. ವರ್ಷದಲ್ಲಿ ೧೨ ತಿಂಗಳು ಅಮಾವಾಸ್ಯೆ ಮತ್ತು ಹುಣ ್ಣಮೆಗಳು ಕೆಲವೊಂದು ಹಬ್ಬಗಳು ಪ್ರಾಚೀನ ಕಾಲದಿಂದ ಇಂದಿನವರೆಗೂ ತಮ್ಮದೇ ಆದ ಆಚರಣೆಗಳನ್ನು ಮುಂದುವರಿಸಿಕೊAಡು ಬಂದಿವೆ. ಅವುಗಳಲ್ಲಿ ಯುಗಾದಿ ಹಬ್ಬಕ್ಕೆ ಮಹತ್ತರ ಸ್ಥಾನವಿದ್ದು, ಹೊಸ ವರ್ಷಕ್ಕೆ ಕಾಲಿಡುತ್ತೇವೆ.

ಯುಗಾದಿ ವರ್ಷದ ಕೊನೆಯ ತಿಂಗಳಲ್ಲಿ ವನದೇವಿ ಗಿಡಮರಗಳಲ್ಲಿರುವ ಎಲೆಗಳೆಲ್ಲ ಹೋಗಿ ಹೊಸ ಎಲೆಗಳು ಚಿಗುರುವ ಸಮಯ. ನವ ವಸಂತ ಮಾಸವೆಂದರೆ ಪಶು, ಪಕ್ಷಿ, ಮನುಷ್ಯರಿಗೆ ಒಂದು ತರದ ಸಂತೋಷ, ಸಂಭ್ರಮ. ಇದು ಹಿಂದುಗಳಿಗೆ ಅತ್ಯುತ್ತಮ ಪವಿತ್ರವಾದ ಹಬ್ಬ. ಹಿಂದುಗಳಿಗೆ ಮೊದಲನೆಯ ಪರ್ವ, ಹೊಸ ವರ್ಷ ಪ್ರಾರಂಭ. ಗಿಡಗಳೆಲ್ಲ ಚಿಗುರಿದ ಬಳಿಕ ಪಕ್ಷಿಗಳ ಕಲರವ ಎಲ್ಲೆಲ್ಲೂ ಕೇಳಿ ಬರುತ್ತದೆ. ಕೃಷಿಕರಿಗೂ ಇದು ಬಹಳ ಮಹತ್ವದ ಯುಗಾದಿ ಹಬ್ಬಗಳಲ್ಲಿ ಒಂದಾಗಿದೆ. ಮಳೆ ಬಂದರೆ ರೈತಾಪಿ ಜನ ತಮ್ಮ ಫಲಗಳನ್ನು ಉಳುಮೆ ಮಾಡುವವರು. ಈ ದಿನ ಅನೇಕರು ವಿವಿಧ ರೀತಿಯ ಯೋಜನೆಗಳನ್ನು ಹಾಕಿಕೊಂಡು ಇರುತ್ತಾರೆ.
ಕೆಲವರು ಯುಗಾದಿ ಪಾಡ್ಯದ ದಿನ ಬಂಗಾರ ಖರೀದಿ, ಕಾರು ಕೊಳ್ಳುವಿಕೆ, ಹೊಸ ವ್ಯಾಪಾರ ಪ್ರಾರಂಭ ಇವೆಲ್ಲ ನಡೆಯುತ್ತಿವೆ. ಅಂದು ಮನೆ ಮನೆಗಳಲ್ಲಿ ಸಿಹಿಯಾದ ಸಂಭ್ರಮ. ಕಷ್ಟ ಸುಖವನ್ನು ಸಮಾನವಾಗಿ ಸ್ವೀಕರಿಸಲು ಬೇವು ಬೆಲ್ಲ ಸವಿಯುತ್ತಾರೆ. ಕೆಲವೆಡೆ ಬೇವು ಮಾಡುವವರು. ಕೆಲವೆಡೆ ಬೇವಿನ ಹೂವು ಮತ್ತು ಬೆಲ್ಲ ಕೊಡುವರು. ಅಂದು ಎಲ್ಲರೂ ಸಡಗರ ಸಂಭ್ರಮದಿAದ ತಮ್ಮ ತಮ್ಮ ಅವರನ್ನು ಕರೆದು ಬೇವುಕೊಟ್ಟು ಕಳಿಸುತ್ತಾರೆ.
ಹಳ್ಳಿಗಳಲ್ಲಿ ಪಾಡ್ಯದ ಮರುದಿನ ಬಣ್ಣ ಆಡುವ ಪದ್ಧತಿಯಿದೆ. ಕೆಲವು ಕಡೆ ಇನ್ನೂ ಜಾರಿಯಲ್ಲಿದೆ. ನಾವೆಲ್ಲ ಚಿಕ್ಕವರಿದ್ದಾಗ ಅವಾಗ ಬಣ್ಣ ಇದ್ದಿಲ್ಲ. ಹೂವಿನಿಂದ ಬಣ್ಣ ತಯಾರಿಸಿ ಒಟ್ಟಾಗಿ ಸದಾಕಾಲ ಬಣ್ಣ ಎರಚುವುದು ನಡೆಯುತ್ತಿತ್ತು. ಬದುಕಿನ ಕಹಿ ನುಂಗಿ ಸುಖದ ಶಾಂತಿ ಸಮೃದ್ಧಿ ಆಶಿಸುವ ಹಬ್ಬ ಯುಗಾದಿ.
ಪ್ರಕೃತಿಯನ್ನು ವಸಂತ ಆಗಮನ ಕೃಷ್ಣಶಕೆ ೧೯೪೬ ಕ್ರೈಸ್ತ ನಾಮ ಸಂವತ್ಸರ ಆರಂಭದ ದಿನ ಮಂಗಳವಾರ ಯುಗಾದಿ ಹಬ್ಬ. ಹತ್ತು ಹಲವು ಪರಂಪರೆಯ ಆರಂಭದ ವರ್ಷವಾಗಿದೆ. ಹಿಂದು ಪದ್ಧತಿಯಲ್ಲಿ ಪರಂಪರಗತವಾಗಿ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸಿಕೊಂಡು ಬಂದಿದೆ.
ಚAದ್ರಮಾನ ಸಂವತ್ಸರವೇ ಯೋಗ್ಯವಿದ್ದು, ಅದನ್ನು ಅನುಸರಿಸುತ್ತಾ ಬಂದಿದ್ದೇವೆ. ಎಲ್ಲ ಪಂಚಾAಗಗಳಲ್ಲಿ ಶಾಲಿವಾನ ಶಕೆ ಬಳಕೆಯಲ್ಲಿದೆ. ಹೊಸ ಪಂಚಾAಗ ಬಂದರೆ, ಅದರಲ್ಲಿ ಶಾಂತಿಗಳು ಭವಿಷ್ಯ ಹಾಗೂ ಅವುಗಳು ಅಸಂಭವನೀಯ ಘಟನೆಗಳು, ಮಳೆಗಾಲ, ಬೆಳೆ ಬರುವಿಕೆ ಅದೇರೀತಿ ಅವರವರ ರಾಶಿಯ ಮೇಲೆ ಭವಿಷ್ಯವನ್ನು ನಿರ್ಧರಿಸುತ್ತದೆ.
ಈ ದಿನದಂದು ದೇವತಾಸ್ತುತಿ ಪಂಚಾAಗ ಶ್ರವಣ ನೂತನ ಉತ್ತರದಾರಣ ಸೌಭಾಗ್ಯವಾಗಿ ನಡೆಯುತ್ತದೆ. ಈ ಹಬ್ಬವನ್ನು ದೇಶದ ವಿವಿಧೆಡೆ ಹಲವಾರು ರೀತಿಯಿಂದ ಆಚರಿಸುವರು. ಇವುಗಳ ಕೇಂದ್ರಬಿAದು ಮಹಿಳೆ ಶ್ರದ್ಧೆ ಭಕ್ತಿ ಹಬ್ಬದ ಸಂತಸ ನೂರ್ಮುಡಿಕೊಳ್ಳುತ್ತದೆ. ಕುಟುಂಬದ ಹಿರಿಯ ಮಹಿಳೆಯರು ಮನೆಯ ಎಲ್ಲಾ ಸದಸ್ಯರಿಗೆ ಕುಂಕುಮ ಹಚ್ಚಿ ಸುರಕ್ಷಿತಗಾಗಿ ಆರತಿ ಬೆಳಗುತ್ತಾರೆ. ಮನೆಯ ಅಂಗಳದ ತುಂಬಾ ರಂಗೋಲಿ ಹಾಕುತ್ತಾರೆ.
ಮೊದಲು ಫಸಲು ಬರುವ ಹುಣಸೆ, ಬೇವು, ಮಾವಿನ ಹೂಗಳನ್ನು ದೇವರಿಗೆ ಅರ್ಪಿಸಬೇಕು ಎಂದು ನಂಬಿಕೆಯ ಪ್ರಕಾರ ದೇವರನ್ನು ಸಂತೋಷಪಡಿಸಲಾಗುತ್ತದೆ. ಹೃದಯದ ಕಾಯಿಲೆ ತಡೆಯಲು ಹಾಗೂ ಸುಖದ ದುಃಖ ಸಮ್ಮಿಶ್ರಮವನ್ನು ಸ್ವೀಕರಿಸುವ ನಿಟ್ಟಿನಲ್ಲಿ ಜನರು ಬೇವು ಮತ್ತು ಬೆಲ್ಲವನ್ನು ಒಟ್ಟಿಗೆ ತಿನ್ನುತ್ತಾರೆ. ವಸಂತ ಮಾಸವೂ ಸಂತೋಷ ಮತ್ತು ದುಃಖಗಳನ್ನು ಸಮಾನವಾಗಿ ಕಾಣಬೇಕು. ಶಾಶ್ವತ ಮತ್ತು ಎಲ್ಲವನ್ನು ಸಮಾನ ಚಿತ್ತರಾಗಿ ಅನುಭವಿಸಬೇಕು. ಸುಖವಾದಾಗ ಹೇಗೆ ಪ್ರತಿಕ್ರಿಸಬೇಕು ಎನ್ನುವುದನ್ನು ಯಾವ ತರಬೇತಿ ಇಲ್ಲ.
ಅರಮನೆ ನಗರಿ ಮೈಸೂರಿನಲ್ಲಿ ಈಗಲೂ ಆಚರಣೆಗಳಿಗೆ ರಾಯಲ್ ಸ್ಪರ್ಶ ಇದೆ. ಪ್ರತಿಯೊಬ್ಬನಂತೆ ಯುಗಾದಿ ಕಂಡ ಮೈಸೂರು ಅರಮನೆ ಎಂದಿಗೆ ತಳಕು ಹಾಕಿಕೊಂಡಿದೆ. ಅಲ್ಲಿ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಹಿಂದಿನ ದಿನ ಜನರು ಈ ಹಬ್ಬದ ಕಂಪನ್ನು ತಮ್ಮದಾಗಿಸಿಕೊಳ್ಳಲು ತುದಿ ಕಾಲಿನಲ್ಲಿ ನಿಂತಿರುತ್ತಾರೆ. ಹಳೆಯ ನೆನಪು ಬೇಸರ ಎಲ್ಲವನ್ನು ಬಿಟ್ಟು ಹೊಸ ಕನಸು ನಿರೀಕ್ಷೆಗಳನ್ನು ಕಟ್ಟಿಕೊಳ್ಳಲು ಹೊಸ ಹುಮ್ಮಸ್ಸಿನ ಕಂಪಿನೊAದಿಗೆ ನಳನಳಿಸುತ್ತಾರೆ.
ಬೆಂಗಳೂರು, ಮೈಸೂರಿನಲ್ಲಿ ಕರ್ನಾಟಕದ ದಕ್ಷಿಣ ಪ್ರಾಂತ್ಯದಲ್ಲಿ ಒಗ್ಗಟ್ಟಾಗಿ ಹಬ್ಬ ಜೀವನ ಕಹಿಗಳನ್ನು ಮರೆಸಿ ಸಿಹಿತನದಂತ ತರುವ ಈ ಪರಿಮಳ ಹಬ್ಬವನ್ನು ಮಹಾನವ ಮಹದೇವಿಯ ಸೃಷ್ಟಿಯಾಗಿದೆ. ಯುಗಾದಿ ಯುಗಾದಿ ಕಳೆದರು ಹೊಸ ವರ್ಷ ಮರಳಿ ಬರುತ್ತಿದೆ ಹೊಸ ವರ್ಷಕ್ಕೆ ಹೊಸ ವರ್ಷವ ಹೊಸತು ಹೊಸತು ತರುತಿದೆ. ಯುಗಾದಿ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ ತರಲಿ.
ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ