ಲೋಕಾಯುಕ್ತ ಉಪನಿಬಂಧಕ ಅಮರ ನಾರಾಯಣ ಕೆ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ಕ್ರಾಂತಿ ವಾಣಿ ವಾರ್ತೆ

ಗದಗ : ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಲೋಕಾಯುಕ್ತ ಉಪನಿಬಂಧಕ ಅಮರ ನಾರಾಯಣ ಕೆ ಅವರಿಂದ ಸಾರ್ವಜನಿಕ ಅಹವಾಲು ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ಸಭೆ ಜರುಗಿತು.

ಮೊದಲನೆಯದಾಗಿ ಗದಗ ನಗರದ ನಾಗೇಶ ಕುರಡಿಕೇರಿ ಅವರು ತಮ್ಮ ಮನೆಯ ಹತ್ತಿರ ಕೈ ಮಗ್ಗ ಯಂತ್ರವು ರಾತ್ರಿಯಿಡಿ ಚಾಲತಿಯಲ್ಲಿರುವುದರಿಂದ ರಾತ್ರಿ ನೆಮ್ಮದಿಯಿಂದ ಇರಲು ತೊಂದರೆಯಾಗುತ್ತಿದೆ ಎಂದು ದೂರು ನೀಡಿದರು.ಅದಕ್ಕೆ ಲೋಕಾಯುಕ್ತ ಉಪನಿಬಂಧಕರು
ಜವಳಿ ಮತ್ತು ಕೈ ಮಗ್ಗ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ನಿಯಮದನ್ವಯ ರಾತ್ರಿ ಎಲ್ಲಿಯವರರಗೆ ಯಂತ್ರ ಚಾಲಾಯಿಸಬಹುದು ಅಲ್ಲಿಯವರಗೆ ಮಾತ್ರ ಅವಕಾಶ ಕಲ್ಪಿಸಿ ಎಂದು ಸೂಚಿಸಿದರು.

ಎರಡನೇಯದಾಗಿ ಗದಗ ತಾಲೂಕಿನ ಬಸಾಪೂರ ಗ್ರಾಮ ಹನುಮಂತ ವಡ್ಡರ ಅವರ ಮನೆ ಸುತ್ತಮುತ್ತ ಕಲ್ಲು ಒಡೆದು ಅಕ್ರಮವಾಗಿ ಗಣಿಗಾರಿಕೆ ಮಾಡುವುದಿರಿಂದ ಅಲ್ಲಿರುವ ಜನರಿಗೆ ತೊಂದರೆ ಯಾಗುತ್ತಿದೆ ಈ ಕುರಿತು ಅನೇಕ ಬಾರಿ ಪೊಲೀಸ್ ರಿಗೆ ದೂರು ನೀಡಿದರು ಯಾವುದೇ ಕ್ರಮ ತೆಗೆದು ಕೊಂಡಿಲ್ಲ ಎಂದು ದೂರು ನೀಡಿದರು.ಲೋಕಾಯುಕ್ತ
ಉಪನಿಬಂಧಕರು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ ತಕ್ಷಣ ಸ್ಥಳ ಪರಿಶೀಲಿಸಿ ಅಂತಹ ಅಕ್ರಮ ಗಣಿಗಾರಿಕೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದರು.

ನಂತರ ಚಂದಸಾಬ ಕುತುದುದ್ದಿನ ಮುಳಗುಂದ ಅವರು ಹಲವಾರು ಬಾರಿ ಮಾಹಿತಿ ಹಕ್ಕು ಅರ್ಜಿಯನ್ನು ಶಿರಹಟ್ಟಿ ಯ ಪಟ್ಟಣ ಪಂಚಾಯತಗೆ ನೀಡಿದ್ದು ಯಾವುದೇ ರೀತಿಯ ಪ್ರತಿಕ್ರಿಯೆ ಮಾಡಿರುವುದಿಲ್ಲ ಎಂದು ದೂರು ನೀಡಿದರು ಅದಕ್ಕೆ ಉಪನಿಬಂಧಕರು ಈ ವಿಷಯವು ಮಾಹಿತಿ ಹಕ್ಕಿನ ಅಯೋಗಕ್ಕೆ ಸಂಬಂಧಿಸಿದ್ದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು ಆದರು ಸರಿಯಾದ ಮಾಹಿತಿ ದೊರೆಯದಿದ್ದರೆ ಮೇಲ್ಮನವಿ ಹೋಗಲು ದೂರುದಾರನಿಗೆ ತಿಳಿಸಿದರು.

ನಂತರ ಗದಗ ನಗರದ 35 ನೇ ವಾರ್ಡಿನ ವಿಶ್ವೇಶ್ವರಯ್ಯ ನಗರದ ಕಾಶೀನಾಥ ಬೀಳಗಿಯವರು ತಮ್ಮ ವಾರ್ಡನಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಾದ ರಸ್ತೆ ,ಬೀದಿದೀಪ,ಚರಂಡಿ ವ್ಯವಸ್ಥೆ ಕಲ್ಪಸಲು ಹಲವಾರು ಬಾರಿ ನಗರಸಭೆಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರು ನೀಡಿದರು.ನಗರಸಭೆಯ ಪೌರಾಯುಕ್ತರಿಗೆ ದೂರನ್ನು ಗಂಭಿರವಾಗಿ ತೆಗೆದುಕೊಂಡು ಆದಷ್ಟು ಬೇಗ ಮೂಲಭೂತ ಸೌಕರ್ಯಗಳನ್ನು ಕಲ್ಪಸಬೇಕೆಂದು ಸೂಚಿಸಿದರು.

ಹರ್ಲಾಪುರ ಗ್ರಾಮದ ಶಿವಾನಂದ ಪಟ್ಟೇದ ಅವರು ತಮ್ಮ ಗ್ರಾಮದಲ್ಲಿ ನಿರ್ಮಾಣವಾದ ವಸತಿ ನಿಲಯವು ಸರಿಯಾಗಿ ಕ್ರಿಯಾಯೋಜನೆ ಹಾಗೇ ಕಾಮಗಾರಿ ನಡೆದಿಲ್ಲ ಎಂದು ಆರ್.ಡಿ.ಪಿ.ಆರ್ ಇಲಾಖೆಯ ಮೇಲೆ ದೂರು ನೀಡಿದರು,ಅದಕ್ಕೆ ಉಪನಿಬಂಧಕರು ಕಾಮಗಾರಿಯನ್ನು ಪರೀಶಿಲಿಸಿ ಪ್ರಾಥಮಿಕ ವರದಿ ನೀಡಲು ಸೂಚಿಸಿದರು.

ಹೀರೆಹಾಳ ಗ್ರಾಮದ ಶಂಕರಗೌಡ ವೀರಣ್ಣಗೌಡ ಅವರು ತಮ್ಮ ಊರಿನ ಸೊಸೈಟಿಯಲ್ಲಿ ರೈತರಿಗೆ ಸಾಲನೀಡುವಲ್ಲಿ ಅವ್ಯವಹಾರ ಮಾಡಿದ್ದು ಯಾವುದೇ ರೀತಿಯ ಖಾತೆಗಳಾಗಲ್ಲಿ,ಭದ್ರತಾ ಠೇವಣಿಗಳು ಇರುವುದಿಲ್ಲ ಎಂದು ದೂರು ನೀಡಿದರು ಅದಕ್ಕೆ ಉಪನಿಬಂಧಕರು ಸಂಬಂಧಿಸಿ ಅಧಿಕಾರಿಗಳಿಗೆ ಕೂಡಲೇ ಪರಿಶೀಲಿಸಿ ವರದಿ ನೀಡಬೇಕೆಂದು ಸೂಚಿಸಿದರು.

ಗದಗ ನಗರದ ಪ್ರಕಾಶ ಕಲ್ಮನಿ ಅವರು ಬಾಬು ಜಗಜೀವನರಾವ್ ಅಭಿವೃದ್ಧಿ ನಿಗಮದಿಂದ ಒಂದೇ ಸಮುದಾಯದವರಿಗೆ 250 ಮನೆಗಳನ್ನು ನೀಡಿದ್ದು ಉಳಿದವರಿಗೆ ನೀಡಿಲ್ಲ ಎಂದು ದೂರು ನೀಡಿದರು.ದೂರು ಆಲಿಸಿದ ಉಪನಿಬಂಧಕರು ಬಾಬು ಜಗಜೀವನರಾವ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಿಗೆ ಪ್ರಕರಣ ಬಗ್ಗೆ ಸರಿಯಾಗಿ ಪರಿಶೀಲಸಿ ವರದಿ ನೀಡಲು ಆದೇಶಿಸಿದರು.

ಈ ವೇಳೆ ಉಪಲೋಕಾಯುಕ್ತರ ಆಪ್ತಕಾರ್ಯದರ್ಶಿ ಕಿರಣ ಪಿ ಎಂ ಪಾಟೀಲ,ಉಪವಿಭಾಗಾಧಿಕಾರಿ ವೆಂಕಟೇಶ ನಾಯ್ಕ ಸೇರಿ ಇತರೆ ಅಧಿಕಾರಿಗಳು ಇದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ