ನರೇಗಾ ಯೋಜನೆ ಕೂಲಿ ಕಾರ್ಮಿಕರಿಗೆ‌ ಆಶಾಕಿರಣವಾಗಿದೆ :ಶಿವನಗೌಡ ಮೆಣಸಗಿ

ವರದಿ : ಎಸ್.ಎಂ.‌ಆರಿ

ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ವಿತರಿಸಿ, ಹೂಗುಚ್ಚ ನೀಡುವ ಮೂಲಕ ಕಾರ್ಮಿಕ ದಿನಾಚರಣೆ ಆಚರಣೆ

ಗದಗ: ನರೇಗಾ ಯೋಜನೆಯು ನಮ್ಮ ಭಾಗದ ದುಡಿಯುವ ಜನರಿಗೆ ಆಶಾಕಿರಣವಾಗಿದೆ. ಸತತ ಬರಗಾಲ ಬೀಳುವ ಸಮಯದಲ್ಲಿ ದುಡಿಯಲು ಕೆಲಸ ಇಲ್ಲದ ವೇಳೆ ನರೇಗಾ ಯೋಜನೆಯಡಿ ಯಲ್ಲಿ ಸಾಮೂಹಿಕ ಕಾಮಗಾರಿಯ ಕೆಲಸ ನೀಡುವ ಮೂಲಕ ಕೂಲಿಕಾರರಿಗೆ ಇದ್ದೂರಲ್ಲೆ ಕೆಲಸಗಳು ಸಿಗುತ್ತವೆ, ಎಂದು ಹೊಳೆ ಮಣ್ಣೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ಅಭಿಪ್ರಾಯಪಟ್ಟರು.

ಜಿಲ್ಲೆಯ ರೋಣ ತಾಲೂಕಿನ ಹೊಳೆ ಮಣ್ಣೂರ ಗ್ರಾಮದಲ್ಲಿ ಮೇ-1 ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನರೇಗಾ ಕೂಲಿಕಾರರಿಗೆ ಸಿಹಿ ವಿತರಣೆ ಮಾಡಿ ಹೂಗುಚ್ಚ ನೀಡುವ ಮೂಲಕ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊಳೆ ಮಣ್ಣೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ಮಾತನಾಡಿದ ಬರಗಾಲ ದಲ್ಲಿ ಕೆಲಸ ಕೊಡುವ ಎಕೈಕ ಯೋಜನೆ ಅಂದರೆ ಅದು ನರೇಗಾ, ಈ ಯೋಜನೆ ಮೂಲಕ ಬಡ ಜನರ,ದಿನ ದಲಿತರನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡವ ಸಲುವಾಗಿ 2005 ರಲ್ಲಿ ಜಾರಿಗೆ ತರಲಾಯಿತು ಎಂದರು. ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ದಣಿವಾರಿಸಿಕೊಳ್ಳಲು ನೆರಳಿನ ವ್ಯವಸ್ಥೆ ಮಾಡುವುದು ನರೇಗಾ ಯೋಜನೆಯಲ್ಲಿದೆ.
ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸುವ ದಿನ ಇದಾಗಿದ್ದು. ಸಾಕಷ್ಟು ಕಾರ್ಮಿಕರ ಹೋರಾಟಗಾರರ ಶ್ರಮದ ಫಲದಿಂದ ಇಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ಕಾರ್ಮಿಕರಿಗೆ ಅಧಿಕ ಸೌಲಭ್ಯಗಳು ಸಿಗುವಂತ್ತಾಗಿವೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಕೂಲಿಕಾರರು ಸಂಭ್ರಮಿಸಬೇಕೆಂದು ತಿಳಿಸಿದರು.

ಕಾಯಕ ಬಂಧುಗಳು ಹೂ ಗುಚ್ಛ ನೀಡಿ ಕಾರ್ಮಿಕ ದಿನಾಚರಣೆಯ ಶುಭಾಶಯ ಕೋರಿದರು ಕಾರ್ಯಕ್ರಮದಲ್ಲಿ ಹೊಳೆಮಣ್ಣೂರ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ, ನರೇಗಾ ಸಿಬ್ಬಂದಿ ವರ್ಗ ಮತ್ತು ಕೂಲಿಕಾರರು ಭಾಗವಹಿಸಿದ್ದರು…

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ