ಭಾವೈಕ್ಯತೆಯ ಸಂಕೇತ ರಹಿಮಾನ ಶಾವಲಿ ದರ್ಗಾದ ಉರುಸ್

ಕ್ರಾಂತಿ ವಾಣಿ ವಾರ್ತೆ

ವರದಿ‌: ಸಿಕಂದರ ಎಂ. ಆರಿ

ಗದಗ : ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಹಜರತ್ ರಹಿಮಾನ ಶಾವಲಿ ದರ್ಗಾದ ಉರುಸ್ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು, ಇಲ್ಲಿಯ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಂದಾಗಿ ಉರುಸ್ ಆಚರಣೆ ಮಾಡುತ್ತಿದ್ದು, ಇದು ಭಾವ್ಯಕ್ಯತೆಯ ಸಂಕೇತದ ಉರುಸ್ ಆಗಿದೆ.

ಮೂರು ದಿನಗಳ ಕಾಲ ನಡೆಯುವ ಉರುಸ್ ಕಾರ್ಯಕ್ರಮಕ್ಕೆ ಕೋಚಲಾಪೂರ ಹಾಗೂ ನರೇಗಲ್ಲ ಹಿಂದೂಗಳು ಮತ್ತು ಮುಸ್ಲಿಂರು ಯಾವುದೆ ಬೇಧ ಭಾವವಿಲ್ಲದೆ ಒಂದಾಗಿ ನೂರಾರು ವರ್ಷಗಳಿಂದ ಅಚರಿಸುತ್ತ ಬಂದಿದ್ದಾರೆ. ಇದೊಂದು ಐತಿಹಾಸಿಕ ಮತ್ತು ಮಾದರಿ ಉರುಸ್ ಆಗಿದೆ.

ಹಿಂದೂ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕರು ತಮ್ಮ ಮನೆಗಳಿಂದ ದರ್ಗಾವರೆಗೆ ದೀಡ ನಮಸ್ಕಾರ ಸೇವೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ದೀಡ ನಮಸ್ಕಾರ ಹಾಕಿದ ಮಹಿಳೆಯರು ಮತ್ತು ಮಕ್ಕಳು ದರ್ಗಾದ ಧರ್ಮಾಧಿಕಾರಿಯಾದ ಹಜರತ್ ಮಂಜೂರ ಹುಸೇನ ಶಾವಲಿಯವರ ಕಾಲಿಗೆ ನಮಸ್ಕಾರ ಮಾಡುವ ಸನ್ನಿವೇಶಗಳನ್ನು ಕೂಡಾ ಇಲ್ಲಿ ಕಾಣಬಹುದಾಗಿದೆ. ಮುಸ್ಲಿಂ ಹೆಣ್ಣು ಮಕ್ಕಳಂತೆ ಹಿಂದೂ ಪುರುಷ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಉರುಸ್ ಕಾರ್ಯಕ್ರಮದಲ್ಲಿ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಕೈಯಲ್ಲಿ ಸಕ್ಕರೆ ಮತ್ತು ಮನೆಯಲ್ಲಿ ಮಾಡಿದ ಹೋಳಿಗೆ, ಮಾದಲಿ ಹಾಗೂ ಇನ್ನೀತರ ಸಿಹಿ ಪದಾರ್ಥದ ನೈವೇದ್ಯವನ್ನು ತೆಗೆದುಕೊಂಡು ಹೋಗಿ ಅರ್ಪಣೆ ಮಾಡಿ ಬರುತ್ತಾರೆ. ಇನ್ನೂ ಕೆಲವರು ಹತ್ತಾರು ಕೆ.ಜಿಯಷ್ಟು ಸಕ್ಕರೆಯನ್ನು ದರ್ಗಾಕ್ಕೆ ಸಲ್ಲಿಸುತ್ತಾರೆ. ಹಿಂದೂಗಳು ಕೂಡಾ ಇಲ್ಲಿಯ ದರ್ಗಾಕ್ಕೆ ಚಾದರ್ ಗಳನ್ನು ಅರ್ಪಣೆ ಮಾಡಿ ತಮ್ಮ ಹರಕೆಗಳನ್ನು ಪೂರೈಸುತ್ತಾರೆ. ಉರುಸ್ ಆಚರಣೆ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರಮುಖರು ಕೂಡಿಕೊಂಡು ಪಟ್ಟಿಯನ್ನು ಸಂಗ್ರಹಿಸುತ್ತಾರೆ.

ಸಡಗರ‌ ಸಂಭ್ರಮದಿಂದ ಲಕ್ಷ್ಮವ್ವ ದೇವಿ ಮೆರವಣಿಗೆ : ನಿನ್ನೆ ಅಂದರೆ, ಶನಿವಾರ ಹಜರತ್ ರಹಿಮಾನ ಶಾವಲಿ ದರ್ಗಾದಿಂದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ,
ಕೋಲಾಟ ಮತ್ತು ಡೋಳ್ಳಿ ಕುಣಿತ, ಭಜನೆ ಮತ್ತು ಮಹಿಳೆಯರು ಆರತಿಯೊಂದಿಗೆ ಸಮೀಪದ ಕೋಚಲಾಪೂರ ಗ್ರಾಮಕ್ಕೆ ತೆರಳಿ ಗ್ರಾಮದ ಲಕ್ಷ್ಮವ್ವ ದೇವಿಯನ್ನು ಪೂಜಾ ಕಾರ್ಯಕ್ರಮಗಳನ್ನು ಕೈಗೊಂಡು ಅಲ್ಲಿ ಊಡಿ ತುಂಬುವ ಸಮಾರಂಭವನ್ನು ನಡೆಸಿ, ನೇರವೇರಿದ ಭಕ್ತರಿಗೆ ಗ್ರಾಮದ ಹಿಂದೂ- ಮುಸ್ಲಿಂ ಸಮುದಾಯದವರು ಸೇರಿಕೊಂಡು ತಯಾರಿಸಿದ ಅನ್ನ ಪ್ರಸಾದವನ್ನು ಕೈಗೊಳ್ಳುತ್ತಾರೆ. ಆದರೆ, ಈ ಗ್ರಾಮದಲ್ಲಿ ಇವತ್ತಿಗೂ ಸರ್ವಧರ್ಮದ ಭಕ್ತರು ನೆಲದ ಮೇಲೆ ಪಂಥೀಯ ರೀತಿಯಲ್ಲಿ ಕುಳಿತುಕೊಂಡು ಊಟಕ್ಕೆ ಕುಳಿತುಕೊಂಡು ಭೋಜನ ಮಾಡುತ್ತಾರೆ. ಎಲ್ಲಾ ಭಕ್ತರು ಭೋಜನ ಮುಗಿದ ನಂತರ ಮತ್ತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಿ ಕೋಚಲಾಪೂರ ಗ್ರಾಮದಿಂದ ನರೇಗಲ್ಲ ಪಟ್ಟಣದ ದರ್ಗಾಕ್ಕೆ ಲಕ್ಷ್ಮವ್ಚ ದೇವಿಯನ್ನು ಅದ್ಧೂರಿ ಮೆರವಣಿಗೆಯ ಮೂಲಕ ದರ್ಗಾಕ್ಕೆ ಕರೆದುಕೊಂಡು ಬಂದ ನಂತರ ದರ್ಗಾದಲ್ಲಿ ಗಂಧದ ಸಮಾರಂಭವನ್ನು ನೆರವೇರಿಸುವ ಪದ್ಧತಿ ಇಂದಿಗೂ ಜೀವಂತ ಇದೆ. ಈ ಗಂಧದ ಸಮಾರಂಭದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಪಾಲ್ಗೊಳ್ಳುವುದು ವಿಶೇಷವಾಗಿದೆ.‌

ದರ್ಗಾದಲ್ಲಿ‌ ರವಿವಾರ : ಬೆಳಗ್ಗೆ ಹಿಂದೂ ಮತ್ತು‌ ಮುಸ್ಲಿಂ ಬಾಂಧವರು ದೀಡ ನಮಸ್ಕರ ಹಾಕುವ ದೃಶ್ಯಗಳು ಕಂಡು ಬಂತು.‌ ನಂತರ ದರ್ಗಾದ ಹಜರತ್ ಮಂಜೂರ ಹುಸೇವ ಶಾವಲಿ ದರ್ಗಾಕ್ಕೆ ಆಗಮಿಸಿದ ನಂತರ ಭಕ್ತರು ಉರುಸಗೆ ಬಂದ ಸಾಧು- ಸಂತರಿಗೆ ದಾನ, ಧರ್ಮವನ್ನು ಕೈಗೊಂಡರು. ನಂತರ ನರೇಗಲ್ಲ, ಕೋಚಲಾಪೂರ, ಮಲ್ಲಾಪೂರ, ದ್ಯಾಂಪೂರ, ತೋಟಗಂಟಿ, ಅಬ್ಬಿಗೇರಿ, ಜಕ್ಕಲಿ, ಅಡ್ನೂರ, ಕೊಪ್ಪಳ, ಗದಗ, ಹಂಚಿನಾಳ, ಕೋಟುಮಚಗಿ, ಬಂಡಿಹಾಳ, ತೊಂಡಿಹಾಳ, ಹಾಲಕೆರೆ, ಮಾರನಬಸರಿ, ಬೂದಿಹಾಳ, ಹೊಸಪೇಟೆ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ಧಾರವಾಡ, ನವಲಗುಂದ, ರೋಣ ಸೇರಿಸಂತೆ ಸುತ್ತಮುತ್ತಲಿ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು‌ ಆಗಮಿಸಿ ಸಕ್ಕರೆ ನೀಡಿ ತಮ್ಮ ಹರಕೆಯನ್ನು ಪೂರೈಸಿಕೊಂಡರು. ಸಂಜೆ ಐದು‌ ಗಂಟೆಗೆ ದರ್ಗಾದಿಂದ ಪ್ರಾರಂಭಗೊಂಡ ಮೆರವಣಿಗೆಯು ವೀರಣ್ಣನ ಪಾದಗಟ್ಟಿ, ಗಣೇಶ ದೇವಸ್ಥಾನ, ದ್ಯಾಮವ್ವನ ದೇವಸ್ಥಾನ, ಗೌಡ್ರ ಪರಸ, ಪಟ್ಟಣ ಪಂಚಾಯಿತಿ, ಹೊಸ್ ನಿಲ್ದಾಣಕ್ಕೆ ಬಂದು ತಾಯಿ ಲಕ್ಷ್ಮವ್ವನನ್ನು ಮರಳಿ ಕೋಚಲಾಪೂರ ಗ್ರಾಮಕ್ಕೆ ಸಕಲ ಪೂಜಾ ಕಾರ್ಯಗಳನ್ನು ನೆರವೇರಿಸಿ ಹಜರತ್ ಮಂಜೂರ ಹುಸೇನ ಶಾವಲಿತವರು ಬೀಳ್ಕೊಡುಗೆ ಕೈಗೊಂಡರು. ನಂತರ ಮೆರವಣಿಗೆಯುವ ಜಕ್ಕಲಿ ಕ್ರಾಸ್, ಹಳೆ ಬಸ್ ನಿಲ್ದಾಣ, ಅಂಬೇಡ್ಕರ ಸರ್ಕಲ್ ‌ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೋಲಾಟ, ಡೋಳ್ಳು ಕಣಿತ, ಭಜನೆ ಸೇರಿದಂತೆ ಮಹಿಳೆಯರು ಆರತಿಯೊಂದಿಗೆ ಅದ್ಧೂರಿಗೆ ಮೆರವಣಿಗೆಯು ದರ್ಗಾಕ್ಕೆ ತಲುಪಿತು. ಮೆರವಣಿಗೆಯಲ್ಲಿ ಭಕ್ತರು ಹಜರತ್ ರಹಿಮಾನ ಶಾವಲಿ ಕೀ ಜೈ, ಲಕ್ಷ್ಮವ್ವ ದೇವಿ ಕೀ ಜೈ ಎಂದು ಜೈ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ