ವರದಿ: ಎನ್.ಎನ್.ಕ್ರಾಂತಿವಾಣಿ ವಾರ್ತೆ ಸುರಪುರ: ಆಡಂಬರದ ವಿವಾಹಗಳಿಂದ ಸಾಲದ ಸಿಲುಕುವುದಕ್ಕಿಂತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೆ ಸಾಲದಿಂದ ಮುಕ್ತರಾಗಬಹುದು. ಬಡವರು ಮತ್ತು ಶ್ರೀಮಂತರ ಎನ್ನುವ ಭೇದ ಇರುವುದಿಲ್ಲ ಎಂದು ಶ್ರೀ ಕಾಶಿ ಮಹಾಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಸಮೀಪದ ತಳವಾರಗೇರಿಯ ಆರಾಧ್ಯ ದೈವವಾದ ಶ್ರೀ ವೀರತಪಸ್ವಿ ಚನ್ನವೀರ ಶಿವಾಚಾರ್ಯ ೧೬ ನೇ ಜಾತ್ರಾ ಮಹೋತ್ಸವ ನಿಮಿತ್ತ ವಟುಗಳಿಗೆ ಅಯ್ಯಚಾರ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಾಮೂಹಿಕ ವಿವಾಹಗಳು ಎಲ್ಲ ಧರ್ಮಿಯರನ್ನು ಒಂದು ಗೂಡಿಸುತ್ತದೆ. ನಾವೆಲ್ಲರೂ ಒಂದೇ ಎನ್ನುವ ಭಾವ ಮೂಡುತ್ತದೆ ಎಂದರು.
ವಿವಾಹದ ಹೆಣ್ಣು ಮಗಳು ತನ್ನ ಅತ್ತೆಯನ್ನು ತಾಯಿಯಂತೆ ತಿಳಿದುಕೊಂಡು ಸೇವೆ ಮಾಡಬೇಕು. ಅದರಂತೆ ಅತ್ತೆ ಕೂಡ ಸೊಸೆಯನ್ನು ತನ್ನ ಮಗಳಂತೆ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಈ ಸಂಸಾರವೆಂಬ ಎತ್ತಿನಗಆಡಿ ಜೀವನದಲ್ಲಿ ಯಾವುದೇ ತೊಂದರೆಗಳಿಲ್ಲದೆ ನಡೆಯುತ್ತದೆ. ಸುಖ ಸಂಸಾರದಲ್ಲಿ ಅರಿತು ನಡೆಯುವುದು ಬಹಳ ಮುಖ್ಯ. ತಾಳ್ಮೆ ಎನ್ನುವುದು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿವನ ಸ್ಮರಣೆಯಲ್ಲಿ ತೊಡಗಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಬುಧವಾರ ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ೧೨ ಜಂಗಮ ವಟುಗಳಿಗೆ ಅಯ್ಯಚಾರ, ೬ ಜೋಡಿ ಸಾಮೂಹಿಕ ವಿವಾಹ ನಡೆದ ಬಳಿಕ ಸಂಜೆ ೬ ಗಂಟೆಗೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.
ಮಾಗಣಗೇರಿಯ ಶ್ರೀ ಡಾ. ಶಿವಾಚಾರ್ಯ ರತ್ನ ವಿಶ್ವರಾದ್ಯ ಶಿವಾಚಾರ್ಯ, ರುಕ್ಮಪುರದ ಹಿರೇಮಠದ ಗುರು ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುರಪುರದ ಕಡ್ಲಪ್ಪನವರ ಮಠದ ಪ್ರಭುಲಿಂಗ ಸ್ವಾಮೀಜಿ, ಲಕ್ಚ್ಮೀಪುರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ನಾಗನಟಗಿ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ, ಬಸನಗೌಡ ಪೊ.ಪಾಟೀಲ್, ಗ್ರಾಪಂ ಮಾಜಿ ಅಧ್ಯಕ್ಷ ಮಾನಪ್ಪ ಹುಜರತಿ, ಶರಬಯ್ಯ ಸ್ವಾಮಿ, ರಾಮಚಂದ್ರ ದೊರೆ, ನಾಗಯ್ಯ ಹಿರೇಮಠ, ಶಿವಮೂರ್ತಿ ಹಿರೇಮಠ, ನಾಗಪ್ಪ ಪಾತ್ಲಿ, ಚಂದ್ರಪ್ಪ ಹುಜರತಿ, ವಾಸುದೇವ ಅರಸಿಕೇರಿ, ನರಸಪ್ಪ ಗಾಲದಿನ್ನಿ, ಮಲಕಪ್ಪ ಹಾದಿಮನಿ, ಗ್ರಾಪಂ ಉಪಾಧ್ಯಕ್ಷ ಪರಶುರಾಮ ದೊಡ್ಡಮನಿ ಸೇರಿದಂತೆ ಇತರರಿದ್ದರು.