ಕಮಲ ಬಿಟ್ಟು ಕೈ ಹಿಡಿದ ಪಟ್ಟಣ ಪಂಚಾಯಿತಿ ಪಕ್ಷೇತ್ರ ಸದಸ್ಯ

ವರದಿ : ಎಸ್.ಎಂ. ಆರಿ

ಕ್ರಾಂತಿ ವಾಣಿ ವಾರ್ತೆ

ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಜೇಂದ್ರಗಡ ತಾಲೂಕಿನ
ನರೇಗಲ್ಲ ಪಟ್ಟಣ ಪಂಚಾಯಿತಿಯ ವಾರ್ಡ ನಂ. ೧ರ ಪಕ್ಷೇತ್ರ ಸದಸ್ಯ,(ವಕೀಲರು) ರಾಚಯ್ಯ ಮಾಲಗಿತ್ತಿಮಠ ಬಿಜೆಪಿಯ ದುರಾಡಳಿತದಿಂದ ಬೇಸತ್ತು ರೋಣ ಶಾಸಕ ಜಿ.ಎಸ್. ಪಾಟೀಲ ನೇತೃತ್ವದಲ್ಲಿ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸರ್ಪಡೆಯಾಗಿದ್ದಾರೆ.

ಹಿನ್ನಲೆ :
ನರೇಗಲ್ಲ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ. ೧ರ ಕೋಚಲಾಪೂರದಿಂದ ಪಕ್ಷೇತ್ರ ಅಭ್ಯರ್ಥಿಯಾಗಿ ಪಟ್ಟಣ ಪಂಚಾಯತಿ ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರು. ನಂತರ ಹಲವು ದಿನಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದ್ದರು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರು ತಮ್ಮ ವಯಕ್ತಿಕ ವಿಚಾರ ಮತ್ತು ವಾರ್ಡಿನ ಅಭಿವೃದ್ಧಿಗಾಗಿ ಕೆಲವು ಕಾರ್ಯಕರ್ತರೊಂದಿಗೆ ಮತ್ತು ಸ್ನೇಹಿತರೊಂದಿಗೆ ಬಿಜೆಪಿಯ ಕಲಮದ ಬಾವುಟವನ್ನು ಹಾರಿಸಿದ್ದರು.‌ ಆದರೆ, ಬಿಜೆಪಿ ಪಕ್ಷದಲ್ಲಿ ಇವರನ್ನು ಕಡೆಗಣಿಸಿರುವುದರಿಂದ ಮತ್ತು ಬಿಜೆಪಿ ಸ್ಥಳೀಯ ನಾಯಕರು ಅಭಿವೃದ್ಧಿಗೆ ಸಹಕಾರ ನೀಡದಿರುವುದು ಹಾಗೂ ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ರವಿವಾರ ಕೋಚಲಾಪೂರ ಗ್ರಾಮದಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ ನೇತೃತ್ವದಲ್ಲಿದಲ್ಲಿ‌ ಮತ್ತೆ ಮರಳಿ ಗೂಡಿಗೆ ಸೇರ್ಪಡೆಯಾಗಿದ್ದಾರೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ.

ಪಕ್ಷೇತ್ರ ಸದಸ್ಯ(ವಕೀಲರು)
ರಾಚಯ್ಯ ಮಾಮಲಗಿತ್ತಮಠ ಇವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ರೋಣ ಶಾಸಕ ಜಿ.ಎಸ್.‌ಪಾಟೀಲ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಹಲವಾರು ಘಟಾನುಘಟಿ ಮಾಜಿ ಸಚಿವರು, ಶಾಸಕ ಸೇರಿದಂತೆ ನಾಯಕರು ರಾಜ್ಯದಲ್ಲಿ ಜನ ಪರ ಕಾಳಜಿ ಹೊಂದಿರುವ ಮತ್ತು ಅಭಿವೃದ್ಧಿಯ ಪರ ಯೋಜನೆಗಳನ್ನು ರೂಪಿಸುತ್ತಿರುವ ಸಿದ್ಧರಾಮಯ್ಯ ನವರ ಮತ್ತು ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನಮ್ಮ‌ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದರಂದ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ ಎಂದರು.

ಮುಂಬರುವ ದಿನ‌ ಮಾನಗಳಲ್ಲಿ
ನರೇಗಲ್ಲ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ೧೭ ವಾರ್ಡಗಳು ಸೇರಿದಂತೆ ರೋಣ ಮತಕ್ಷೇತ್ರ ಪ್ರತಿಯೊಂದು ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಅವಶ್ಯವಿರು ಮೂಲಭೂತ ಸೌಲಭ್ಯಗಳನ್ನು ‌ಸೇರಿದಂತೆ ಕ್ಷೇತ್ರದ ಜನತೆಗೆ‌ ಅನುಕೂಲವಾಗುವ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಕ್ಕೆ ಪ್ರಮಾಣಿಕ ಪ್ರಯತ್ನ ಮಾಡುವ ಮೂಲಕ ಕ್ಷೇತ್ರದ ಮತದಾರರ ಋಣವನ್ನು ತೀರಿಸಲು ಮುಂದಾಗುತ್ತೇನೆ. ಸದ್ಯ ಲೋಕಸಭಾ ಚುನಾವಣೆ ನಡೆದಿರುವುದರಿಂದ ನಮ್ಮ ಲೋಕಸಭಾ ಕ್ಷೇತ್ರವಾದ ಹಾವೇರಿ-ಗದಗಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಆನಂದ್ ಗಡ್ಡದೇವರಮಠ ಇವರನ್ನು ನಮ್ಮ ಕಾಂಗ್ರೆಸ್ ಕಾರ್ಯಕರ್ತರಯ ಮತ್ತು ಎಲ್ಲಾ ನಾಯಕರು ತಮ್ಮ ತಮ್ಮ ಹಳ್ಳಿಗಳಲ್ಲಿ ಮತ್ತು ವಾರ್ಡಗಳಲ್ಲಿ ಪ್ರಮಾಣಿಕವಾಗಿ ಶ್ರಮವಹಿಸಿ ಗಡ್ಡದೇವರಮಠ ಅವರ ಗೆಲುವಿಗೆ ಸಹಕಾರ ನೀಡಲು ಮುಂದಾಗಬೇಕು ಎಂದರು.

ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿಯ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸುಳ್ಳು ಭರವಸೆಗಳನ್ನು ಹೇಳುವ ಮೂಲಕ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳದೆ ಕೈಯಲ್ಲಿ ಚೊಂಬುಕೊಟ್ಟಿದ್ದಾರೆ.‌ ಅಲ್ಲದೇ, ನಮ್ಮ ಹಾವೇರಿ ಲೋಕಸಭಾ ಕ್ಷೇತ್ರದ ಸತತವಾಗಿ ಮೂರು ಬಾರಿ ‌ಆಯ್ಕೆಯಾಗಿರುವ ಶಿವಕುಮಾರ ಉದಾಸಿ ಅವರ ದುರಾಡಳಿತಯಿಂದ ಮತಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಇನ್ನೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರೋಣ ಮತಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಅವರು ಸದ್ಯ ಮೋದಿ ಅವರನ್ನು ನೋಡಿ ನನಗೆ ಮತ ಹಾಕಿ‌ ಎಂದು ನಮ್ಮ‌ ಕ್ಷೇತ್ರಕ್ಕೆ ಬಂದಿದ್ದಾರೆ. ಇವರು ಮತ ಕೇಳಲು ಯಾವುದೇ ನೈತಿಕತೆ ಇಲ್ಲ. ಆದ್ದರಿಂದ ಎಲ್ಲಾ ಮತದಾರರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಜಿಲ್ಲೆಯವರಾದ ಆನಂದ್ ಗಡ್ಡದೇವರಮಠ ಇವರನ್ನು ಬೆಂಬಲಿಸುವ ಮೂಲಕ ಹಾವೇರಿ ಕ್ಷೇತ್ರದಿಂದ ಆಯ್ಕೆ ಮಾಡಿ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ದೆಹಲಿಗೆ ಕಳುಹಿಸಲು ದುಡಿಯಬೇಕಾಗಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪಕ್ಷೇತ್ರ ಸದಸ್ಯ‌(ವಕೀಲ) ರಾಚಯ್ಯ ಮಾಲಗಿತ್ತಿಮಠ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನ ಪರ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರಾಜ್ಯದ ಜನತೆಗೆ ಅನುಕೂಲ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ನವರ ಸರ್ಕಾರ ಐದು ಗ್ಯಾರಂಟಿ ಯೋಜನೆಗಳು ಬಡವ, ದಿನ ದಲಿತರ ಮತ್ತು ಶ್ರಮಿಕ ವರ್ಗದ ಜನರ ಕಲ್ಯಾಣ ಮಾಡುತ್ತಿದೆ. ಈ ಗ್ಯಾರಂಟಿ ಯೋಜನೆಗಳಿಂದ ಅನೇಕ ಬಡ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಗೃಹ ಲಕ್ಷ್ಮೀ ಯೋಜನೆ, ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನ ಭಾಗ್ಯ,ಯುವ ನಿಧಿ ಯೋಜನೆಗಳು ಪ್ರತಿಯೊಬ್ಬ ನಾಗರಿಕರ ಕಲ್ಯಾಣಕ್ಕೆ ಅನುಕೂಲವಾಗಿವೆ. ಅಲ್ಲದೇ, ರೋಣ ಮತಕ್ಷೇತ್ರದ ಶಾಸಕರಾದ ಜಿ.ಎಸ್.‌ ಪಾಟೀಲ ಅವರು ಕ್ರೇತ್ರದ ಅಭಿವೃದ್ಧಿಗೆ ಹೆಚ್ಚಿನ ಒಲವು ನೀಡುತ್ತಾರೆ. ಆದ್ದರಿಂದ ನಾನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ.‌ ಕಾಂಗ್ರೆಸ್ ಪಕ್ಷಕ್ಕೆ ನಾನು ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಅಭಿವೃದ್ಧಿಗೆ ಮತ್ತು ನನ್ನ ವಾರ್ಡಿನ ಅಭಿವೃದ್ಧಿಗೆ ಪ್ರಮಾಣಿಕವಾಗಿ‌ ಶ್ರಮಿಸುತ್ತೇನೆ‌ ಎಂದರು.

ನರೇಗಲ್ಲ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ,
ನಿವೃತ್ತ ಶಿಕ್ಷಕ ಎಂ.ಎಸ್.‌ದಡೇಸೂರಮಠ, ಕಳಕನಗೌಡ ಪಾಟೀಲ, ಅಲ್ಲಾಭಕ್ಷಿ ನದಾಫ, ಪ್ರಕಾಶ ಪಾದಗಟ್ಟಿ, ಶೇಖಪ್ಪ ಕೆಂಗಾರ, ನಿಂಗನಗೌಡ ಲಕ್ಕನಗೌಡ್ರ, ಎ.ಆರ್. ಮಲ್ಲನಗೌಡ್ರ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರು.‌

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ