ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಕೆಲಸಕ್ಕಿಲ್ಲ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ವರದಿ : ಸಿಕಂದರ ಎಂ.ಆರಿ

ಕ್ರಾಂತಿವಾಣಿ ವಾರ್ತೆ

ಗದಗ : ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆ ಕೆಲಸಕ್ಕಿಲ್ಲದಂತಾಗಿದೆ. ಈಗಾಗಲೇ ರಾಜ್ಯದ ಅಭಿವೃದ್ಧಿ ಕಾರ್ಯಗಳು ಚಂಬೂ ಹಿಡಿಯುವಂತಹ‌ ಸ್ಥಿತಿಗೆ ತಲುಪಿವೆ. ಕಾಂಗ್ರೆಸ್ ‌ಪಕ್ಷದ ಗ್ಯಾರಂಟಿ ಇನ್ನೊಂದು‌ ಇದೆ ಅದುವೆ ಬರಗಾಲ ಗ್ಯಾರಂಟಿ.ಇದರಿಂದ ರಾಜ್ಯ‌ದ ಜನತೆಯ ಕೈಯಲ್ಲಿ ಖಾಲಿ‌ ಚಂಬೂ ಕೊಡುವುದರಲ್ಲಿ ಯಾವುದೇ ‌ಅನುಮಾನವಿಲ್ಲ.‌ ಈ ಲೋಕಸಭಾ ಸಾರ್ವತ್ರಿಕ ಚುನಾವಣೆಯು ದೇಶದ ಭವಿಷ್ಯಕ್ಕೆ ಸಂಬಂಧಿಸಿದೆ. ದೇಶವನ್ನು ವಿಶ್ವದಲ್ಲಿಯೇ ವಿಶ್ವಗುರು ಮಾಡುವ ಕನಸು‌ಕಂಡಿರುವ ಪ್ರಧಾನ‌ ಮಂತ್ರಿ ನರೇಂದ್ರ ‌ಮೋದಿ ಅವರ ಕೈ ಬಲಪಡಿಸಲು ಮತ್ತೊಮ್ಮೆರಾಜ್ಯದ ಮತದಾರ ಪ್ರಭುಗಳು ಸಿದ್ಧರಾಗಿದ್ದಾರೆ. ರಾಜ್ಯದ ೨೮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ವಿಜಯದ ಪತಾಕೆ ಹಾರಿಸಲು ಸನ್ನದರಿದ್ದಾರೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ‌ ನುಡಿದಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಗದಗ ರಸ್ತೆಯಲ್ಲಿರುವ ಕೊಂತಿಮಲ್ಲಪ್ಪನ ದೇವಸ್ಥಾನ ಮುಂಭಾಗದ ಆವರಣದಲ್ಲಿ ಬುಧವಾರ ಸಂಜೆ ಲೋಕಸಭಾ ಚುನಾವಣೆ ‌ಪ್ರಚಾರ ಸಭೆಯಲ್ಲಿ ಅವರು ಮಾತಮಾಡಿದರು.

ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಜೊತೆಗೆ ರಾಜ್ಯ ಸರ್ಕಾರವೂ ರೈತರಿಗೆ 4 ಸಾವಿರ ರೂ. ನೀಡುತ್ತಿತ್ತು. ರಾಜ್ಯ ಸರ್ಕಾರ ಅದನ್ನು ಕಡಿತ ಮಾಡಿ, ರೈತರಿಗೆ ಚಂಬು ಕೊಟ್ಟಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 13 ಲಕ್ಷ ವಿದ್ಯಾರ್ಥಿಗಳಿ ಸ್ಕಾಲರ್ ಶಿಪ್ ಕೊಡಲಾಗಿತ್ತು, ಅದನ್ನು ನಿಲ್ಲಿಸಿದ್ದಾರೆ. ದಲಿತ ಸಮುದಾಯಕ್ಕೆ ಮೀಸಲಿಟ್ಟಿದ್ದ ಎಸ್ಸಿಪಿ ಟಿಎಸ್ಪಿಯ 11380 ಕೋಟಿ ಎಸ್ಸಿಎಸ್ಟಿ ಅನುದಾನವನ್ನ ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದೆಲ್ಲ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟಿದ್ದಾರೆ ಎಂದರು.

ಕಾಂಗ್ರೆಸ್‌ನವರಿಗೆ ಮೋದಿ ಶನಿನೇ : ಯಾರು ಭ್ರಷ್ಟಾಚಾರ ಮಾಡುತ್ತಾರೆ.ಯಾರು ದೇಶವಿರೊಧಿ ಚಟುವಟಿಕೆ ಮಾಡುತ್ತಾರೆ. ಯಾರು ಜನವಿರೋಧಿ ಕೆಲಸ ಮಾಡುತ್ತಾರೆ ಅವರಿಗೆ ಮೋದಿಯವರು ಶನಿಯಾಗಿ ಕಾಡುತ್ತಾರೆ. ದೇಶಭಕ್ತರಿಗೆ, ಯುವಕರಿಗೆ, ಹೆಣ್ಣುಮಕ್ಕಳಿಗೆ ಅವರು ವರವನ್ನು ಕೊಡುತ್ತಾರೆ. ಮೋದಿ ಜೀ ಅವರು ನಮ್ಮ‌ ದೇಶಕ್ಕೆ ಮತ್ತು ದೇಶದ ಯುವ‌ ಜನತೆಗೆ ಜೈ ಹನುಮಾನ ರೀತಿಯಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಭಾರತದ ರಕ್ಷಣೆಗೆ ಮತ್ತೊಮ್ಮೆ ನರೇಂದ್ರ ಮೋದಿ ಅವರು ಅವಶ್ಯವಾಗಿದ್ದಾರೆ ಎಂದರು.‌

ಮೋದಿಯವರದು ಅಕ್ಷಯಪಾತ್ರೆ : ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಶಾಸ್ವತ ಯೋಜನೆಗಳನ್ನು ಕೊಟ್ಟಿದ್ದಾರೆ. ಈ ಮೂಲಕ ಮೋದಿಯವರು ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ. 6 ಲಕ್ಷ ಬೀದಬದಿ ವ್ಯಾಪಾರಸ್ಥರಿಗೆ ಅನುದಾನ ನೀಡಿದ್ದಾರೆ. 9 ಲಕ್ಷ ಮನೆಗಳಿಗೆ ಉಜ್ವಲ ಗ್ಯಾಸ್ ಸಂಪರ್ಕ ಕಲ್ಪಿಸಿದ್ದಾರೆ. ಪ್ರದಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 4 ಲಕ್ಷ ಮನೆ,12 ಲಕ್ಷ ಶೌಚಾಲಯ, ಕೊವಿಡ್ ಸಂದರ್ಭದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಕೊಟ್ಟಿದ್ದು ನರೇಂದ್ರ ಮೋದಿ, ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದು ನರೇಂದ್ರ ಮೋದಿ. ಕಾಂಗ್ರೆಸ್ ಒಂದು ಕಾಳು ಅಕ್ಕಿ ಕೊಟ್ಟಿಲ್ಲ, ಇದನ್ನು ಕಾಂಗ್ರೆಸ್ ಚೊಂಬಿಗೆ ಸೇರಿಸಿಕೊಳ್ಳಲಿ ಎಂದರು.

ಮಹಿಳೆಯರಿಗ ಒಂದು‌ ಲಕ್ಷ ರೂ, ಗ್ಯಾರಂಟಿ ಕಾರ್ಡ್ ಕಾಂಗ್ರೆಸ್ ‌ನವರ ಮುಖಕ್ಕೆ ಹರಿದು ಬಿಸಾಕಿ : ಕೇಂದ್ರದಲ್ಲಿ ಕಾಂಗ್ರೆಸ್ ‌ಅಧಿಕಾರಕ್ಕೆ ಬಂದರೆ ದೇಶದ ಮಹಿಳೆಯರಿಗೆ ಒಂದು ಲಕ್ಷ ರೂ, ನೀಡುತ್ತೇವೆ‌‌ ಎಂಬ ಆಸೆಯನ್ನು ತೋರಿಸುತ್ತಿರುವ ಕಾಂಗ್ರೆಸ್ ‌ನಾಯಕರಿಗೆ ಅವರು ನೀಡುತ್ತಿರುವ ಗ್ಯಾರಂಟಿ ಕಾರ್ಡ್‌ನ್ನು ಹರಿದು ಅವರ ಮುಖಕ್ಕೆ ಬಿಸಾಕಿ ಎಂದು ಮಹಿಳೆಯರಿಗೆ‌ ಕಿವಿ ಮಾತು ಹೇಳಿದರು. ಏಕೆಂದರೆ, ಇದು ಗ್ಯಾರಂಟಿ ಅಲ್ಲಾ, ಇದು ಗ್ಯಾರಂಟಿನೇ ಆಗಿದ್ದರೆ ಸ್ಥಳೀಯ ‌ನಾಯಕರು ಮನೆ ಮನೆಗೆ ಹೋಗಿ ಹಂಚುತ್ತಿದ್ದರು, ಇದು‌‌‌‌ ಸುಳ್ಳು ಗ್ಯಾರಂಟಿ ‌ಆಗಿರುವುದರಿಂದ ಬೇರೆ ಕಡೆಯ ನಾಯಕರು ಅಥವಾ‌ ಕಾಂಗ್ರೆಸ್ ನ ಕಾರ್ಯಕರ್ತರು ಬಂದು ಹಂಚುತ್ತಿದ್ದಾರೆ. ಆದ್ದರಿಂದ‌‌ ಸ್ವಾಭಿಮಾನಿ ‌ಮಹಿಳೆಯರು‌ ಇದರಾಸೆಗೆ ಹೋಗಬಾರದು. ಮಹಿಳೆಯರು ರಾಜ್ಯದಲ್ಲಿ ರಕ್ಷಣೆ ಮತ್ತು ನಿರ್ಭಯವಾಗಿ ಜೀವನ ನಡೆಸಬೇಕಾದ್ರೆ ದೇಶಕ್ಕೆ ನರೇಂದ್ರ ‌ಮೋದಿ ಬೇಕು ಎಂದರು.‌

ಲೋಕಸಭಾ ಚುನಾವಣೆ ಆದ ಒಂದೇ ವರ್ಷದಲ್ಲಿಯೇ ವಿಧಾನ‌ಸಭಾ ಚುನಾವಣೆ : ಪ್ರಸುತ್ತ ನಡೆಯುತ್ತಿರುವ ಚುನಾವಣೆಯಲ್ಲಿ ಇಡೀ‌ ದೇಶದಲ್ಲಿಯೇ ಕಾಂಗ್ರೆಸ್ ಪಕ್ಷ‌ ೪೦ಕ್ಕೂ‌ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಸುಮ್ಮನೆ ‌ಕಾಂಗ್ರೆಸ್ ತೀರುಕನ ಕನಸು ಕಾಣುತ್ತಿದ್ದಾರೆ.‌ ಅಲ್ಲದೇ, ನಮ್ಮ ರಾಜ್ಯದಲ್ಲಿ ದುರಾಢಳಿತ ಮತ್ತು‌ ನಿರ್ಲಕ್ಷ್ಯ ಮನೋಭಾವದ ಕಾಂಗ್ರೆಸ್ ಸರ್ಕಾರ ಒಂದೇ ವರ್ಷದಲ್ಲಿ ದಿವಾಳಿಯಾಗಲಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಇನ್ನೊಂದು ‌ಚುನಾವಣೆಯನ್ನು‌ ಎದುರಿಸಲು ಸಿದ್ಧರಾಗಿದೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು‌ ನಿಮ್ಮ‌‌ ಭಾಗದ‌ ಮಾಜಿ‌ಸಚಿವ ಕಳಕಪ್ಪ ಬಂಡಿ ಮತ್ತೊಮ್ಮೆ ಈ ಭಾಗದ‌‌ ಶಾಸಕರಾಗಿ ಸರ್ಕಾರದಲ್ಲಿ ಉನ್ನತ ‌ಸ್ಥಾನವನ್ನು ಪಡೆದು ಈ ಭಾಗದ ಜನರ‌ ಸೇವೆ ಮಾಡುತ್ತಾರೆ‌ ಎಂದು ಭವಿಷ್ಯ ನುಡಿದರು.

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ,ದೇಶ ಸದೃಢವಾಗಿದ್ದರೆ, ದೇಶದ ಜನತೆ ಸುಭ್ರದವಾಗಿರಲು ಸಾಧ್ಯವಾಗುತ್ತದೆ.ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ, ಡಿ.ಸಿ.ಎಂ. ಹಾಗೂ ಗೃಹ ಸಚಿವರು ವಯಕ್ತಿಕ ಜಗಳ ಎಂದು ಹೇಳುತ್ತಿದ್ದಾರೆ ಇವರು ಮಾನವಿತೆಯನ್ನು ಮರೆತ್ತಿದ್ದಾರೆ.‌ ಅಧಿಕಾರದಾಸೆಗೆ ಕಣ್ಣು ಮುಚ್ಚಿಕೊಂಡು ರಾಜ್ಯವನ್ನು ಆಳುತ್ತಿದ್ದಾರೆ ಇದು ದುರಂತವೇ ಸರಿ.‌ ಮುಸ್ಲಿಂ ಸಮಾಜವನ್ನು ಭಯಗೊಳ್ಳಿಸುವ ಮೂಲಕ ಕಾಂಗ್ರೆಸ್ ಮತವನ್ನು ಪಡೆಯುತ್ತಿದ್ದಾರೆ. ಬಿಜೆಪಿ ಪಕ್ಷದಿದ ಮುಸ್ಲಿಂ ಸಮಾಜದವರಿಗೆ ಯಾವುದೇ ಭಯವಿಲ್ಲ, ನಮ್ಮ ದೇಶ‌ದಲ್ಲಿ ಎಲ್ಲಾ ಜನಾಂಗದವರನ್ನು ಒಳಗೊಂಡಿದೆ. ‌ನಮ್ಮ‌ ರಕ್ಷಣೆ ಮಾಡಲು‌ ಮೋದಿ ಅವರಿಂದ ಮಾತ್ರ ಸಾದ್ಯ. ಮುಸ್ಲಿಂ,ಕ್ರೈಸ್ತ ಧರ್ಮದವರಿಗೆ ಹಲವಾರು ರಾಷ್ಟ್ರಗಳು‌ ಇವೆ. ಆದರೆ, ಹಿಂದೂಗಳಿಗೆ ಒಂದೇ ರಾಷ್ಟ್ರ‌ ಇದೆ. ಆದ್ದರಿಂದ ಹಿಂದೂಗಳು‌ ಒಗ್ಗಟ್ಟಿನ ಪ್ರದರ್ಶನ ಮಾಡಬೇಕು. ಹಿಂದೂಗಳು ಪ್ರಭಲವಾಗಬೇಕಾದರೆ ಮೋದಿಯವರ ಕೈಬಲಪಡಿಸಬೇಕು ಎಂದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮಾತನಾಡಿ,ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ.ರಾ ಜ್ಯದಲ್ಲಿ ಶೀಘ್ರದಲ್ಲೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸರ್ಕಾರ ಪತನಗೊಳ್ಳಲು ನಾವು ಏನನ್ನೂ ಮಾಡಬೇಕಾಗಿಲ್ಲ. ಅದು ತನ್ನಷ್ಟಕ್ಕೆ ತಾನೇ ಪತನವಾಗಲಿದೆ.ಲೋಕಸಭಾಯಲ್ಲಿ ಮಾಜಿ ಮುಖ್ಯಮಂತ್ರಿಗಳು ಕಣಕ್ಕೆ ಇಳಿದಿದ್ದಾರೆ.ದೇಶದ ಅಭಿವೃದ್ಧಿಗಾಗಿ‌ ಮಹಾನ್ ನಾಯಕರು ಇದ್ದಾರೆ. ಉಚಿತ ಅಕ್ಕಿ ಯೋಜನೆಯನ್ನು ಪೂರೈಸಲು ಸಿದ್ದರಾಮಯ್ಯ ನವರ ರಾಜ್ಯ ಸರ್ಕಾರ ವಿಫಲವಾಗಿದೆ.‌ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಯೋಜನೆಗಳು ಗ್ಯಾರಂಟಿ ಹೆಸರಿನಲ್ಲಿ ಮತ ಕೇಳಬೇಕಾಗಿತ್ತು. ಅದನ್ನು ಬಿಟ್ಟು ಚಂಬೂ ಹಿಡಿದ್ದಾರೆ. ಏಕೆಂದರೆ, ರಾಜ್ಯದಲ್ಲಿ ಅವರ ಗ್ಯಾರಂಟಿಗಳು ಕೆಲಸ ಮಾಡುತ್ತಿಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ದೇಶದಲ್ಲಿ ೭೫ %ರಷ್ಟು ಯೋಜನೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಧನೆಯಾಗಿದೆ.‌ಐದು ಗ್ಯಾರಂಟಿ ಯೋಜನೆಯಲ್ಲಿ ರೈತರಿಗೆ ಒಂದು ಯೋಜನೆ ಕೂಡ‌ ಇಲ್ಲ.‌ಕಾಂಗ್ರೆಸ್ ಸರ್ಕಾರ ಬರಗಾಲ ಗ್ಯಾರಂಟಿ ಸರ್ಕಾರ ಎಂದು ವ್ಯಂಗ್ಯ ಮಾಡಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಅವಧಿಯಲ್ಲಿ ರೈತರಿಗೆ ಸಾಕಷ್ಟು ಸಾಲ ಮನ್ನಾವಾಗಿದೆ.೨೫ ಸಾವಿರ ಕೋಟಿ ಕೊಟ್ಟಿದ್ದಾರೆ.‌ ದೇಶದ ಚಿಂತೆ‌ ನಡೆಯಬೇಕಾಗಿದೆ.‌ ಈ ಚುನಾವಣೆ ಗ್ರಾ.ಪಂ, ಜಿ.ಪಂ, ತಾ.ಪಂ‌, ಎಂ.ಎಲ್.ಎ ಚುನಾವಣೆ ಅಲ್ಲಾ ಇದು ಮೋದಿ ವಿರುದ್ಧ ರಾಹುಲ್ ಗಾಂಧಿ ಚುನಾವಣೆಯಾಗಿದೆ. ಆದ್ದರಿಂದ ಬಸವರಾಜ ಬೊಮ್ಮಾಯಿ ಅವರಿಗೆ ಮತ ಹಾಕುವ ಮೂಲಕ ಮತ್ತೊಮ್ಮೆ ನರೇಂದ್ರ ‌ಮೋದಿ ಅವರನ್ನು ಪ್ರಧಾನ ಮಂತ್ರಿ‌‌ ಮಾಡಲು ‌ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.‌

ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ರೋಣ ಮಂಡಲ‌ ಅಧ್ಯಕ್ಷ ಮುತ್ತಣ್ಣ ಕಡಗದ, ಉಮೇಶ ಸಂಗನಾಳಮಠ, ಸಜ್ಜನ ವಕೀಲರು,  ಮಕ್ತುಂಸಾಬ ಮುಧೋಳ ಸೇರಿದಂತೆ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

 

 

 

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ