ವರದಿ : ಸಿಕಂದರ ಎಂ. ಆರಿ
ಕ್ರಾಂತಿವಾಣಿ ವಾರ್ತೆ
ಗದಗ : ನಗರದ ಜಿಲ್ಲಾ ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಸಮಾಜದ ವತಿಯಿಂದ ಗುರುವಾರ ಶಹರದ ಎ ಪಿ ಎಮ್ ಸಿ ಯಲ್ಲಿ ಇರುವ ಸಿದ್ದನಗೌಡ ಪಾಟೀಲ ರವರ ವಕಾರದಲ್ಲಿ ಸಮಾಜದ ದ್ರುವತಾರೆ ಧಾರವಾಡ ಗ್ರಾಮೀಣ ಭಾಗದ ಶಾಸಕರು ಮಾಜಿ ಸಚಿವರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ವಿನಯ್ ಕುಲಕರ್ಣಿ ಯವರ ಸಮ್ಮುಖದಲ್ಲಿ ಸಭೆ ಜರುಗಿತು.
ಅಧ್ಯಕ್ಷರಾದ ಅನಿಲಕುಮಾರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಮಾಜವು ಗದಗ ಜಿಲ್ಲೆಯಲ್ಲಿ ಯಾವಾಗಲೂ ಕಾಂಗ್ರೆಸ್ ಪಕ್ಷದ ಪರವಾಗಿ ಇದೆ ಅನ್ನುವುದಕ್ಕೆ ಈ ಸಭೆಯ ಸಾಕ್ಷಿಯಾಗಿದೆ. ನಾವೆಲ್ಲರೂ ಪಕ್ಷದ ಪರವಾಗಿ ಕೆಲಸ ಮಾಡಲು ತಯಾರಾಗಿದ್ದೇವೆ. ನಿಮ್ಮ ಮಾರ್ಗದರ್ಶನದಲ್ಲಿ ನಡೆಯುತ್ತೆವೆ. ಅಂತ ಹೇಳಿದರಲ್ಲದೆ ಬರುವ ದಿನಗಳಲ್ಲಿ ತಾವುಗಳು ಯಾವಾಗಲೂ ನಮ್ಮ ಜೊತೆಗೆ ಇರಬೇಕು ನಾವೆಲ್ಲರೂ ಕೂಡಿಕೊಂಡು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಆನಂದಸ್ವಾಮಿ ಗಡ್ಡದೇವರಮಠ ರವರ ಗೆಲ್ಲುವಿನಲ್ಲಿ ಸಕ್ರಿಯವಾಗಿ ದುಡಿಯೋಣ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಮುಂಡರಗಿ ತಾಲ್ಲೂಕಿನ ಹಿರಿಯರಾದ ಕೊಟ್ರಗೌಡ ಪಾಟೀಲ್ ಮಾತನಾಡಿ, ಬರುವ ಲೋಕಸಭಾ ಚುನಾವಣೆ ಯಲ್ಲಿ ನಾವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ಸನ್ನದ್ದರಾಗೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಗವಹಿಸಿದ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಬೋಳನವರ ಮಾತನಾಡಿ, ಕಾಂಗ್ರೆಸ್ ಪಕ್ಷವು ನಮ್ಮ ಸಮಾಜದ ಮಹಿಳೆಯರಿಗೆ ಹಲವಾರು ಅವಕಾಶಗಳನ್ನು ನೀಡಿದೆ ಬರುವ ಚುನಾವಣೆಯಲ್ಲಿ ನಮ್ಮ ಸಮಾಜದ ಪ್ರತಿಯೊಬ್ಬ ಮಹಿಳೆಯರ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೇಲ್ಲಿಸೋಣ ಎಂದು ತಿಳಿಸಿದರು .
ಕಾರ್ಯಕ್ರಮದ ಮುಖ್ಯ ಅತಿಥಿ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಮಾತನಾಡಿ, ನಮ್ಮ ಸಮಾಜವು ಕಾಂಗ್ರೆಸ್ ಪಕ್ಷದ ಪರವಾಗಿ ಇದೆ ಅನ್ನುವುದಕ್ಕೆ ನಾನೇ ಸಾಕ್ಷಿ ಆಗಿರುವೆ ನನ್ನನು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ನನ್ನಾಗಿ ಮಾಡಿದೆ. ಉನ್ನತ ಹುದ್ದೆ ನೀಡಿ ನಮ್ಮ ಸಮಾಜಕ್ಕ ಶಕ್ತಿ ತುಂಬಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸಲು ಶಕ್ತಿ ತುಂಬೊಣ ನಮ್ಮ ಸಮಾಜವು ಯಾವಾಗಲು ನಮ್ಮ ಜೊತೆಗೆ ಇದೆ. ನೀವು ಕೆಲಸ ಮಾಡಲು ತಯಾರು ಆಗಿರಿ ನಿಮ್ಮ ಹಿಂದೆ ನಾನು ಯಾವಾಗಲೂ ಇರುತ್ತೀನಿ ಅಂತ ಅಭಯ ನೀಡಿದರು.
ಈ ಕಾರ್ಯಕ್ರಮದಲ್ಲಿ KCC ಬ್ಯಾಂಕ್ ನಿರ್ದೇಶಕರು ಮಲ್ಲಪ್ಪ ಕಲಗುಡಿ ಬಸವರಾಜ್ ಮನಗುಂಡಿ ಚೆನ್ನವೀರ ಮಳಗಿ ಸಿ ಕೆ ಮಾಳಶೆಟ್ಟಿ ಕೊಟ್ರಗೌಡ ಪಾಟೀಲ ಬಸವರಾಜ್ ದೇಸಾಯಿ ಎಸ ವಿ ಕೋಟಗಿ ಮೋಹನ್ ಕಮತರ
ಕಿರಣ್ ಕಮತರ ಶರಣಪ್ಪ ಗೋಳಗೊಳಕಿ
ಶರಣು ಬೋಳನವರ ಲಲಿತಾ ಗೋಳಗೊಳಕಿ ರುದ್ರಮ್ಮ ಕೆರಕಲಮಟ್ಟಿ ಲಕ್ಮಿ ಧ್ಯಾಪನಗೌಡ್ರು ಅಸುಂಡಿಯ ಶಿವಪ್ಪ ಮುಳುಗುಂದ ಹೊಸಳ್ಳಿಯ ಬುದಪ್ಪ ಅಂಗಡಿ ಕುರ್ತ್ಕೋಟಿಯ ಅಶೋಕ್ ಶಿರಹಟ್ಟಿ ಮುತ್ತು ಮುಳವಾಡ ರಮೇಶ ರೋಣದ ಸಂತೋಷ್ ಗುಡ್ಡದ ಸಂಗಮೇಶ್ ಕವಳಿಕಾಯಿ ಹಾಗೂ ಗದಗ್ ತಾಲೂಕಿನ ಅನೇಕ ಗ್ರಾಮಗಳಿಂದ ನೂರಾರು ಜನಸಂಖ್ಯೆಯಲ್ಲಿ ವಿನಯ್ ಕುಲಕರ್ಣಿ ಅವರ ಅಭಿಮಾನಿಗಳು ಹಾಗೂ ಪಂಚಮಸಾಲಿ ಸಮಾಜದ ಮುಖಂಡರು ಹಾಜರಿದ್ದರು.
ಕಿರಣ್ ಕಮತರ ಶರಣಪ್ಪ ಗೋಳಗೊಳಕಿ
ಶರಣು ಬೋಳನವರ ಲಲಿತಾ ಗೋಳಗೊಳಕಿ ರುದ್ರಮ್ಮ ಕೆರಕಲಮಟ್ಟಿ ಲಕ್ಮಿ ಧ್ಯಾಪನಗೌಡ್ರು ಅಸುಂಡಿಯ ಶಿವಪ್ಪ ಮುಳುಗುಂದ ಹೊಸಳ್ಳಿಯ ಬುದಪ್ಪ ಅಂಗಡಿ ಕುರ್ತ್ಕೋಟಿಯ ಅಶೋಕ್ ಶಿರಹಟ್ಟಿ ಮುತ್ತು ಮುಳವಾಡ ರಮೇಶ ರೋಣದ ಸಂತೋಷ್ ಗುಡ್ಡದ ಸಂಗಮೇಶ್ ಕವಳಿಕಾಯಿ ಹಾಗೂ ಗದಗ್ ತಾಲೂಕಿನ ಅನೇಕ ಗ್ರಾಮಗಳಿಂದ ನೂರಾರು ಜನಸಂಖ್ಯೆಯಲ್ಲಿ ವಿನಯ್ ಕುಲಕರ್ಣಿ ಅವರ ಅಭಿಮಾನಿಗಳು ಹಾಗೂ ಪಂಚಮಸಾಲಿ ಸಮಾಜದ ಮುಖಂಡರು ಹಾಜರಿದ್ದರು.