ಅಪಾರ ಜನಸ್ತೋಮದೊಂದಿಗೆ ಬಿಜೆಪಿ ಅಭ್ಯರ್ಥಿ ರೋಡ್ ಶೋ

ವರದಿ : ಸಿಕಂದರ ಎಂ. ‌ಆರಿ
ಕ್ರಾಂತಿ ವಾಣಿ ವಾರ್ತೆ

ಗದಗ : ರಾಜ್ಯದಲ್ಲಿ ದಿ‌ನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗುತ್ತಿರುವುದನ್ನು  ಮನಗೊಂಡ ಮತದಾರರು ದೇಶ ಮತ್ತು ರಾಜ್ಯದಲ್ಲಿ ಸುಭದ್ರ ವ್ಯವಸ್ಥೆಯನ್ನು ಜಾರಿಗೊಳಿಸಲು ಮತ್ತೊಮ್ಮೆ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಲು ರಾಜ್ಯದ ಜನತೆ ತುದಿಗಾಲಲ್ಲಿ ನಿಂತಿದ್ದಾರೆ. ರಾಜ್ಯದ ಲೋಕಸಭೆಯ ೨೮ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಮುಂಡರಗಿ ಪಟ್ಟಣದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಬಸವರಾಜ ಬೊಮ್ಮಾಯಿ‌ ಪರ ರೋಡ್ ಶೋ ಹಾಗೂ ಮತಯಾಚನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಯೋಜನೆಗಳು ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಮೋದಿಯವರಂತಹ ದಕ್ಷ, ಪ್ರಾಮಾಣಿಕ ಪ್ರಧಾನಿಯನ್ನು ಕಾಣಲು ಸಾಧ್ಯವಿಲ್ಲ. ರಾಷ್ಟ್ರದ ಹಿತಕ್ಕಾಗಿ ಪ್ರತಿನಿತ್ಯ 20 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಪ್ರಧಾನಿ ಎಂದರೆ ಅದು ಮೋದಿ. ಆದರೆ ಮೋದಿಯವರ ಜನಪ್ರಿಯತೆ ಕಾಂಗ್ರೆಸ್‌ ಪಕ್ಷದ ವಿಜಯಕ್ಕೆ ಅಡ್ಡಿಯಾಗುತ್ತದೆ.
ಆದ್ದರಿಂದಲೇ ಯಾವುದೇ ಆರೋಪ ಇಲ್ಲದಿದ್ದರೂ ಪ್ರಧಾನಿ ವಿರುದ್ದ ಸುಳ್ಳು ಆರೋಪ ಮಾಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ರಾಷ್ಟ್ರವನ್ನಾಳಿದ ಪ್ರಧಾನಿ ಮೋದಿ ಹಾಗೂ ಅವರ ಸಂಪುಟದ ಸಚಿವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಇಂತಹ ಜನಪ್ರಿಯತೆಯನ್ನು ಹೊಂದಿದ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ದೃಢ ನಿರ್ಧಾರವನ್ನು ಮತದಾರರು ಮಾಡಿದ್ದಾರೆ ಎಂದರು.

ಹಾವೇರಿ-ಗದಗ ಮತಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ಮೋದಿ ಅಲೆ‌ ಇದೆ. ಅಲ್ಲದೇ, ನಾನು ಮುಖ್ಯಮಂತ್ರಿಯಾಗಿದ್ದ, ಅವಧಿಯಲ್ಲಿ ಈ ಭಾಗದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ನನ್ನ ಗೆಲುವಿನ‌ ಶ್ರೀರಕ್ಷೆಯಾಗಿವೆ ಎಂದರು.

ಮುಂಡರಗಿಯಲ್ಲಿ ಮುಗಿಲು ಮುಟ್ಟಿದ ಜೈಕಾರ, ಕೇಂದ್ರದಲ್ಲಿ ಮತ್ತೊಮ್ಮೆ ಬರಲಿದೆ ಮೋದಿ ಸರ್ಕಾರ ಎಂದು ಜೈ ಘೋಷಣೆ ಕೂಗಿದರು.‌

ಈ ಸಂದರ್ಭದಲ್ಲಿ ಸಂಸದ  ಶಿವಕುಮಾರ್ ಉದಾಸಿ, ಶಾಸಕ ಚಂದ್ರು ಲಮಾಣಿ, ಮಾಜಿ ಸಚಿವ ಶ್ರೀ ಕಳಕಪ್ಪ ಬಂಡಿ,  ಹೇಮಗಿರೇಶ ಹಾವಿನಾಳ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ