ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ದೇಶದಲ್ಲಿನ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದವರಲ್ಲಿ ಒಬ್ಬರಾಗಿದ್ದು, ಕೃಷಿ, ಕಾರ್ಮಿಕ ವಲಯ, ಸಮಾಜ ಕ್ಷೇತ್ರಕ್ಕೆ ಡಾ. ಬಾಬು ಜಗಜೀವನ್ ರಾಂ ಅವರ ಕೊಡಗು ಅಪಾರವಾಗಿದೆ ಎಂದು ಎಂದು ದಲಿತ ಮುಖಂಡ ಬಸವರಾಜ ಸಿ ಹಾದಿಮನಿ ಹೇಳಿದರು.
ತಾಲೂಕಿನ ಕೋನಾಳ ಗ್ರಾಮದಲ್ಲಿ ಡಾ. ಬಾಬು ಜಗಜೀವನ್ ರಾಂ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ರಾಂ ಜಯಂತಿ ವೃತ್ತ ಉದ್ಘಾಟನೆ ಮತ್ತು ಕೊಳವೆಬಾವಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರ ಕಾನೂನುಗಳು ಮತ್ತು ಕಾರ್ಮಿಕರ ಹಕ್ಕುಗಳನ್ನು ಅವರಿಗೆ ಲಭಿಸುವಂತೆ ವಿಶ್ವ ಮಟ್ಟದಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಪಂಚವಾರ್ಷಿಕ ಯೋಜನೆ ಮೂಲಕ ಕೃಷಿಗೆ ಹಸರೀಕರಣದ ಉತ್ತೇಜ ನೀಡಿದರು. ಸಮಾಜ ಸೇವೆಯಲ್ಲಿ ಮುಂಚೂಣ ಯಲ್ಲಿದ್ದ ಧೀಮಂತ ನಾಯಕ ಎಂದರು.
ಮಾದಿಗ ಯುವ ಸೇನಾ ರಾಜಾಧ್ಯಕ್ಷ ನಂದಕುಮಾರ ಪಿ Pಕನ್ನೆಳ್ಳಿ ಮಾತನಾಡಿ, ಮಾದಿಗ ಸಮಾಜವೂ ಒಗ್ಗಟ್ಟಾಗಬೇಕಿದೆ. ಶಿಕ್ಷಣದಲ್ಲಿ ಸಾಕಷ್ಟು ಹಿಂದುಳಿದ್ದೇವೆ. ಶಿಕ್ಷಣ ಪಡೆದರೆ ಸಮಾಜ ಅಭಿವೃದ್ಧಿ ಸಾಧ್ಯ. ರಾಜಕೀಯ ಸಂಕುಲಕ್ಕೆ ಸಿಲುಕದೆ ಸ್ವಾಭಿಮಾನದಿಂದ ಬದುಕಬೇಕು ಎಂದರು.
ದೇವತ್ಕಲ್ ಪಿಡಿಒ ರಾಜು ಮೇಟಿ, ಪರಣ್ಣಗೌಡ ಶಾಂತಪುರ, ಅಂಬ್ರೇಶಗೌಡ ರೂಪಲಬಂಡಿ, ತಿರುಪತಿ ಇತರರು ನೂತನ ಕೊಳವೆಬಾವಿಗೆ ಪೂಜೆ ಸಲ್ಲಿಸಿದರು.ಪ್ರಮುಖರಾದ ಸೋಮಶೇಖರ ಬಂದೊಡ್ಡಿ, ಭೀಮು ಮ್ಯಾಗೇರಿ, ಬಾಬು ವಾಗಣಗೇರಿ, ನಾಗರಾಜ ಚನ್ನಪಟ್ಟಣ ಸೇರಿದಂತೆ ಇತರರಿದ್ದರು.
ಸುರಪುರ: ತಾಲೂಕಿನ ಕೋನಾಳ ಗ್ರಾಮದಲ್ಲಿ ಡಾ. ಬಾಬು ಜಗಜೀವನ್ ರಾಂ ಜಯಂತಿ ನಿಮಿತ್ತ ಡಾ. ಬಾಬು ಜಗಜೀವನ್ ರಾಂ ಜಯಂತಿ ವೃತ್ತ ಮತ್ತು ಕೊಳವೆಬಾವಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.