ಕ್ರಾಂತಿ ವಾಣಿ ವಾರ್ತೆ
ಗದಗ : ಜನ ಸಾಮಾನ್ಯರಿಗೆ ಸೂಕ್ತ ರಕ್ಷಣೆಯನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಹಲವು ಮಾರ್ಪಾಡುಗಳೊಂದಿಗೆ ಹೊಸದಾಗಿ ಜಾರಿಗೆ ತರಲಾಗುತ್ತಿರುವ ಅಪರಾಧಿಕ ಕಾಯಿದೆಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದು ಅತ್ಯವಶ್ಯಕವಾಗಿದೆ ಮತ್ತು ಎಲ್ಲರ ಜವಾಬ್ದಾರಿಯಾಗಿದೆ ಎಂದು ಗದಗ ಎಸ್. ಪಿ .ಬಾಬಸಾಬ ನೇಮಗೌಡ ಹೇಳಿದರು.
ಶಹರದ ಕೆ.ಎಲ್.ಇ ಸಂಸ್ಥೆಯ ಎಸ.ಎ. ಮಾನ್ವಿ ಕಾನೂನು ಮಹಾವಿದ್ಯಾಲಯ ಮತ್ತು ಗದಗ ಜಿಲ್ಲಾ ಪೋಲೀಸ್ ಇಲಾಖೆಯ ಸಹಯೋಗದಲ್ಲಿ ಗುರುವಾರ ಜೆ.ಟಿ. ಕಾಲೇಜಿನ ಸಭಾಂಗಣದಲ್ಲಿ ನಡೆದ ಪೋಲೀಸ್ ಸಿಬ್ಬಂದಿಗಳಿಗೆ ಹೊಸ ಅಪರಾಧಿಕ ಕಾನೂನುಗಳ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನ ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯವಾದಿ ಆರ್.ಎಂ.ಮಲ್ಲಿಕಾರ್ಜುನ ಮಾತನಾಡಿ, ಭಾರತೀಯ ಸುರಕ್ಷಾ ಸಂಹಿತೆಯಲ್ಲಿನ ಬದಲಾವಣೆಯ ಪಕ್ಷಿನೋಟದೊಂದಿಗೆ ಬಂಧನ ಮತ್ತು ಜಾಮೀನುಗಳ ಪ್ರಕ್ರೀಯೆಗಳ ಕುರಿತಾಗಿ ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದ ಪ್ರಥಮ ತಾಂತ್ರಿಕ ಗೋಷ್ಠಿಯಲ್ಲಿ ನ್ಯಾಯವಾದಿ ಸಿ.ಎನ್ ರಾಚಯ್ಯನವರ ಮಾತನಾಡಿ, ಭಾರತೀಯ ನ್ಯಾಯ ಸಂಹಿತೆಯಲ್ಲಿನ ಹೊಸ ಅಪರಾಧಗಳ ಕುರಿತಾಗಿ ಮಾಹಿತಿ ಒದಗಿಸಿದರು.
ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಡಾ. ವಿಜಯ ಮುರದಂಡೆ ಮಾತನಾಡಿ, ಭಾರತೀಯ ಸಾಕ್ಷ ಅಧಿನಿಯಮದಲ್ಲಿಯ ಬದಲಾವಣೆಗಳ ಕುರಿತು ವಿವರಿಸಿದರು.
ಕಾರ್ಯಾಗಾರದಲ್ಲಿ ಹೆಚ್ಚುವರಿ ಪೋಲೀಸ ವರಿಷ್ಢಾಧಿಕಾರಿ ಸಂಕದ ಮುಖ್ಯ ಅತಿಥಿಗಳಾಗಿ, ಅತಿಥಿಗಳಾಗಿ ಮಹಾವಿದ್ಯಾಲಯದ ಸ್ಥಾನಿಕ ಮಂಡಳಿ ಸದಸ್ಯರಾದ ಎಸ್,ಎಫ್. ಹಾದಿಮನಿ, ಬಿ.ಜಿ.ಶೆಲ್ಲಿಕೇರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಚೈತ್ರಾ ಗೌಡರ ಪ್ರಾರ್ಥಿಸಿದರು, ಎಸ್ ಎ ಮಾನ್ವಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಜೈ ಹನುಮಾನ ಹೆಚ್. ಕೆ. ಸ್ವಾಗತಿಸಿ, ಪರಿಚಯಿಸಿದರು. ಸಹಾಯಕ ಪ್ರಾದ್ಯಾಪಕರಾದ ಎಸ್ ಟಿ ಮೂರಶಿಳ್ಳಿನ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಸಹಾಯಕ ಪ್ರಾದ್ಯಾಪಕರಾದ ಶ್ರೀ. ಶರತಕುಮಾರ ದರಬಾರೆ ನಡಿಸಿಕೊಟ್ಟರು.ಜೆ ಟಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪಿ.ಜಿ. ಪಾಟೀಲ ಸಮಾರೋಪ ಭಾಷಣ ಮಾಡಿದರು. ಸಹಾಯಕ ಪ್ರಾದ್ಯಾಪಕರಾದ ಡಾ. ಶ್ರೀನಿವಾಸ ಪಾಲಕೊಂಡ ವಂದಿಸಿದರು. ನೂರಫಾತೀಮಾ ಅಕ್ಕಿ ಕಾರ್ಯಕ್ರಮ ನಿರೂಪಿಸಿದರು ಕಾರ್ಯಾಗಾರದಲ್ಲಿ ೨೦೦ ಕ್ಕೂ ಹೆಚ್ಚು ಪೋಲೀಸ ಸಿಬ್ಬಂದಿವರ್ಗದವರು ಮಾಹಿತಿ ಪಡೆದುಕೊಂಡರು. ಸಹಾಯಕ ಪ್ರಾದ್ಯಾಪಕರಾದ ಡಾ. ಜ್ಯೋತಿ. ಸಿ.ವಿ ಮತ್ತು ಮಹಾವಿದ್ಯಾಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಜರಿದ್ದರು