ಕ್ರಾಂತಿವಾಣಿ ವಾರ್ತೆ
ಸುರಪುರ: ಬಿರುಬೇಸಿಗೆ ಕಾಲದಲ್ಲಿಯೂ ಗುಡುಗು ಸಿಡಿಲಿಗೆ ಯುವ ರೈತನೊಬ್ಬ ಬಲಿಯಾದ ಘಟನೆ ತಾಲೂಕಿನ ತಿಪ್ಪನಟಗಿ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ತಿಪ್ಪನಟಗಿಯ ಗ್ರಾಮದ ಮಂಜುನಾಥ ತಂದೆ ಮಾನಪ್ಪ (22) ಸಿಡಿಲಿಗೆ ಬಲಿಯಾದ ಯುವ ರೈತ. ಎಂದಿನಂತೆ ಬೇಸಿಗೆ ಬೆಳೆಯಲ್ಲದೆ ಮುಂಬರುವ ಮಳೆಗಾಲದ ಬೆಳೆಗಾಗಿ ಹೊಲದಲ್ಲಿರುವ ಬದುಗಳ ಸ್ವಚ್ಛತೆಗಾಗಿ ತೆರಳಿದ್ದನು. ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಗುಡುಗು ಸಿಡಿಲು ಸಹಿತ ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ತಮ್ಮ ಹೊಲದಲ್ಲಿರುವ ಹುಣಸೆಗಿಡದ ಹತ್ತಿರ ನಿಂತಿದ್ದಾರೆ. ಸಿಡಿಲು ಮರಕ್ಕೆ ಹೊಡೆದು ಯುವ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.