ವರದಿ : ಸಿಕಂದರ ಎಂ.ಆರಿ
ಕ್ರಾಂತಿ ವಾಣಿ ವಾರ್ತೆ
ಗದಗ : ಜಿಲ್ಲೆಯ ಗಜೇಂದ್ರಗಡ ನಗರದಲ್ಲಿ ಬುಧವಾರ ಕರ್ನಾಟಕ ರತ್ನ, ಗಾನಗಂಧರ್ವ, ನಟಸಾರ್ವಭೌಮ, ರಸಿಕರ ರಾಜ, ವರನಟ ಡಾ. ರಾಜ್‌ಕುಮಾರ್ ಅವರ 95 ನೇ ಜನ್ಮದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಡಾ. ರಾಜ್‌ಕುಮಾರ್ ಸರ್ಕಲ್ ನಲ್ಲಿ ಡಾ. ರಾಜ್‌ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀ ಸಂಗಪ್ಪ ಯಲಬುಣಚಿ ಅವರ ನೇತೃತ್ವದಲ್ಲಿ ಗದಗ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಎಮ್ ವಾಯ್ ಮುಧೋಳ (ಸಾಗರ) ಅವರ ಅಧ್ಯಕ್ಷತೆಯಲ್ಲಿ ಅಣ್ಣಾವ್ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಕೇಕ್ ಕತ್ತರಿಸಿ ಪುನೀತ್ ಡ್ಯಾನ್ಸ ಅಕಾಡೆಮಿಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಪೆನ್ ವಿತರಿಸುವ ಮೂಲಕ ಡಾ. ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳಾದ ಬಾಷೇಸಾಬ್ ಕರನಾಚಿ, ಬಾದಶಾ ಬಾಗವಾನ, ರವಿಕುಮಾರ್ ಮೋಹಿತೆ, ರವಿ ಶಾಸ್ತ್ರಿ, ಶಂಕರ ರಾಠೋಡ, ಅಶೋಕ ಮ್ಯಾಕಲ್, ಕಳಕೇಶ ನಿಂಬೋಜಿ, ಶಾಮುದ್ದಿನ್, ಮುಸ್ತಾಕ್ ಉಟಗುರ, ಹುಸೇನ್ ಸಾಬ್ ಉಪಸ್ಥಿತರಿದ್ದರು