ಕ್ರಾಂತಿ ವಾಣಿ ಶಹಾಪುರ.
ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯರು ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಗಳಾದ ಸಿಇಟಿ, ನೀಟ್ ಹಾಗೂ ಜೆ ಇ ಇ ಪರೀಕ್ಷೆಗೆ ಸರಿಯಾದ ತರಬೇತಿ ಇಲ್ಲದೆ ವೃತ್ತಿಪರ ಕೋರ್ಸ್ ಪ್ರವೇಶ ದಿಂದ.ವಂಚಿತರಾಗಿದ್ದರು. ಅದನ್ನು ಮನಗಂಡು ನಗರದ ಸಂಗಮ್ಮ ಬಾಪುಗೌಡ ದರ್ಶನಾಪುರ್ ಪಿಯು ಕಾಲೇಜ್ ಮತ್ತು ಶ್ರೀ ಗುರುಕುಲ ಅಕಾಡೆಮಿ ಬೆಂಗಳೂರು ಇವರು ಜಂಟಿಯಾಗಿ ನಗರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಸೈನ್ಸ್ ಕಾಲೇಜ್ ಆರಂಭಿಸಿ ಅದರ ಮೂಲಕ ವೃತ್ತಿಪರ ಕೋರ್ಸ್ ಪ್ರವೇಶ ಪರೀಕ್ಷೆಗೆ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಭಾಗದ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತರಬೇತಿಯ ಮುಖ್ಯಸ್ಥ ಡಾ. ಬಸವರಾಜ ಬಿಜೆಪಿ ತಿಳಿಸಿದರು
ನಗರದ ಸಂಗಮ್ಮ ಬಾಪು ಗೌಡ ದರ್ಶನಾಪುರ್ ಕಾಲೇಜ್ ಕ್ಯಾಂಪಸ್ ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ವಿದ್ಯಾರ್ಥಿನಿಯರು ಪರಿಶ್ರಮದಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದರು ವೃತ್ತಿಪರ ಕೋರ್ಸ್ ಗಳಿಗೆ ಇಲ್ಲಿ ಅವಕಾಶವಿಲ್ಲದ ಕಾರಣ ಬೇರೆ ಕಡೆ ಹೋಗಲು ಆಗದೆ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಸಂದರ್ಭಗಳೇ ಜಾಸ್ತಿ. ಇಂದಿನ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳನ್ನು ದೂರ ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದರು. ಪಾಲಕರ ಸಮಸ್ಯೆಯನ್ನು ನೀಗಿಸಲು ನಮ್ಮ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರಿಗಾಗಿ ಪಿಯು ಕಾಲೇಜ್( ಸೈನ್ಸ್) ಪ್ರಾರಂಭಿಸುವ ಮೂಲಕ ದೊಡ್ಡ ದೊಡ್ಡ ನಗರದಲ್ಲಿ ಸಿಗುವ ಸೌಲಭ್ಯ ವನ್ನು ಇಲ್ಲಿನ ವಿದ್ಯಾರ್ಥಿನಿಯರಿಗೆ ವೃತ್ತಿಪರ ಕೋರ್ಸ್ ತರಬೇತಿ ನೀಡಲು ನಮ್ಮಲ್ಲಿ ನುರಿತ ಉಪನ್ಯಾಸಕರು, ತಂತ್ರಜ್ಞಾನ ಸಂಯೋಜಿತ ಕಲಿಕಾ ವಿಧಾನ ಮತ್ತು ವಿದ್ಯಾರ್ಥಿನಿಯರಿಗೆ ರಕ್ಷಣೆಯೊಂದಿಗೆ ಕಾಲೇಜು ಪ್ರಾರಂಭಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ, ಗುರುಕುಲ ಅಕಾಡೆಮಿ ಬೆಂಗಳೂರಿನ ಸಿಇಓ ಮುರಳಿದರ ಮುಳ್ಳೂರು, ಡಾ. ಶಿವರಾಜ್, ವೀರಭದ್ರಪ್ಪ ಇದ್ದರು.