ವರದಿ : ಸಿಕಂದರ ಎಂ.ಆರಿ
ಕ್ರಾಂತಿ ವಾಣಿ ವಾರ್ತೆ
ಗದಗ : ಲೋಕಸಭಾಸಾರ್ವತ್ರಿಕ ಚುನಾವಣೆ -2024 ರ ಅಂಗವಾಗಿ ಗದಗ ಜಿಲ್ಲಾ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಾಧ್ಯಮ ತಂಡ ಒಳಗೊಂಡ 15 ಸೀಮಿತ ಓವರ್ ಗಳ ಟೆನ್ನಸಿ ಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ 23 ರಿಂದ 27 ರವರೆಗೆ ಬೆಳಿಗ್ಗೆ 9 ಗಂಟೆಗೆ ಆಯೋಜಿಸಿದೆ ಪಂದ್ಯದ ವಿವರ ಇಂತಿದೆ.
ಏಪ್ರಿಲ್ 24 ರಂದು ನಗರದ ವಿ.ಡಿ.ಎಸ್. ಮೈದಾನದಲ್ಲಿ 3 ನೇ ಪಂದ್ಯಾವಳಿಯೂ ಮಾಧ್ಯಮ ತಂಡ-1 ಜೊತೆಗೆ ಆರೋಗ್ಯ ಇಲಾಖೆ ತಂಡ. ಏಪ್ರಿಲ್ 25 ರಂದು ನಗರದ ವಿ.ಡಿ.ಎಸ್. ಮೈದಾದಲ್ಲಿ 4 ನೇ ಪಂದ್ಯಾವಳಿಯೂ ಮಾಧ್ಯಮ ತಂಡ-2 ಜೊತೆಗೆ ಶಿಕ್ಷಣ ಇಲಾಖೆ.ಏಪ್ರಿಲ್ 27 ರಂದು ನಗರದ ವಿ.ಡಿ.ಎಸ್. ಮೈದಾನದಲ್ಲಿ ಅಂತಿಮ ಪಂದ್ಯ ಹಮ್ಮಿಕೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣು ಗೋಗೇರಿ ಅವರು ತಿಳಿಸಿದ್ದಾರೆ.