ಕ್ರಾಂತಿವಾಣಿ ವಾರ್ತೆ
ಸುರಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಂಥಣಿಯಲ್ಲಿ ಅಭ್ಯಾಸ ಮಾಡಿರುವ ಪ್ರಶಾಂತ ನಾಯಕ ತಂದೆ ಗಂಗಾಧರ್ ನಾಯಕ ತಿಂತಣಿ ಇಅವರು 2024 25 ನೇ ಸಾಲಿನ ಸೈನಿಕ ಹಾಗೂ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಹಂತದಲ್ಲಿ ಕೆರ್ಗಡೆ ಹೊಂದಿ ಪ್ರತಿಷ್ಠಿತ ಶಾಲೆಗಳಾದ ಆಲ್ ಇಂಡಿಯಾ ಸೈನಿಕ ಸ್ಕೂಲ್ ಬೆಳಗಾವ್ ಹಾಗೂ ಜವಹರ್ ನವೋದಯ ವಿದ್ಯಾಲಯ ಯಾದಗಿರಿಗೆ ಆಯ್ಕೆಯಾಗಿದ್ದಾನೆ.
ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಆಗಮಿಸುತ್ತಾರೆ ಸಮಿತಿ ಹಾಗೂ ಶಾಲಾವತಿಯಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಇಸಿಓ ಶ್ರೀ ಕಾಂತೇಶ್ ಅಲಗಿಮನಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಗಫೂರಸಾಬ ಹವಾಲ್ದಾರ ಹಾಗೂ ಶಾಲೆಯ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಲಕ್ಷ್ಮಿ ಹಾಗೂ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪಾಶ ಸಾಹೇಬ್ ಹಾಗೂ ಸರಕಾರಿ ಪಾಲ್ ಟೆಕ್ನಿಕಲ್ ಕಾಲೇಜ್ ಪ್ರಾಂಶುಪಾಲರಾದ ರಾಮನಗೌಡ ಪಾಟೀಲ್ ಹಾಗೂ ತಾಲೂಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಹಾಗೂ ವಿದ್ಯಾರ್ಥಿಯ ಪಾಲಕರಾದ ಗಂಗಾಧರ ನಾಯಕ ತಿಂಥಣಿ ಹಾಗೂ ಶಾಲೆಯ ಶಿಕ್ಷಕರಾದ ಕಿರಣ್ ಸರ್ ಹಾಗೂ ಶ್ರೀಮತಿ ಖಾಜಾಬಿ ಹಾಗೂ ಎಸ್ ಡಿಎಂಸಿ ಸದಸ್ಯರು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.