ವರದಿ: ಎನ್.ಎನ್.
ಕನ್ನಡಪ್ರಭ ವಾರ್ತೆ
ಸುರಪುರ: ಘನತ್ಯಾಜ್ಯ ನಿರ್ವಹಣೆ ನಗರಸಭೆ ಜತೆಗೆ ಸಮುದಾಯ ಕೈಜೋಡಿಸದಾಗ ಮಾತ್ರ ಸಮರ್ಪಕವಾಗಿ ನಡೆಯಲು ಸಾಧ್ಯ. ತಂಬಾಕು ಸೇವನೆಯಿಂದ ಹಲವಾರು ರೋಗಗಳಿಗೆ ತುತ್ತಾಗುತ್ತೇನೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಮಾರುತಿ ಕೆ. ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ‘ಘನತ್ಯಾಜ್ಯ ನಿರ್ವಹಣೆ’ ಹಾಗೂ ವಿಶ್ವ ತಂಬಾಕು ನಿಷೇಧ ದಿನಚಾರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನಿನ ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಘನ ತ್ಯಾಜ್ಯ ವಿಲೇವಾರಿಯನ್ನು ಸರಕಾರಿ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಮನೆಯ ಕಸವನ್ನು ತಂದು ಬೀದಿಯಲ್ಲಿ ಹಾಕದೆ ಕಸದಬುಟ್ಟಿಗೆ ಹಾಕಿ ಕಸಮುಕ್ತವಾಗಿ ನಗರವನ್ನಾಗಿ ಮಾಡಬೇಕು ಎಂದರು.
ಮಹಾನಗರಗಳಲ್ಲಿ ದಿನಕ್ಕೆ ೧೧ ರಿಂದ ೧೬ ಟನ್ ಕಸ ಉತ್ಪತ್ತಿಯಾದರೆ ಸುರಪುರದಲ್ಲಿ ದಿನಕ್ಕೆ ೨ರಿಂದ ೩ ಟನ್ ಕಸ ಉತ್ಪತ್ತಿಯಾಗುತ್ತದೆ. ಕಸವನ್ನು ಗೊಬ್ಬರವಾಗಿ ಮಾರ್ಪಡಿಸಿ ಕೃಷಿಗೆ ಬಳಸಬೇಕು. ತಂಬಾಕು ಸೇವೆನಿಂದ ೬ ಲಕ್ಷ ಬಿಲಿಯನ್ ಜನ ಸಾವನ್ನಪ್ಪುತ್ತಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮತ್ತು ಗುಟ್ಕಾ ಸೇವಿಸಿದರೆ ಕೋಟ್ಪಾದಡಿ ದಂಡ ವಿಧಿಸಬೇಕು ಎಂದು ತಿಳಿಸಿದರು.
ವಡೆಗೇರಿಯ ದಂತ ವೈದ್ಯೆ ಭವಾನಿ ಮಾತನಾಡಿ, ವಿಶ್ವದಲ್ಲಿ ೧೩೮ ಕೋಟಿ ಜನ ಧೂಮಪಾನ ಮಾಡುತ್ತಾರೆ. ಭಾರತದಲ್ಲಿ ೨೮.೭ ಕೋಟಿ ಜನ ಸಿಗರೇಟ್ ಸೇದುತ್ತಾರೆ. ಪ್ರತಿ ಸೆಕೆಂಡಿಗೆ ೬ ಜನ ಸಾವನ್ನಪ್ಪುತ್ತಿದ್ದಾರೆ. ಸಿಗರೇಟಿನಲ್ಲಿರುವ ನಿಕೋಟಿನ್ ಮನುಷ್ಯನ ಮೆದಳಿನಲ್ಲಿ ಆಹ್ಲಾದಕರ ಮತ್ತು ನೀಡುತ್ತದೆ. ಇದರಿಂದ ರಕ್ತನಾಳಗಳು, ರಕ್ತ ಕಣಗಳು ಹೆಪ್ಪುಗಟ್ಟುತ್ತವೆ. ಹೃದಯಾಘಾತ, ರಕ್ತದೊತ್ತಡಕ್ಕೆ ಒಳಗಾಗುತ್ತಾರೆ. ತಂಬಾಕು ಸೇವನೆಯಿಂದ ೨೮ ರೀತಿಯ ಕ್ಯಾನ್ಸರ್ ರೋಗಗಳು ಬರುತ್ತವೆ. ಆದ್ದರಿಂದ ಆರೋಗ್ಯಕರ ಜೀವನಕ್ಕೆ ತಂಬಾಕು ಸೇವನೆ ತ್ಯಜಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪೌರಾಯುಕ್ತ ಮಂಜುನಾಥ, ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಮಾತನಾಡಿದರು. ಪರಿಸರ ಅಭಿಯಂತರ ಹರೀಶ ಸಜ್ಜನ್ ಅವರು ಘನತ್ಯಾಜ್ಯ ನಿರ್ವಹಣೆ’ ಮೇಲೆ ಕೇಂದ್ರೀಕರಿಸಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.
ಹೆಚ್ಚುವರಿ ನ್ಯಾಯಾಧೀಶರಾದ ಬಸವರಾಜ, ದಂತ ವೈದ್ಯ ಡಾ. ಹರ್ಷವರ್ಧನ್, ಸಹಾಯಕ ಸರಕಾರಿ ಅಭಿಯೋಜಕರಾದ ಮರೆಪ್ಪ ಹೊಸಮನಿ, ಸುರೇಶ ಪಾಟೀಲ್, ವಕೀಲರಾದ ನಂದಕುಮಾರ ಪಿ ಕನ್ನಳ್ಳಿ, ಎಂ.ಟಿ. ಮಂಗಿಹಾಳ, ಯಲ್ಲಪ್ಪ ಹುಲಿಕಲ್, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ ್ಣಗೇರಾ, ಆರೋಗ್ಯ ನಿರೀಕ್ಷಕ ಹಣಮಂತ ಯಾದವ, ಕಂದಾಯ ನಿರೀಕ್ಷಕ ಸಲೀಮ್ ಮಾಲಿಕ್, ಕಂದಾಯ ಅಧಿಕಾರಿ ವೆಂಕಟೇಶ ಸೇರಿದಂತೆ ಇತರರಿದ್ದರು. ದುರ್ಗಪ್ಪ ನಾಯಕ ನಿರೂಪಿಸಿದರು. ಎಸ್‌ಡಿಎ ಸಂಗಮ್ಮ ವಂದಿಸಿದರು.