ಮೆಹಂದಿಯಿಂದ ಮತದಾನ ಜಾಗೃತಿ:

ವರದಿ : ಸಿಕಂದರ ಎಂ.‌ಆರಿ‌

ಕ್ರಾಂತಿ ವಾಣಿ ವಾರ್ತೆ

ಗದಗ-ಜಿಲ್ಲೆಯ ರೋಣ ತಾಲೂಕಿನ ಹೊಳೆಮನ್ನೂರು ಗ್ರಾಮ ಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತಿ ಮಟ್ಟದ ಸ್ವೀಪ್ ಸಮಿತಿಯ ಅಧ್ಯಕ್ಷರ ನಿರ್ದೇಶನ ಹಾಗೂ ಮಾರ್ಗದರ್ಶನದೊಂದಿಗೆ ಮತದಾನದ ಜಾಗೃತಿಗಾಗಿ ವಿನೂತನ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದ ಅಂಗನವಾಡಿ ಆಶಾ ಕಾರ್ಯಕರ್ತೆಯರು ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಕೂಸಿನ ಮನೆ ಕೇರ್ ಟೆಕರ್ಸ್ ಜೊತೆಗೂಡಿ ತಮ್ಮ ಕೈಗಳ ಮೇಲೆ ಮದುವೆ ಕಾರ್ಯಕ್ರಮದಲ್ಲಿ ಸಂಭ್ರಮಿಸುವಂತೆ ಮತದಾನದ ಜಾಗೃತಿ ಗಾಗಿ ಘೋಷಣೆಗಳನ್ನು ಬರೆದುಕೊಂಡು ಸಂಭ್ರಮಿಸಿದರು. ಅಲ್ಲದೆ ಅಂತಹ ಸುಂದರವಾದ ಭಾವಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಮತದಾನದ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನಗೆ ಅರ್ಹವಾದುದು.

ಈ ಬಗ್ಗೆ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಶಿವನಗೌಡ ಜಿ ಮೆಣಸಗಿ ಮಾತನಾಡಿ, 2019 ರ ಲೋಕಸಭಾ ಚುನಾವಣೆ ಯಲ್ಲಿ ನಮ್ಮ ಗ್ರಾಮ ಪಂಚಾಯತಿ ಯ ಒಂದು ಮತಗಟ್ಟೆಯಲ್ಲಿ ಹಲವು ಕಾರಣಗಳಿಂದ 58% ರಷ್ಟು ಮತದಾನವಾಗಿದ್ದು ಪ್ರಸ್ತುತ ಹಲವಾರು ಮಾರ್ಗಗಳ ಮೂಲಕ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು ಆ ದಿಸೆಯಲ್ಲಿ ಬೇರೆ ಬೇರೆ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ