ಜನರ ಸಹಕಾರೊಂದಿಗೆ ಕಾಮಗಾರಿ ಪೂರ್ಣಗೊಳಿಸಿ : ಜಿ ಎಸ್.‌ ಪಾಟೀಲ

ಕ್ರಾಂತಿ ವಾಣಿ ವಾರ್ತೆ

ವರದಿ : ಸಿಕಂದರ‌‌ ಎಂ.‌ಆರಿ

ಗದಗ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ದೇಶದೆಲ್ಲೆಡೆ ಈಗಾಗಲೇ ಅಮೃತ 2.0 ಯೋಜನೆಯಡಿಯಲ್ಲಿ ಕುಡಿಯುವ ನೀರು ವಿತರಣಾ ಜಾಲ ಅಳವಡಿಸುವ ಕಾರ್ಯಕ್ರಮ ಮೊದಲನೇಯ ಹಂತವು ಸಂಪೂರ್ಣವಾಗಿ‌ ಯಶಸ್ವಿಯಾಗಿದ್ದು, ಪ್ರಸುತ್ತವಾಗಿ ೨ ಹಂತದ ಕಾಮಗಾರಿಗಳಿಗೆ ಕ್ಷೇತ್ರದಲ್ಲಿ ಚಾಲನೆ ನೀಡಲಾಗುತ್ತಿದೆ. ನರೇಗಲ್ಲ ಪಟ್ಟಣ ಸೇರಿದಂತೆ ಮಜರೆ ಗ್ರಾಮಗಳ‌ ಜನರ ಸಂಪೂರ್ಣ ಸಹಕಾರ ಪಡೆದುಕೊಂಡು ಗುತ್ತಿಗೆದಾರರು ಪಟ್ಟಣದ ಪ್ರತಿಯೊಂದು ಮನೆಗಳಿಗೆ ನೀರು ಪೂರೈಕೆ ಮಾಡಲು ಮುಂದಾಗಬೇಕಿದೆ. ಅಂದಾಜು ಪ್ರತಿಯಲ್ಲಿರುವ ೪.೫ ಸಾವಿರ ಮನೆಗಳನ್ನು ಹೊರೆತು ಪಡಿಸಿ ಉಳಿದ ಮನೆಗಳಿಗೂ ಈ ಯೋಜನೆಯನ್ನು ತಲುಪಿಸಲು ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಹಕಾರ ನೀಡಬೇಕಾಗಿದೆ ಎಂದು ರೋಣ ಶಾಸಕ‌, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ
ಜಿ.ಎಸ್.ಪಾಟೀಲ ಹೇಳಿದರು.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ರವಿವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಪುರಸಭೆ ರೋಣ ಮತ್ತು ಪಟ್ಟಣ ಪಂಚಾಯತಿ‌ ನರೇಗಲ್ಲ ಇವರ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನಯಡಿ ಅಂದಾಜು ಮೊತ್ತ 1551 ಲಕ್ಷ ರೂ, ವೆಚ್ಚದಲ್ಲಿ ಕುಡಿಯುವ ನೀರು ವಿತರಣಾ ಜಾಲ ಅಳವಡಿಸುವ ಕಾಮಗಾರಿಗೆ ಭೂಮಿಯನ್ನು ನೆರವೇರಿಸಿ ಅವರು ಮಾತನಾಡಿದರು.‌

ಈ ಯೋಜನೆಯು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಒಂದು ಭಾಗವಾಗಿದೆ. ಆದರೆ, ಈ ಹಿಂದಿನ ಸರ್ಕಾರ ಕೈಗೊಂಡಿರುವ ಜಲ‌ ಜೀವನ ಕಾಮಗಾರಿಯು ಜನರಿಗೆ ತೃಪ್ತಿಕರವಾಗಿಲ್ಲ. ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ‌ ಸಾಕಷ್ಟು ಲೋಪಗಳು ಕಂಡು ಬಂದಿದ್ದರಿಂದ ಆ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಯಿಂದ ಇವತ್ತಿಗೂ ಯಾವ ಹಳ್ಳಗಳಿಗೂ ೨೪*೭ನೀರು ಪೂರೈಕೆಯಾಗಿರುವುದಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿ ಪರಿಣಮಿಸಿದೆ. ಆದರೆ, ಈ ಅಮೃತ ಯೋಜನೆಯು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಆದ್ದರಿಂದ ಗುತ್ತಿಗೆದಾರರು ಯಾವುದೇ ಫಲಾಪೇಕ್ಷೆ ಇಲ್ಲದೆ ಗುಣ ಮಟ್ಟದ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಿಸಲು ಮುಂದಾಗಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.

ನರೇಗಲ್ಲ ಪಟ್ಟಣದ ಅಭಿವೃದ್ಧಿಗೆ ಈಗಾಗಲೇ ಪಟ್ಟಣ ಪಂಚಾಯಿತಿಯ ೨ ಕೋಟಿ ಅನುದಾನದಲ್ಲಿ ಟೆಂಡರ್ ಆಹ್ವಾನಿಸಲಾಗಿದ್ದು, ಯಾವ ಗುತ್ತಿಗೆದಾರರು ಪ್ರಮಾಣಿಕವಾಗಿ ಕೆಲಸ ಮಾಡಲು ಮುಂದಾಗಬೇಕೆಂದಿರುವವರು ಅಂತಹವರು ಮಾತ್ರ ಈ ಟೆಂಡರ್ ನಲ್ಲಿ‌ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಒಂದು ವೇಳೆ ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನು ಕೈಗೊಂಡು ದುಡ್ಡು ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದರೆ ಅದು ಆಗದು, ಏಕೆಂದರೆ, ಈಗಾಗಲೇ ನರೇಗಲ್ಲ‌ ಪಟ್ಟಣ ಪಟ್ಟಣ ಪಂಚಾಯಿತಿಯು ಅಭಿವೃದ್ಧಿಯಿಂದ ವಂಚಿತವಾಗಿದೆ. ಆದ್ದರಿಂದ ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ತತ್ವವನ್ನು ಅಳವಡಿಸಿಕೊಂಡು ಮುಂಬರುವ ಕಾಮಗಾರಿಗಳನ್ನು ನೆರವೇರಿಸಬೇಕಾಗಿದೆ. ಅದನ್ನು ಬಿಟ್ಟು ಕಳಪೆ ಕಾಮಗಾರಿ ಬಗ್ಗೆ ನನ್ನ ಗಮನಕ್ಕೆ ಬಂದರೆ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ. ನರೇಗಲ್ಲ ಪಟ್ಟಣದ ತೊಂಡಿಹಾಳ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಹದಗೆಟ್ಟು ಹೋಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಇದೆ. ಈ ಸಮಸ್ಯೆಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳ್ಳಿಸುವ ಮೂಲಕ ನರೇಗಲ್ಲ‌ ಪಟ್ಟಣ ಅಭಿವೃದ್ಧಿಗೆ ನನ್ನ ಸಹಕಾರ ಇದೆ.‌ ಇದಕ್ಕೆ ನರೇಗಲ್ಲ ಹಾಗೂ‌ ಮಜರೆ ಗ್ರಾಮಗಳ ಸಾರ್ವಜನಿಕರು ಸಹಕಾರ ಮತ್ತು ಸಲಹೆಗಳನ್ನು ತಿಳಿಸಲು ಮುಂದಾಗಬೇಕು ಎಂದರು.

ಪ.ಪಂ‌ ಸದಸ್ಯರಾದ ದಾವುದಲಿ‌ ಕುದರಿ, ಮುತ್ತಣ್ಣ ನೂಲ್ಕಿ, ಫಕೀರಪ್ಪ ಮಳ್ಳಿ, ಈರಪ್ಪ ಜೋಗಿ, ಫಕೀರಪ್ಪ ಬಂಬ್ಲಾಪೂರ, ನಾಮನಿರ್ದೇಶಕ ಸದಸ್ಯ ಶೇಖಪ್ಪ ಕೆಂಗಾರ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಐ.ಎಸ್. ಪಾಟೀಲ, ಡಾ. ಕೆ.ಬಿ.ಧನ್ನೂರು, ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಮೈಲಾರಪ್ಪ ಗೋಡಿ, ಎ.ಎ. ನವಲಗುಂದ, ಅಲ್ಲಾಭಕ್ಷಿ ನದಾಫ, ಮುಖ್ಯಾಧಿಕಾರಿ ರಮೇಶ ಹೊಸಮನಿ‌ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ