ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ನಗರದ ದರ್ಶನ ಭೂಮಿ ಬುದ್ಧ ವಿಹಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿ ನಿಮಿತ್ತ ಸಾಮೂಹಿಕ ವಿವಾಹ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಂದೇ ಸಾಮೂಹಿಕ ವಿವಾಹ ನೆರವೇರಿಸಿರುವ ಅಂಬೇಡ್ಕರರ ಅಭಿಮಾನಿ ಯುವಕರ ಕಾರ್ಯ ಸ್ತುತ್ಯರ್ಹವಾಗಿದೆ. ಸತಿಪತಿಯಾಗಿ ವಿವಾಹದ ಬಂಧನಕ್ಕೆ ಒಳಗಾಗಿ ಸುಖಸಂಸಾರ ನಡೆಸಿ ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡಬೇಕು. ಅದ್ಧೂರಿ ವಿವಾಹಗಳು ಸಮಾಜಕ್ಕೆ ಮಾರಕವೇ ಹೊರತು ಪ್ರೇರಕವಲ್ಲ. ಸಾಮೂಹಕ ವಿವಾಹ ಸಾಲದ ಕೂಪದಿಂದ ಪಾರು ಮಾಡುತ್ತದೆ. ಆದ್ದರಿಂದ ಸಾಮೂಹಿಕ ವಿವಾಹ ಪ್ರತಿಯೊಂದು ಕುಟುಂಬಳಿಗೂ ಒಳಿತು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಬುದ್ಧ ಬಸವ ಅಂಬೇಡ್ಕರ್‌ರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಂಗಾನಂದ ಹಾಗೂ ನೌಪಾಲ್ ಬಂತೇಜಿ ನೇತೃತ್ವದಲ್ಲಿ ಪಂಚಶೀಲ ತ್ರಿಸರಣ ಪಠಣದೊಂದಿಗೆ 21 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಲಾಯಿತು. ಮುಖಂಡರಾದ ಮಲ್ಲಿಕಾರ್ಜುನ ವಾಗಣಗೇರ, ಸಾಹೇಬಗೌಡ ವಾಗಣಗೇರ ನೇತೃತ್ವ ವಹಿಸಿದ್ದರು.
ದಲಿತ ಹೋರಾಟಗಾರ ಮಲ್ಲಿಕಾರ್ಜುನ ಕ್ರಾಂತಿ, ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಮನೋಹರ ಮೊರೆ, ಮಾನು ಗುರಿಕಾರ, ಮಲ್ಲಯ್ಯ ಕಮತಗಿ, ದುರ್ಗಪ್ಪ ಗೋಗಿಕೇರ, ಮಾನಪ್ಪ ಕರಡಕಲ್, ದೇವಿಂದ್ರಪ್ಪ ಪತ್ತಾರ, ಮಾನಪ್ಪ ಕಟ್ಟಿಮನಿ, ಶಿವಲಿಂಗ ಹಸನಾಪುರ, ಚಂದ್ರಶೇಖರ ಹಸನಾಪುರ, ರಾಮಚಂದ್ರ ವಾಗಣಗೇರ, ಮಲ್ಕಪ್ಪ ತೇಲ್ಕರ್, ನಿಂಗಣ್ಣ ಗೋನಾಲ, ಮಹಾದೇವಪ್ಪ ಬಿಜಾಸಪುರ, ಶರಣಪ್ಪ ವಾಗಣಗೇರ, ಹಣಮಂತ ಕಟ್ಟಿಮನಿ, ಮಾನಪ್ಪ ಶೆಳ್ಳಗಿ, ವೆಂಕಟೇಶ್ವರ ಸುರಪುರ, ಮಾನಪ್ಪ ಬಿಜಾಸಪುರ, ಎಂ, ಪಟೇಲ್, ಖಾಜಾ ಅಜ್ಮೀರ್, ಮಡಿವಾಳಪ್ಪ ಕಿರದಳ್ಳಿ, ಜಿ.ಆರ್. ಬನ್ನಾಳ, ಮಹಾದೇವಪ್ಪ ಬೊಮ್ಮನಹಳ್ಳಿ, ಸಿದ್ದು ಮಾಸ್ಟರ್, ಮಲ್ಲಿಕಾರ್ಜುನ ತಳ್ಳಳ್ಳಿ, ರವಿ ವಡಿಗೇರ ಸೇರಿದಂತೆ ಇತರರಿದ್ದರು.
ಸುರಪುರ: ಸುರಪುರ: ನಗರದ ದರ್ಶನ ಭೂಮಿ ಬುದ್ಧ ವಿಹಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೩ನೇ ಜಯಂತಿ ನಿಮಿತ್ತ ಸಾಮೂಹಿಕ ವಿವಾಹ ನೆರವೇರಿತು.