ಕೊಲೆ ಪ್ರಕರಣ ದಾಖಲಿಸಲು ಒತ್ತಾಯಿಸಿ ನಾಳೆ ದಸಂಸ ಪ್ರತಿಭಟನೆ

ವರದಿ; ಎನ್.ಎನ್.
ಕ್ರಾಂತಿವಾಣಿ ವಾರ್ತೆ

ಸುರಪುರ: ಯುವಕನೊಬ್ಬ ಕನ್ಯಾಕೋಳೂರು ಸೀಮೆ ವ್ಯಾಪ್ತಿಯ ತಾಯಮ್ಮಗೋಳ ಗೋಗಿ ಅವರ ಹೊಲದಲ್ಲಿರುವ ಕೃಷಿ ಹೊಂಡದಲ್ಲಿ ಸಾವನ್ನಪ್ಪಿರುವುದು ಅನುಮಾನ ಮೂಡುವಂತಿದೆ. ಇದನ್ನು ಕೊಲೆಯೆಂಬುದಾಗಿ ಪರಿಗಣ ಸಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜುಲೈ ೭ರಂದು ಬೆಳಗ್ಗೆ ೧೦ ಗಂಟೆಗೆ ಸುರಪುರ ಉಪ ಅಧೀಕ್ಷಕ ಅರಕ್ಷಕ ಕಚೇರಿ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಘಟನೆ ಸಂಚಾಲಕ ಶಿವಲಿಂಗ ಹಸನಾಪುರ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಚಿತ್ರ: ಶಿವಲಿ

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ